ನಟಿ ವಿಜಯಲಕ್ಷ್ಮಿಗೆ ಅವಕಾಶ ಕೊಡಲು ಕನ್ನಡ ನಿರ್ಮಾಪಕ ರೆಡಿ.!
Recommended Video

ನಟಿ ವಿಜಯಲಕ್ಷ್ಮಿ ಕಣ್ಣೀರಿಗೆ ಕನ್ನಡ ನಿರ್ಮಾಪಕ ಎನ್.ಎಂ.ಸುರೇಶ್ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನಟಿ ವಿಜಯಲಕ್ಷ್ಮಿ ರವರ ಕಷ್ಟದ ಕಥೆಯನ್ನು ಕೇಳಿ, ಅವರಿಗೆ ತಮ್ಮ ಸಿನಿಮಾದಲ್ಲಿ ಚಾನ್ಸ್ ಕೊಡಲು ನಿರ್ಮಾಪಕ ಎನ್.ಎಂ.ಸುರೇಶ್ ಮನಸ್ಸು ಮಾಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಸಹಿಸಲಾಗದ ಅವಮಾನವನ್ನು ಎದುರಿಸಿದ ಮೇಲೆ ನಟಿ ವಿಜಯಲಕ್ಷ್ಮಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಮರಳಿದರು. ಸುವರ್ಣ ನ್ಯೂಸ್ 24*7 ಸುದ್ದಿ ವಾಹಿನಿ ಮೂಲಕ ತಮ್ಮ ನೋವನ್ನು ಹೊರಹಾಕಿದರು ನಟಿ ವಿಜಯಲಕ್ಷ್ಮಿ. ಹಾಗೇ, ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಅವಕಾಶ ನೀಡಲು ಕೇಳಿಕೊಂಡರು.
''ನಟಿ ವಿಜಯಲಕ್ಷ್ಮಿ ತುಂಬಾ ಒಳ್ಳೆಯ ನಟಿ. ಆಕೆಯ ಕಥೆ ಕೇಳಿ ನನ್ನ ಮನಸ್ಸಿಗೆ ತುಂಬಾ ಬೇಸರ ಆಯ್ತು. ನಮ್ಮ ಚಿತ್ರರಂಗ ಆಕೆಯ ಹಿಂದೆ ಖಂಡಿತ ಇರುತ್ತದೆ'' ಎನ್ನುತ್ತಾ ನಟಿ ವಿಜಯಲಕ್ಷ್ಮಿ ರವರಿಗೆ ಮಾನಸಿಕ ಸ್ಥೈರ್ಯ ತುಂಬಿದ ನಿರ್ಮಾಪಕ ಎನ್.ಎಂ.ಸುರೇಶ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

'ಎಕ್ಸ್ ಕ್ಯೂಸ್ ಮಿ', 'ಅದ್ವೈತ', 'ಚಪ್ಪಾಳೆ', 'ತನನಂ ತನನಂ', 'ಚೆಲುವೆಯೇ ನಿನ್ನ ನೋಡಲು' ಸೇರಿದಂತೆ ಹಲವು ಚಿತ್ರಗಳಿಗೆ ನಿರ್ಮಾಪಕ ಎನ್.ಎಂ.ಸುರೇಶ್ ಬಂಡವಾಳ ಹಾಕಿದ್ದಾರೆ.
ಸದ್ಯ 'ಕುಂಭ ಮೇಳ' ಎಂಬ ಚಿತ್ರದ ನಿರ್ಮಾಪಕ ಆಗಿರುವ ಎನ್.ಎಂ.ಸುರೇಶ್ ಅದೇ ಚಿತ್ರದಲ್ಲಿ ನಟಿ ವಿಜಯಲಕ್ಷ್ಮಿ ಅವರಿಗೆ ಅವಕಾಶ ನೀಡುವುದಾಗಿ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ಮಾತು ಕೊಟ್ಟಿದ್ದಾರೆ.
ಆಡಿದ ಮಾತಿನಂತೆ ನಿರ್ಮಾಪಕ ಎನ್.ಎಂ.ಸುರೇಶ್ ನಡೆದುಕೊಂಡರೆ, 'ಕುಂಭ ಮೇಳ' ಚಿತ್ರದ ಮೂಲಕ ವಿಜಯಲಕ್ಷ್ಮಿ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದು ಗ್ಯಾರೆಂಟಿ.


Click it and Unblock the Notifications











