Breaking: ನಿರ್ಮಾಪಕ ಸೂರಪ್ಪ ಬಾಬು ಕುಟುಂಬಕ್ಕೆ ರಸ್ತೆ ಅಪಘಾತ: ಕಾರು ನಜ್ಜು ಗುಜ್ಜು!
ಕನ್ನಡದ ನಿರ್ಮಾಪಕ ಸೂರಪ್ಪ ಬಾಬು, ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಹೆಸರಾಂತ ನಿರ್ಮಾಪಕನಾಗಿ ಹೊರ ಹೊಮ್ಮಿದ್ದಾರೆ. ಸದ್ಯ ನಿರ್ಮಾಪಕ ಸೂರಪ್ಪ ಬಾಬು ಅವರ ಬಗ್ಗೆ ಆಘಾತಕಾರಿ ಸಂಗತಿಯೊಂದು ಹೊರಬಂದಿದೆ. ನಿರ್ಮಾಪಕ ಸೂರಪ್ಪ ಬಾಬು ಮತ್ತು ಕುಟುಂಬಕ್ಕೆ ರಸ್ತೆ ಅಪಘಾತ ಸಂಭವಿಸಿದೆ.
ಸೂರಪ್ಪ ಬಾಬು ಮತ್ತು ಕುಟುಂಬದವರು ದೇವಸ್ಥಾನಕ್ಕೆಂದು ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಹಿಂದಿರುಗಿದ್ದಾರೆ. ಇಂದು (ಜೂನ್ 26) ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಹಾಗಾಗಿ ದೇವಸ್ಥಾನಕ್ಕೆ ಹೋಗುವ ದಾರಿ ಮಧ್ಯದಲ್ಲೇ ಕುಟುಂಬ ಬೆಂಗಳೂರಿಗೆ ವಾಪಸ್ ಆಗಿದೆ.
ಬೆಂಗಳೂರಿನ ಆಸ್ಪತ್ರೆಗೆ ಭೇಟಿ ಕೊಟ್ಟಿರುವ ಕುಟುಂಬ, ಚಿಕಿತ್ಸೆ ಪಡೆದುಕೊಂಡಿದೆ. ಅದೃಷ್ಟವಶಾತ್ ಯಾರಿಗೂ ಹೆಚ್ಚು ಗಾಯ ಆಗಿಲ್ಲ. ಈ ಬಗ್ಗೆ ಸೂರಪ್ಪ ಬಾಬು ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿ...

ತಮಿಳುನಾಡಿನ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದರು!
ತಮಿಳುನಾಡಿನಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಸೂರಪ್ಪ ಬಾಬು ಮತ್ತು ಕುಟುಂಬ ಹೊರಟಿತ್ತು. ದೇವಸ್ಥಾನಕ್ಕೆಂದು ಇಂದು (ಜೂನ್ 26) ಬೆಳ್ಳಂಬೆಳಗ್ಗೆ ಮನೆಯಿಂದ ಹೊರಟ ಸೂರಪ್ಪ ಬಾಬು ಕುಟುಂಬ, ಪ್ರಯಾಣ ಬೆಳೆಸಿದ್ದ ವಾಹನಕ್ಕೆ ಆಕ್ಸಿಡೆಂಟ್ ಆಗಿದೆ. ಮುಂಜಾನೆ 3:00 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಹೊಸೂರು ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಆದರೆ ಸೂರಪ್ಪ ಬಾಬು ಮತ್ತು ಕುಟುಂಬಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಅದೃಷ್ಟವಶಾತ್ ಸೂರಪ್ಪಬಾಬು ಕುಟುಂಬದವರೆಲ್ಲರೂ ಕ್ಷೇಮವಾಗಿ ಹಿಂದಿರುಗಿದ್ದಾರೆ.

ಸೂರಪ್ಪ ಬಾಬು ಕಾಲಿಗೆ ಪೆಟ್ಟು!
ಅಪಘಾತ ದೊಡ್ಡ ಮಟ್ಟದಲ್ಲಿ ಆಗಿದ್ದರೂ ಕುಟುಂಬಸ್ಥರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಮುಂದೆ ಕುಳಿತಿದ್ದ ಸೂರಪ್ಪ ಬಾಬು ಅವರ ಕಾಲಿಗೆ ಕೊಂಚ ಪೆಟ್ಟು ಬಿದ್ದಿದೆ. ಹಾಗಾಗಿ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಸೂರಪ್ಪಬಾಬು ಮತ್ತು ಕುಟುಂಬ ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಯ ಸೂರಪ್ಪ ಬಾಬು ಅವರು ಕೂಡ ಆರಾಮಾಗಿ ಇದ್ದು ಅವರ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದೆ ಅಂತೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಸ್ವತಃ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿದ್ದಾರೆ.

ಸೂರಪ್ಪ ಬಾಬು ಹೇಳಿಕೆ!
"ಇಂದು (ಜೂನ್ 26) ಬೆಳಗ್ಗೆ ನಾವು ದೇವಸ್ಥಾನಕ್ಕೆಂದು ಬೆಂಗಳೂರಿನಿಂದ ಹೊರಟಿದ್ದೆವು. ಆದರೆ ರಸ್ತೆಯಲ್ಲಿ ದೊಡ್ಡ ಅಪಘಾತ ಸಂಭವಿಸಿತ್ತು. ಇನೋವಾ ಕಾರನ್ನು ಬುಕ್ ಮಾಡಿಕೊಂಡು ಹೊರಟಿದ್ದೆವು. ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ ಕುಟುಂಬಸ್ಥರು ಎಲ್ಲರೂ ಆರಾಮಾಗಿದ್ದಾರೆ. 7 ಜನ ಪ್ರಯಾಣ ಮಾಡುತ್ತಿದ್ದೆವು. ಯಾರಿಗೂ ಏನೂ ತೊಂದರೆ ಆಗಿಲ್ಲ. ನನ್ನ ಕಾಲಿಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದೇನೆ. ನಾನು ಕೂಡ ಈಗ ಆರಾಮಾಗಿ ಇದ್ದೇನೆ. ಕೆಲವು ದಿನಗಳು ಬೆಡ್ ರೆಸ್ಟ್ ತೆಗೆದುಕೊಳ್ಳಲು ಡಾಕ್ಟರ್ ಹೇಳಿದ್ದಾರೆ." ಎಂದಿದ್ದಾರೆ ಸೂರಪ್ಪ ಬಾಬು.

ನಜ್ಜು ಗುಜ್ಜಾದ ಕಾರು!
ಸದ್ಯ ಸೂರಪ್ಪಬಾಬು ಮತ್ತು ಅವರ ಕುಟುಂಬ ಅಪಾಯದಿಂದ ಪಾರಾಗಿದೆ. ದೊಡ್ಡ ಮಟ್ಟದಲ್ಲೇ ಅಪಘಾತ ಸಂಭವಿಸಿದೆ. ಕಾರಿನ ಮುಂದಿನ ಭಾಗ ಪೂರ್ತಿಯಾಗಿ ಜಜ್ಜಿ ಹೋಗಿದೆ. ಆದರೆ ಕಾರಿನಲ್ಲಿ ಇರುವವರಿಗೆ ತೊಂದರೆ ಆಗಿಲ್ಲ. ಸೂರಪ್ಪ ಬಾಬು ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಾಣ ಮಾಡಿದ್ದರು.


Click it and Unblock the Notifications











