"ಯಾರದ್ದೋ ಒಬ್ಬರ ಮಿಸ್ಟೇಕ್‌ನಿಂದ ಸಿನಿಮಾಗಳು ಜನರಿಗೆ ತಲುಪೋದ್ರಲ್ಲಿ ಹಿನ್ನಡೆಯಾಗ್ತಿದೆ"; ನಿರ್ಮಾಪಕ ಉಮಾಪತಿ

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಯಾರೋ ಕೆಲವರು ಬೇರೆ ಹೀರೊಗಳ ಸಿನಿಮಾಗಳನ್ನು ನೋಡಬೇಡಿ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವೇದಿಕೆ ಮೇಲೆ ಪ್ರತಿಕ್ರಿಯೆ ನೀಡಿದ್ದರು. ಆ ಸಂಬಂಧ ಮಾಧ್ಯಮದವರು ಹೇಳಿದ ಪ್ರಶ್ನೆಗೆ ಉಮಾಪತಿ ಮತ್ತೆ ರಿಯಾಕ್ಟ್ ಮಾಡಿದ್ದಾರೆ.

ಸಿನಿಮಾರಂಗ ಯಾರೊಬ್ಬರ ಸ್ವತ್ತೂ ಅಲ್ಲ. ಇಲ್ಲಿ ಯಜಮಾನಿಕೆ ವಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಕೆಟ್ಟ ಘಳಿಗೆ ನಡೆಯುತ್ತಿದೆ. ಆದರೆ, ಮುಂದಿನ ದಿನ ಒಳ್ಳೆಯ ಘಳಿಗೆ ಬರುತ್ತೆ ಎಂದು ಹೇಳಿದ್ದಾರೆ. ಐಪಿಎಲ್, ಚುನಾವಣೆ ಇದ್ದಿದ್ದರಿಂದ ಸಿನಿಮಾರಂಗದಲ್ಲಿ ಏಳು-ಬೀಳುಗಳು ಆಗಿವೆ. ಮುಂದಕ್ಕೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹೀಗಿದೆ.

Kannada Producer Umapathy Srinivas Gowda gave indirect replay to the Darshan fans

"ಹರಿಯುವ ನೀರನ್ನು ಯಾರ ಕೈಯಲ್ಲೂ ತಪ್ಪಿಸುವುದಕ್ಕೆ ಆಗಲ್ಲ. ಬರುವ ಸಿನಿಮಾವನ್ನು ಯಾರ ಕೈಯಲ್ಲೂ ನೋಡದೇ ಇರುವುದಕ್ಕೆ ಆಗಲ್ಲ. ಬರುವ ಸಿನಿಮಾಗಳನ್ನು ನೋಡೇ ನೋಡುತ್ತಾರೆ. ಆತರ ಯಜಮಾನಿಕೆ ವಹಿಸಬೇಕು ಅಂದಿದ್ದರೆ, ಇಲ್ಲಿವರೆಗೂ ಇಂಡಸ್ಟ್ರಿಗೆ ಬರುತ್ತಲೇ ಇರಲಿಲ್ಲ. ನೋಡಿ ಹಣೆಬರಹವನ್ನು ಕಿತ್ತುಕೊಳ್ಳಬಹುದು. ಅವಕಾಶವನ್ನು ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಮತ್ತೆ ಅವಕಾಶ ವಂಚಿತರಾದರೂ, ಹಣೆ ಬರಹವನ್ನು ಬರೆಸಿಕೊಳ್ಳುವ ಶಕ್ತಿ ಇದೂವರೆಗೂ ಇದೆ." ಎಂದಿದ್ದಾರೆ.

"ಯಾವುದೇ ಕಾರಣಕ್ಕೂ ಯಾರಿಂದನೂ ಅಷ್ಟೇ. ಸಿನಿಮಾಗಳಿಗಾಗಲಿ ಅಥವಾ ಬೆಳವಣಿಗಳನ್ನು ತಡೆಯುವ ಶಕ್ತಿ ಇಲ್ಲ. ಹಾಗೇನಾದರೂ ತಡೆಯುವ ಶಕ್ತಿಯಿದ್ದರೆ, ಒಂದಿಷ್ಟು ತಂಡ ಕಟ್ಟಿಕೊಂಡು ನಿಲ್ಲಿಸಬಹುದಾಗಿತ್ತು." ಎಂದು ನಿರ್ಮಾಪಪಕ ಉಮಾಪತಿ ಹೇಳಿದ್ದಾರೆ.

Kannada Producer Umapathy Srinivas Gowda gave indirect replay to the Darshan fans

ವೇದಿಕೆ ಮೇಲೆ ನಿರ್ಮಾಪಕ ಉಮಾಪತಿ ಹೇಳಿಕೆ ಕೊಟ್ಟಿದ್ದರು. ಯಾರೋ ನಾಲ್ಕು ಜನ ತಡೆದರೆ, ಇಂಡಸ್ಟ್ರಿ ನಿಲ್ಲುವುದಿಲ್ಲ ಎಂದಿದ್ದರು. ಆ ಬಗ್ಗೆ ಪ್ರತಿಕ್ರಿಯೆ ಹೇಳಿದ್ದರು. ಅದಕ್ಕೆ ನಿರ್ಮಾಪಕ ಉಮಾಪತಿ ಕೊಟ್ಟ ಹೇಳಿಕೆ ಹೀಗಿತ್ತು. "ಮಾತಾಡೋರು ಎಲ್ಲರೂ ಮಾತಾಡುತ್ತಾರೆ. ಅದಕ್ಕೆ ನಾವು ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಬಾರದು. ನಿಮಗೆ ಗೊತ್ತಿದೆ. ಯಾರಿಂದಲೂ ಯಾರ ಜೀವನನೂ ನಡೆಯುವುದಿಲ್ಲ. ಅವರವರ ಪ್ರಯತ್ನದಿಂದ ಅವರ ಜೀವನ ನಡೆಯುತ್ತೆ. ಹಾಗೆಲ್ಲ ಮಾಡುವ ಹಾಗಿದ್ದಿದ್ದರೆ, ಒಂದು ಸಿನಿಮಾ ಗೆಲ್ಲಿಸುವುದು ಬಿಡುವುದು ಒಂದು ತಂಡ ತೀರ್ಮಾನ ಮಾಡುತ್ತೆ ಅನ್ನುವ ಹಾಗಿದ್ದರೆ, ಎಲ್ಲರೂ ಸಿನಿಮಾವನ್ನು ಥಿಯೇಟರ್‌ಗೆ ರಿಲೀಸ್ ಮಾಡುತ್ತಲೇ ಇರಲಿಲ್ಲ. ಯಾರದ್ದೋ ಒಂದು ಮನೆಯಲ್ಲಿ ಕೂತು ರಿಲೀಸ್ ಮಾಡಿರೋರು. ಯಾರು ಹೇಳಿದ್ದಾರೋ ಬಿಡಿ ಅದನ್ನೆಲ್ಲ ಭಗವಂತ ನೋಡಿಕೊಳ್ಳುತ್ತಾನೆ." ಎಂದಿದ್ದಾರೆ.

"ವರ್ಷಕ್ಕೆ ಕನ್ನಡ ಚಿತ್ರರಂಗದಲ್ಲಿ 300 ರಿಂದ 400 ಸಿನಿಮಾಗಳು ತಯಾರಾಗುತ್ತವೆ. ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಗೆದ್ದು ದುಡ್ಡು ಮಾಡುತ್ತವೆ. ಕಾರಣಾಂತರದಿಂದ ಯಾರದ್ದೋ ಒಬ್ಬರ ಮಿಸ್ಟೇಕ್‌ನಿಂದ ಸಿನಿಮಾಗಳು ಜನರಿಗೆ ತಲುಪುವುದರಲ್ಲಿ ಹಿನ್ನಡೆಯಾಗುತ್ತಿದೆ. ಯಾರೇ ಆದರೂ ಅಷ್ಟೇ ಪ್ರಯತ್ನ ಮೊಟಕುಗೊಳಿಸಬಾರದು. ಪ್ರಯತ್ನ ಮುಂದುವರೆಸುತ್ತಲೇ ಇರಬೇಕು." ಎಂದು ಉಮಾಪತಿ ಸಲಹೆ ನೀಡಿದ್ದಾರೆ.

More from Filmibeat

English summary
Producer Umapathy Srinivas Gowda indirect replay to the Darshan fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X