For Quick Alerts
  ALLOW NOTIFICATIONS  
  For Daily Alerts

  ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬಲ್ಲಿರಾ?

  |

  ಇಂದು ( ನವೆಂಬರ್ 1 ) ಕನ್ನಡಿಗರ ನೆಚ್ಚಿನ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇನ್ನು ಕನ್ನಡ ರಾಜ್ಯೋತ್ಸವವೆಂದರೆ ಸಾಮಾಜಿಕ ಜಾಲತಾಣದಲ್ಲಿ ಕವಿ, ಸಾಹಿತಿಗಳು ಹಾಗೂ ಚಿತ್ರ ನಟರ ಫೋಟೊಗಳೇ ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲಿಯೂ ಡಾ. ರಾಜ್‌ಕುಮಾರ್ ಫೋಟೊಗಳಿಲ್ಲದೇ, ಹಾಡುಗಳಿಲ್ಲದೇ ಕನ್ನಡ ರಾಜ್ಯೋತ್ಸವ ನಡೆದದ್ದನ್ನು ಬಹುಶಃ ನಾವುಗಳಾರೂ ಕಂಡಿಲ್ಲ ಎಂದರೆ ತಪ್ಪಾಗಲಾರದು.

  ಇನ್ನು ಕನ್ನಡಿಗರು ಅಷ್ಟರಮಟ್ಟಿಗೆ ಕನ್ನಡ ನಟರನ್ನು ಗೌರವಿಸಿ ಹೆಮ್ಮೆಯ ಕನ್ನಡ ರಾಜ್ಯೋತ್ಸವದಂದು ಅವರನ್ನು ನೆನೆದು ಅವರ ಫೋಟೊಗಳನ್ನು ಮೆರವಣಿಗೆ ಮಾಡಲು ಬಲವಾದ ಕಾರಣವೂ ಇದೆ. ಯಾವ ನಟರು ತೆರೆ ಮೇಲೆ ಮಾತ್ರವಲ್ಲದೇ ತೆರೆ ಹಿಂದೆಯೂ ಕನ್ನಡದ ಪರ ಹೋರಾಡಿ ಕನ್ನಡಿಗರ ಪರ ನಿಂತಿದ್ದಾರೋ ಅಂಥ ನಟರು ಇಂದಿಗೂ ಸಹ ಕನ್ನಡಿಗರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

  ಕನ್ನಡ ಚಲನಚಿತ್ರರಂಗದಿಂದಲೂ ಕನ್ನಡ ಭಾಷೆ ರಾಜ್ಯದಾಚೆಗೂ ಪಸರಿಸಿದೆ ಎನ್ನಬಹುದು. ರಾಜ್ ಕುಮಾರ್ ಹಾಡುಗಳನ್ನು ಹಲವಾರು ಬಾಲಿವುಡ್ ಮಂದಿ ಗುನುಗಿದ್ದನ್ನು ಕಂಡಿದ್ದೇವೆ, ಇತ್ತೀಚೆಗೆ ಕನ್ನಡ ಚಿತ್ರಗಳ ಬಗ್ಗೆ ಪರಭಾಷಿಗರು ಮಾತನಾಡಿಕೊಳ್ಳುವುದನ್ನು ಕಂಡಿದ್ದೇವೆ. ಹೀಗೆ ಕನ್ನಡಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಕನ್ನಡ ಚಿತ್ರರಂಗದ ಬಗ್ಗೆ ನೀವೆಲ್ಲಾ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದೀರ ಎಂಬುದನ್ನು ಈ ಪುಟ್ಟ ರಸಪ್ರಶ್ನೆಯ ಮೂಲಕ ತಿಳಿಯೋಣ. ಕೆಳಕಂಡ ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕ್ಲಿಕ್ ಮಾಡಿ..


  English summary
  Kannada Rajyotsava quiz: Can you answer these 10 questions related to kannada cinema? Take a look
  Wednesday, November 2, 2022, 9:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X