For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್

  |

  ಕನ್ನಡ ರಾಪರ್ ಮತ್ತು 'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮತ್ತೋರ್ವ ಕನ್ನಡ ರಾಪರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  'ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್ ಜೊತೆಗೆ ಹಸೆಮಣೆ ಏರಿದ್ದಾರೆ. ಬ್ರಾಹ್ಮಣ ಮತ್ತು ತಮಿಳು ಅಯ್ಯರ್ ಸಂಪ್ರದಾಯದಂತೆ ವಿವಾಹ ಮಹೋತ್ಸವ ಇತ್ತೀಚೆಗಷ್ಟೇ ಜರುಗಿದೆ.

  ಡಾಲಿ ಧನಂಜಯ್, ಕೆ.ಎಂ.ಚೈತನ್ಯ, ಪ್ರಥಮ್ ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಅಲೋಕ್-ನಿಶಾ ಆರತಕ್ಷತೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದ್ದಾರೆ.

  ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?

  ಹಾಗ್ನೋಡಿದ್ರೆ, ಅಲೋಕ್ ಮತ್ತು ನಿಶಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅಲೋಕ್ ಮತ್ತು ನಿಶಾ ನಟರಾಜನ್ ಈಗ ಹೊಸ ಜೀವನ ಆರಂಭಿಸಿದ್ದಾರೆ. ಎನ್.ಜಿ.ಓ ಒಂದರಲ್ಲಿ ನಿಶಾ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಕನ್ನಡ ರಾಪರ್ ಆಗಿ ಗುರುತಿಸಿಕೊಂಡಿರುವ ಅಲೋಕ್ ಬಾಬು 'ಜೋಶ್', 'ಮಂದಹಾಸ', 'ನಿನ್ನಿಂದಲೇ', 'ಸಿದ್ದಾರ್ಥ', 'ಗಜಕೇಸರಿ', 'ತಾರಕ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  English summary
  Kannada Rapper Allok got married to his girlfriend Nisha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X