19 ವರ್ಷದ ನಿವೇದಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 30ರ ಚಂದನ್ ಶೆಟ್ಟಿ
Recommended Video
ಸ್ಯಾಂಡಲ್ ವುಡ್ ನ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಭಾಗಿಯಾಗಿದ್ದಾರೆ.
ನಿಶ್ಚಿತಾರ್ಥ ಸಂಭ್ರಮದಲ್ಲಿ ನಿವೇದಿತಾ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ನಿವೇದಿತಾ ಮನೆಯಿಂದ ಖಾಸಗಿ ಹೋಟೆಲ್ ಗೆ ತೆರಳುವಾಗ ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಒಂದೇ ರೀತಿಯ ನೀಲಿ ಮತ್ತು ಬಿಳಿ ಬಣ್ಣದ ಕಾಸ್ಟ್ಯೂಮ್ ಧರಿಸಿರುವ ನಿವೇದಿತಾ ಮತ್ತು ಚಂದನ್ ಫೋಟೋ ಕೂಡ ಅಭಿಮಾನಿಗಳು ಶೇರ್ ಮಾಡಿದ್ದಾರೆ.
ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡಗೆ ಚಂದನ್ ಪ್ರಪೋಸ್ ಮಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣ ಆಗಿತ್ತು. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ವಿಷಯಕ್ಕೆ ಬಳಸಿಕೊಂಡ ಬಿಗ್ ಬಾಸ್ ಜೋಡಿಗೆ ವಿರೋಧ ಎದುರಿಸಬೇಕಾಗಿತ್ತು. ತಿಳಿಯದೆ ಈ ರೀತಿ ಮಾಡಿದೆ ಎಂದು ಚಂದನ್ ಶೆಟ್ಟಿ ಕ್ಷಮೆ ಹೇಳಿದ ನಂತರ ಆ ವಿವಾದ ತಣ್ಣಗೆ ಆಯ್ತು.

ನಿವೇದಿತಾ ಮತ್ತು ಚಂದನ್ ನಡುವೆ ಸುಮಾರು 11 ವರ್ಷದ ವಯಸ್ಸಿನ ಅಂತರವಿದೆ. ನಿವೇದಿತಾಗೆ ಇನ್ನು 19 ವರ್ಷ. ಚಂದನ್ ಗೆ 30 ವರ್ಷ. ಇಬ್ಬರ ವಯಸ್ಸಿನ ಅಂತರವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅದೇನೆ ಇದ್ರು ಪ್ರೀತಿಗೆ ವಯಸ್ಸು, ಜಾತಿ, ಅಂತಸ್ತಿನ ಅಂತರವಿರುವುದಿಲ್ಲ ಎನ್ನುವುದು ಅನೇಕ ಬಾರಿ ಸಾಬೀತಾಗುತ್ತಲೆ ಇದೆ.

ಅಂದಹಾಗೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಆಗಿದ್ದರು. ಇಲ್ಲೇ ಮೊದಲ ಬಾರಿಗೆ ಈ ಇಬ್ಬರು ಭೇಟಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಪ್ರೇಮಿಗಳಾದರು. ಇವರ ಪ್ರೀತಿಗೆ ಇಬ್ಬರ ಮನೆಯವರು ಒಪ್ಪಿ ಈಗ ಹಿರಿಯರ ಸಮ್ಮುಕದಲ್ಲಿ ನಿಶ್ಚಿತಾರ್ಥ ನೆರವೇರಿದೆ.


Click it and Unblock the Notifications











