ಹೌದು, ನಾವು ಇಬ್ಬರೂ ದೂರವಾಗಲು ಆ ಮೂರನೇ ವ್ಯಕ್ತಿಯೇ ಕಾರಣ.. ಆದರೆ - ಚಂದನ್ ಶೆಟ್ಟಿ...!

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಲು ಕೂಡ ಈ ಮೂರನೇ ವ್ಯಕ್ತಿಯೇ ಕಾರಣ ಅನ್ನುವುದು ಅನೇಕರ ಅಭಿಪ್ರಾಯ. ಹೀಗಿರುವಾಗ ಚಂದನ್ ಶೆಟ್ಟಿ ಕೂಡ ತಮ್ಮ ಮದುವೆ ಮುರಿದು ಬೀಳಲು ಮೂರನೇ ವ್ಯಕ್ತಿ ಕಾರಣ ಅಂದಿದ್ದಾರೆ. ಆದರೆ..ಆ ಮೂರನೇ ವ್ಯಕ್ತಿಯ ವ್ಯಕ್ತಿತ್ವವನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ಹೌದು, ''ವಿಸ್ತಾರ ನ್ಯೂಸ್‌''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ನಾವಿಬ್ಬರೂ ದೂರವಾಗಲು ಆ ಮೂರನೇ ವ್ಯಕ್ತಿಯೇ ಕಾರಣ ಎಂದಿದ್ದಾರೆ. ಆದರೆ.. ಆ ಮೂರನೇ ವ್ಯಕ್ತಿ ಯಾರು ಎನ್ನುವುದು ನಮಗೂ ಗೊತ್ತಾಗಲ್ಲ ಅಂದಿದ್ದಾರೆ. ಹೌದು.. ಕುಟುಂಬ ಒಡೆಯಲು ಮೂರನೇ ವ್ಯಕ್ತಿಯೇ ಕಾರಣವಾಗುತ್ತಾರೆ. ಆದರೆ ಅವರು ಯಾರು ಎನ್ನುವುದು ಕೆಲವೊಮ್ಮೆ ನಮಗೂ ಗೊತ್ತಿರುವುದಿಲ್ಲ ಎಂದಿರುವ ಚಂದನ್ ಶೆಟ್ಟಿ, ಆ ಮೂರನೇ ವ್ಯಕ್ತಿ ನಮ್ಮೊಳಗೂ ಇರಬಹುದು ಎಂದಿದ್ದಾರೆ. ಇನ್ನೂ ಕೆಲವರು ಮುಖವಾಡ ಹಾಕಿಕೊಂಡು ಬದುಕುತ್ತಾರೆ, ಒಂದು ವಿಚಾರವನ್ನು ಕೆಲವರು ಮುಂದೆ ಒಂದು ರೀತಿ ಮಾತನಾಡುತ್ತಾರೆ. ಹಿಂದೆ ಒಂದು ರೀತಿ ಮಾತನಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಎರಡು ವ್ಯಕ್ತಿತ್ವ ಇರುತ್ತವೆ ಎಂದಿದ್ದಾರೆ ಚಂದನ್ ಶೆಟ್ಟಿ.

Kannada Rapper Chandan Shetty revealed the reason behind his divorce with Niveditha Gowda

ಇನ್ನೂ ಬದಲಾದ ಕಾಲದಲ್ಲಿ ಈಗ ಸಂಸಾರಕ್ಕೆ ಹುಳಿ ಹಿಂಡಲು ಯಾರೋ ಮೂರನೇ ವ್ಯಕ್ತಿ ಬೇಕು ಅಂತೇನು ಇಲ್ಲ.ಆ ಕೆಲಸವನ್ನ ಸಾಮಾಜಿಕ ಜಾಲತಾಣ ನಿಯತ್ತಾಗಿ ಮಾಡಿಕೊಂಡು ಬರುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಂಸಾರವನ್ನ ಹಾಳು ಮಾಡುವುದಲ್ಲದೇ, ಮಹಿಳೆಯರ ನೆಮ್ಮದಿ ಮತ್ತು ಸೆಲೆಬ್ರಿಟಿಗಳ ವ್ಯೆಯಕ್ತಿಕ ಜೀವನವನ್ನೂ ಇದೇ ಸಾಮಾಜಿಕ ಜಾಲತಾಣದ ಮೂಲಕ ಒಂದು ಬಣ ಹಾಳು ಮಾಡುತ್ತಿದೆ.

ಹೀಗಾಗಿಯೇ ಸೋಶಿಯಲ್ ಮೀಡಿಯಾಗೊಂದು ಕಾನೂನು ತರಬೇಕು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ. ಚಂದನ್ ಶೆಟ್ಟಿ ಕೂಡ ಈ ವಿಚಾರಕ್ಕೆ ಮತ್ತೊಮ್ಮೆ ತಮ್ಮ ಧ್ವನಿಗೂಡಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು ಅಂದಿದ್ದಾರೆ.

Kannada Rapper Chandan Shetty revealed the reason behind his divorce with Niveditha Gowda

ಉಳಿದಂತೆ ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ಬಳಿಕ ಮುಂದೇನು, ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿರುವ ಅವರು, ಈಗಿನ್ನೂ ಅದರಿಂದ ಹೊರಗೆ ಬಂದಿದ್ದೇನೆ, ಎರಡನೇ ಮದುವೆ ಬಗ್ಗೆ ಸದ್ಯ ಯೋಚನೆ ಮಾಡಿಲ್ಲ. ಮನಸ್ಸು ಇನ್ನೂ ತಿಳಿಯಾಗಬೇಕಿದೆ. ಅದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಯಾರನ್ನು ನಂಬುವುದು ಯಾರನ್ನು ನಂಬಬಾರದು ಎನ್ನುವ ಗೊಂದಲವಿದೆ, 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅದಾದ ಮೇಲೆ ಸಿನಿಮಾ ಅಥವಾ ಸಂಗೀತ ಯಾವ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ನಿರ್ಧರಿಸುವುದಾಗಿ ತಿಳಿಸಿದರು. ನಿವೇದಿತಾ ಗೌಡ ಎರಡನೇ ಮದುವೆಯಾದರೆ ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಚಂದನ್ ಶೆಟ್ಟಿ, ಅದಕ್ಕೂ ನನಗೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X