For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ'ಕ್ಕೆ 88ನೇ ವರ್ಷದ ಸಂಭ್ರಮ

  |

  ಮಾರ್ಚ್ 3, ಬಂತೆಂದರೆ ಕನ್ನಡ ಚಿತ್ರರಂಗದ ಪಾಲಿಗೆ ಐತಿಹಾಸಿಕ ದಿನ. ಏಕಂದ್ರೆ, ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ತೆರೆಕಂಡ ದಿನ. 1934 ಮಾರ್ಚ್ 3 ರಂದು ಕನ್ನಡದ ಮೊದಲ ವಾಕ್ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸುಮಾರು ಆರು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೀಗ 88ನೇ ವರ್ಷದ ಸಂಭ್ರಮ.

  1905 ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣ ಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲೇ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನ ಬಿಡುಗಡೆಗೊಂಡಿತ್ತು. ಇದು 170 ನಿಮಿಷದ ಚಿತ್ರವಾಗಿದ್ದು, 40 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ.

  ವೈ.ವಿ.ರಾವ್ (ಯರಗುಡಿಪಟಿ ವರದಾ ರಾವ್) ಈ ಚಿತ್ರ ನಿರ್ದೇಶಿಸಿದ್ದರು. ಆರ್.ನಾಗೇಂದ್ರರಾಯ, ಲಕ್ಷ್ಮೀಬಾಯಿ, ಸುಬ್ಬಯ್ಯನಾಯ್ಡು, ತ್ರಿಪುರಾಂಭ, ಸಿ.ಟಿ.ಶೇಷಾಚಲಮ್, ಇಂದುಬಾಲಾ ಅಂತಹ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು.

  ಬೆಳ್ಳಾವೆ ನರಹರಿಶಾಸ್ತ್ರಿ ಕಥೆ ಬರೆದು, ಸಂಭಾಷಣೆ ಸಹ ರಚಿಸಿದ್ದರು. ಆರ್.ನಾಗೇಂದ್ರರಾಯ ಮತ್ತು ನರಹರಿ ಶಾಸ್ತ್ರಿ ಸಂಗೀತ ಒದಗಿಸಿದ್ದರು. ಈ ಚಿತ್ರ ನಿರ್ಮಿಸಿದ್ದು ಎಸ್.ಚಮನ್‍ಲಾಲ್ ದುಂಗಾಜಿ.

  'ಸತಿ ಸಲೋಚನ' ಸಿನಿಮಾದ ದೃಶ್ಯವೊಂದರಲ್ಲಿ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ.

  ಗುಡ್ ನ್ಯೂಸ್ ನೊಂದಿಗೆ ಬರ್ತಿದ್ದಾರೆ ನಟ ವಿನೋದ್ ರಾಜ್ ಕುಮಾರ್ | Vinod Rajkumar | Filmibeat Kannada

  1934 ರಿಂದ ಆರಂಭವಾದ ಕನ್ನಡ ಸಿನಿಮಾದ ವಾಕ್ಚಿತ್ರ ಪರಂಪರೆ ಇಂದು ದೊಡ್ಡದಾಗಿ ಬೆಳೆದಿದೆ. ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾಗಳು ತಯಾರಾಗುತ್ತಿದೆ. ಚಿತ್ರರಂಗದಿಂದ ಸಾವಿರಾರು ರೂಪಾಯಿ ವ್ಯವಹಾರ ನಡೆಯುತ್ತಿದೆ.

  English summary
  The first Kannada talkie film 'Sati Sulochana' released on 3 March, 1934. Today is the 88th anniversary of this landmark.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X