ದಾಖಲೆ ಮೊತ್ತಕ್ಕೆ 'ಮ್ಯಾಕ್ಸ್' ಸ್ಯಾಟಲೈಟ್ ರೈಟ್ಸ್ ಮಾರಾಟ; ಇದಪ್ಪಾ ಕಿಚ್ಚನ ಕ್ರೇಜ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪದೇ ಪದೆ ಸಿನಿಮಾ ರಿಲೀಸ್ ತಡವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಲಿದೆ. ಇದೆಲ್ಲದರ ನಡುವೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಥ್ರಿಯೇಟ್ರಿಕಲ್ ರೈಟ್ಸ್ ರೀತಿಯಲ್ಲೇ ಇತ್ತೀಚೆಗೆ ದೊಡ್ಡ ಚಿತ್ರಗಳ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ನಡೀತಿದೆ. 'ಮ್ಯಾಕ್ಸ್' ಚಿತ್ರದ ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್‌ಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಪೋಸ್ಟರ್, ಟೀಸರ್ ಹಾಗೂ ಸಾಂಗ್‌ನಿಂದ ಸಿನಿಮಾ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಎರಡು ತಿಂಗಳ ಹಿಂದೆಯೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗ್ತಿದೆ. ಆದರೆ ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವುದು ಪಕ್ಕಾ ಎನ್ನಲಾಗ್ತಿದೆ.
ಡಿಸೆಂಬರ್ 27ಕ್ಕೆ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಆ ಬಗ್ಗೆ ಆದಷ್ಟು ಬೇಗ ಸ್ಪಷ್ಟನೆ ಸಿಗಲಿದೆ. ತಮಿಳು ನಿರ್ದೇಶಕ ಕಲೈಪುಲಿ ಎಸ್. ತನು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು 'ಮ್ಯಾಕ್ಸ್' ಬಳಗದಲ್ಲಿ ಇದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.
ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡ್ ಹಾಗೂ ಸುಕೃತಾ ವಾಗ್ಲೆ ಸೇರಿದಂತೆ ದೊಡ್ಡ ತಾರಾಗಣ 'ಮ್ಯಾಕ್ಸ್' ಚಿತ್ರದಲ್ಲಿದೆ. ಈಗಾಗಲೇ ಬಂದಿರುವ ಟೀಸರ್ ಹಿಟ್ ಆಗಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ. ಅರ್ಜುನ್ ಮಹಾಕ್ಷಯ್ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಮಹಾಬಲಿಪುರಂನಲ್ಲಿ ಭಾರೀ ಸೆಟ್ ನಿರ್ಮಿಸಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಜೀ ಕನ್ನಡ ಸಂಸ್ಥೆ 'ಮ್ಯಾಕ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎಂದು ಹೇಳಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬರೀ ಕನ್ನಡ ವರ್ಷನ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ವಿಕ್ರಾಂತ್ ರೋಣ' ಚಿತ್ರದ ದಾಖಲೆಯನ್ನು ಸಹ ಮುರಿದು ಸಿನಿಮಾ ಹೊಸ ದಾಖಲೆ ಬರೆದಿರುವ ಅಂದಾಜಿದೆ. ಕನ್ನಡ ಸಿನಿಮಾವೊಂದರ ಸ್ಯಾಟಲೈಟ್ ರೈಟ್ಸ್ ಅನ್ನು ಇಷ್ಟು ದೊಡ್ಡ ಮೊತ್ತಕ್ಕೆ ಕೊಂಡುಕೊಂಡಿರುವುದು ಇದೇ ಮೊದಲು ಎನ್ನಲಾಗ್ತಿದೆ. ಸಿನಿಮಾ ಓಟಿಟಿಗೆ ಬಂದ ಕೆಲವೇ ದಿನಗಳಲ್ಲಿ ಟಿವಿಗೆ ಬರಲಿದೆ.
ಸ್ಯಾಟಲೈಟ್ ರೀತಿಯಲ್ಲೇ 'ಮ್ಯಾಕ್ಸ್' ಚಿತ್ರದ ಡಿಜಿಟಲ್ ರೈಟ್ಸ್ ಕೂಡ ಭಾರೀ ಬೆಲೆಗೆ ಬಿಕರಿಯಾಗುವ ಸಾಧ್ಯತೆಯಿದೆ. ಹಾಗಾಗಿ ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನವೇ ಭರ್ಜರಿ ಬ್ಯುಸಿನೆಸ್ ಮಾಡುವ ಅಂದಾಜಿದೆ. ಮತ್ತೊಂದು ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಆ ಬಗ್ಗೆ ನಾಳೆ(ನವೆಂಬರ್ 27) ಸಂಜೆ ಮಾಹಿತಿ ಸಿಗಲಿದೆ. ಇನ್ನು ಸಾಂಗ್ ಬಗ್ಗೆ ಅಪ್‌ಡೇಟ್ ಕೊಡ್ತಿದ್ದೀರಾ? ಸಿನಿಮಾ ರಿಲೀಸ್ ಯಾವಾಗ ಹೇಳಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
'ವಿಕ್ರಾಂತ್ ರೋಣ' ನಂತರ ಸುದೀಪ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಎರಡೂವರೆ ವರ್ಷದಿಂದ ಕಿಚ್ಚನನ್ನು ತೆರೆಮೇಲೆ ನೋಡದೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. 'ಮ್ಯಾಕ್ಸ್' ಪೋಸ್ಟ್ ಪ್ರೊಡಕ್ಷನ್ ವರ್ಕ್ ತಡವಾಗುತ್ತಿದೆ. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ತಡವಾಗುತ್ತಿದೆ. ಒಟ್ಟಾರೆ ಸಿನಿಮಾ ಬೇಗ ಬರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.


Click it and Unblock the Notifications











