twitter
    For Quick Alerts
    ALLOW NOTIFICATIONS  
    For Daily Alerts

    ಕಾಶ್ಮೀರ ಜನರಿಗಾಗಿ ಅಂದಿನ ಸಿಎಂ ಬಂಗಾರಪ್ಪರನ್ನುಭೇಟಿಯಾಗಿದ್ದ ಅನಂತ್ ನಾಗ್: ಮುಂದೇನಾಯ್ತು?

    |

    'ದಿ ಕಾಶ್ಮೀರ್ ಫೈಲ್ಸ್' ಭಾರತದಲ್ಲಿ ಅತಿಯಾಗಿ ಚರ್ಚೆಯಾಗುತ್ತಿರುವ ಸಿನಿಮಾ. ಈ ಸಿನಿಮಾ ಬಗ್ಗೆ ಅದೆಷ್ಟೋ ಮಂದಿ ಹೊಗಳಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಂತೆಯೇ ಈ ಸಿನಿಮಾ ಘಟನೆಗಳು ಸತ್ಯಕ್ಕೆ ವಿರೋಧವಾಗಿದೆ ಅನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಕೇರಳ ಕಾಂಗ್ರೆಸ್ ಈ ಸಿನಿಮಾವನ್ನು ವಿರೋಧಿಸಿ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿದೆ. ಒಂದೆಡೆ ಸಿನಿಮಾ ಮೆಚ್ಚುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾ ವಿರೋಧಿಸುವವರ ಸಂಖ್ಯೆ ಏನು ಕಮ್ಮಿಯಿಲ್ಲ.

    ಕನ್ನಡದ ಹಿರಿಯ ನಟ ಅನಂತ್‌ ನಾಗ್ ಕೂಡ ಇತ್ತೀಚೆಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ್ದರು. ಆ ಸಿನಿಮಾವನ್ನು ನೋಡಿದ ಬಳಿಕ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 32 ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮನಬಿಚ್ಚಿ ಮಾತಾಡಿದ್ದಾರೆ. ತಮ್ಮ ಕಾಶ್ಮೀರಿ ಪೂರ್ವಜರ ಬಗ್ಗೆ ಮತ್ತೆ ಪುನರುಚ್ಚರಿಸಿದ್ದಾರೆ. ಕಾಶ್ಮೀರಿ ಪಂಡಿತರ ಬಗ್ಗೆ ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರನ್ನು ಭೇಟಿ ಮಾಡಿದ್ದನ್ನು ವಿವರಿಸಿದ್ದಾರೆ. ಮಾಧ್ಯಮಗಳಿಗೆ ಅನಂತ್ ನಾಗ್ ಕೊಟ್ಟ ಹೇಳಿಕೆಗಳ ವಿವರ ಇಲ್ಲಿದೆ.

    ಸಚಿವರು, ಶಾಸಕರಿಗೆ ಸಿನಿಮಾ ತೋರಿಸಲಿದ್ದಾರೆ ಸ್ಪೀಕರ್ ಕಾಗೇರಿಸಚಿವರು, ಶಾಸಕರಿಗೆ ಸಿನಿಮಾ ತೋರಿಸಲಿದ್ದಾರೆ ಸ್ಪೀಕರ್ ಕಾಗೇರಿ

    'ದಿ ಕಾಶ್ಮೀರ್ ಫೈಲ್ಸ್' ನೋಡಿ ವಿಚಲಿತನಾಗಿದ್ದೇನೆ?

    'ದಿ ಕಾಶ್ಮೀರ್ ಫೈಲ್ಸ್' ನೋಡಿ ವಿಚಲಿತನಾಗಿದ್ದೇನೆ?

    ನಿನ್ನೆ(ಮಾರ್ಚ್ 13) ಅನಂತ್ ನಾಗ್ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದೆ. ತುಂಬಾನೇ ಪರಿಣಾಮಕಾರಿಯಾಗಿದೆ. ಆ ದುರಂತ ಹೇಗೆ ನಡೀತು ಎಂದು ನೋಡಿ ನಾನು ವಿಚಲಿತನಾಗಿ ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ನಾನು ಹೇಳಲೇ ಬೇಕಿದೆ. ಆ ಸಮಯದಲ್ಲಿ ನಡೆದ ಕೆಲವು ಘಟನೆಗಳನ್ನು ಹೇಳಿಲ್ಲ. ಹೇಳಿಕೊಂಡಿಲ್ಲ ಯಾಕೆಂದರೆ, ಆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ." ಎಂದು ಅನಂತ್ ನಾಗ್ ಹೇಳಿದ್ದಾರೆ.

    'ದಿ ಕಾಶ್ಮೀರಿ ಫೈಲ್ಸ್' ನೋಡಿ ಕಣ್ಣೀರು ಎಲ್‌ ಕೆ ಅಡ್ವಾಣಿ ಕಣ್ಣೀರು ಹಾಕಿದ್ರಾ? ಇಲ್ಲಿದೆ ಅಸಲಿಯತ್ತು!'ದಿ ಕಾಶ್ಮೀರಿ ಫೈಲ್ಸ್' ನೋಡಿ ಕಣ್ಣೀರು ಎಲ್‌ ಕೆ ಅಡ್ವಾಣಿ ಕಣ್ಣೀರು ಹಾಕಿದ್ರಾ? ಇಲ್ಲಿದೆ ಅಸಲಿಯತ್ತು!

    ಕಾಶ್ಮೀರದ ಪೂರ್ವಜರ ಬಗ್ಗೆ ಆನಂತ್ ನಾಗ್ ನಂಟು

    ಕಾಶ್ಮೀರದ ಪೂರ್ವಜರ ಬಗ್ಗೆ ಆನಂತ್ ನಾಗ್ ನಂಟು

    "1989-90 ಜನವರಿ 20 ರಂದು ಈ ಘಟನೆ ನಡೆಯಿತು. ಆ ಸಂದರ್ಭದಲ್ಲಿ ಈ ಘಟನೆಯನ್ನು ಕ್ಲಿನಿಕಲ್ ಆಗಿ ನೋಡಬೇಕಿದೆ. ಕೇರಳ ಕಾಂಗ್ರೆಸ್‌ನವರು ಏನೂ ಹೇಳಿದರು ಎಂದು ಹೇಳಿದ್ದೀರಾ. ದೋಷಾರೋಪಗಳು ನಡೆಯುತ್ತಿದೆ. ನನ್ನ ಪೂರ್ವಜರು 1575ರಲ್ಲಿ ಸುಮಾರು 200 ಕುಟುಂಬದವರು ಕಾಶ್ಮೀರದಿಂದ ಹೊರಬಿದ್ದು, ಬಾಬರ್ ಬಂದಮೇಲೆ ಇಲ್ಲಿ 1526 ಅನಿಸುತ್ತೆ. ಆಯೋಧ್ಯ ರಾಮ ಮಂದಿರ ಬೀಳಿಸಿ ಅಲ್ಲಿ ಬಾಬ್ರಿ ಮಸೀದಿ ಕಟ್ಟಿ ಕಾಶ್ಮೀರದಲ್ಲಿ ಧರ್ಮಾಂಧತೆ ಶುರುವಾಯಿತು. ಅಲ್ಲಿಂದ ಅವರು ಕಾಶ್ಮೀರ ಬಿಟ್ಟು ಅದು ಹೇಗೆ ದಕ್ಷಿಣದ ಕಡೆ ಬಂದರೋ ಗೊತ್ತಿಲ್ಲ. ನಡೆದುಕೊಂಡು, ಗುಡ್ಡಗಾಡುಗಳು ಹತ್ತಿ ಇಳಿದು ಗೋವಾಗೆ ಬಂದರೆ, ಅಲ್ಲಿ ಕ್ರೈಸ್ತ ಧರ್ಮಕ್ಕೆ ಕನ್ವರ್ಷನ್ ನಡೀತಿತ್ತು. ಹೀಗಾಗಿ ಶೃಂಗೇರಿಗೆ ಬಂದಿದ್ದರು. ಕೆಳದಿ ಶಿವಪ್ಪ ನಾಯಕನ ರಾಜ್ಯಬಾರ ನಡೆಯುತ್ತಿತ್ತು. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಶಿವಪ್ಪ ನಾಯಕ ಆಳುತ್ತಿದ್ದನು. ಅಲ್ಲಿ ನಮ್ಮ ಪೂರ್ವಜಕರಿಗೆ ಆಸರೆ ನೀಡಿದರು." ಎಂದು ಪೂರ್ವಜರನ್ನು ನೆನಪಿಸಿಕೊಂಡಿದ್ದಾರೆ.

    ಅನುಪಮ್ ಖೇರ್ ಅಂದು ಹೇಳಿದ್ದೇನು?

    ಅನುಪಮ್ ಖೇರ್ ಅಂದು ಹೇಳಿದ್ದೇನು?

    " ನಾನು ಮುಂಬೈನಲ್ಲಿ ಇದ್ದಾಗ ಅಲ್ಲಿ ನಾಟಕರಂಗದಲ್ಲಿ ತೊಡಗಿಸಿಕೊಂಡಿದ್ದಾಗ, ಅನೇಕ ಕಾಶ್ಮೀರದ ಮಿತ್ರರು ಕೂಡ ಇದ್ದರು. ಅವರಲ್ಲಿ ಅನುಪಮ್ ಖೇರ್ ಕೂಡ ಇದ್ದರು. ಆಗೊಂದು ದೂರವಾಣಿ ಬಂತು. 1990, ಜನವರಿ 22 ಅಥವಾ 23 ಇರಬಹುದು. ಆ ಸಂದರ್ಭದಲ್ಲಿ ಅವರು ಹೇಳಿದರು. ನಿನ್ನ ಬಗ್ಗೆ ನನಗೆ ಗೊತ್ತಿದೆ. ನನ್ನ ಬಗ್ಗೆ ನಿನಗೆ ಗೊತ್ತಿದೆ. ಆದರೆ, ನಾವು ಭೇಟಿಯಾಗಿಲ್ಲ. ನಾವು ಬಂದು ಬೇರೆಬೇರೆ ಕಡೆ ನೆಲೆಕಂಡುಕೊಂಡಿದ್ದೇವೆ. ಆದರೆ, ಕಾಶ್ಮೀರದಲ್ಲಿ ನಮ್ಮ ಅಕ್ಕ-ತಂಗಿ, ಅಣ್ಣ-ತಮ್ಮಂದಿರು ಬೀದಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆಗ ನಾನು ಎಂಎಲ್‌ಸಿ ಆಗಿದ್ದೆ. ಏನಾದರೂ ಮಾಡಬೇಕು ಎಂದು ಹೇಳಿದರು. ಆಗ ಮತ್ತೇನೋ ಆಗಿದೆ ಎಂದುಕೊಂಡೆ. " ಎಂದು ಅನಂತ್ ನಾಗ್ ಅಂದಿನ ಫೋನ್ ಕರೆಯನ್ನು ನೆನಪಿಸಿಕೊಂಡಿದ್ದಾರೆ.

    ಚಿತ್ರೀಕರಣ ನಡೆಸದಂತೆ ನಮ್ಮ ಮೇಲೆ ಫತ್ವಾ ಹೊರಡಿಸಲಾಗಿತ್ತು: ನಿರ್ಮಾಪಕಿ ಪಲ್ಲವಿ ಜೋಶಿಚಿತ್ರೀಕರಣ ನಡೆಸದಂತೆ ನಮ್ಮ ಮೇಲೆ ಫತ್ವಾ ಹೊರಡಿಸಲಾಗಿತ್ತು: ನಿರ್ಮಾಪಕಿ ಪಲ್ಲವಿ ಜೋಶಿ

    ಬಂಗಾರಪ್ಪರನ್ನು ಭೇಟಿ ಮಾಡಿದ್ದೇಕೆ?

    ಬಂಗಾರಪ್ಪರನ್ನು ಭೇಟಿ ಮಾಡಿದ್ದೇಕೆ?

    "ನಾನು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪವನರನ್ನು ಸಂಪರ್ಕಿಸಿ, ನನ್ನ ಸ್ನೇಹಿತರು ನನ್ನ ಮುಖಾಂತರ ಸಹಾಯವನ್ನು ಕೇಳಿದ್ದಾರೆ. ಅವರ ಪರವಾಗಿ ನಾನು ಬಂದಿದ್ದೇನೆ ಎಂದು ಹೇಳಿದೆ. ಆಗ ಬಂಗಾರಪ್ಪನವರು ನಾನು ಏನು ಮಾಡಬೇಕು ಅಂತ ಬ್ಲ್ಯೂಪ್ರಿಂಟ್ ತಯಾರು ಮಾಡುತ್ತೇನೆ. ನೀವು ನಿಮ್ಮ ಸಮಾಜದವರನ್ನು ಮಾತಾಡಿಸಿ ಏನು ಮಾಡಬೇಕು ಎಂದು ಕೇಳಿ ಎಂದಿದ್ದರು. ಆಗಾಗ ಅವರು ವಿಚಾರಿಸಿದ್ದರು. ಕರಾವಳಿಯ ಬ್ಯಾಂಕ್‌ಗಳನ್ನು ಸಂಪರ್ಕಿಸಿ, ನೀವು ಸಹಾಯಕ್ಕೆ ಬರಬೇಕು ಎಂದು ಹೇಳಿದೆ. ಆಗ ಅವರು ಸಂಪರ್ಕಿಸುವುದೇ ನಿಂತು ಹೋಯಿತು. ಗೊಂದಲದಲ್ಲೇ 6 ತಿಂಗಳು ಕಳೆದು ಹೋಯಿತು. ಏನೂ ಮಾಡಲು ಸಾಧ್ಯವಾಗಿರಲಿಲ್ಲ. " ಎಂದು ಹೇಳಿದ್ದಾರೆ.

    ತಲೆ ತಗ್ಗಿಸಿ ಕೂತಿದ್ದೆ

    ತಲೆ ತಗ್ಗಿಸಿ ಕೂತಿದ್ದೆ

    "ನಿನ್ನೆ ಈ ಸಿನಿಮಾ ನೋಡಿವಾಗ ತಲೆ ತಗ್ಗಿಸಿಕೊಂಡು ಕೂತಿದ್ದೆ. 32 ವರ್ಷಗಳ ನಂತರ ಜನರಿಗೆ ಇದು ಗೊತ್ತಾಗಬೇಕಾಯಿತಲ್ಲ ಅನ್ನುವುದು ದುರಂತ. ಈಗಲಾದರೂ ಜನರಿಗೆ ಗೊತ್ತಾಯಿತಲ್ಲಾ. ಅಲ್ಲಿ ಏನೇನು ನಡೆಯಿತು ಅನ್ನುವುದನ್ನ ತಿಳಿಯಲು ನಾನು ಅನೇಕ ಕಡೆಗಳಿಂದ ಮಾಹಿತಿಯನ್ನು ಪಡೆದಿದ್ದೇನೆ. ನಾನು ಈ ಸಿನಿಮಾವನ್ನು ಕೇವಲ ಟೀಕಾತ್ಮಕವಾಗಿ ನೋಡಿಲ್ಲ. ಅದರ ಬಗ್ಗೆ ಮಾತಿಯನ್ನು ಪಡೆದುಕೊಂಡು ನೋಡಿದ್ದೇನೆ. ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ನೆಗೆಟಿವ್ ಆಗಿ ಮಾತಾಡುವುದಕ್ಕೆ ಹೋಗುವುದಿಲ್ಲ. ಇವತ್ತು ಎಲ್ಲಾ ಜನರು ಸಿನಿಮಾ ನೋಡುತ್ತಿದ್ದಾರೆ. ಜನಗೃತಿ ಉಂಟಾಗಿದೆ." ಎಂದು 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಹೇಳಿದ್ದಾರೆ.

    English summary
    Kannada senior actor Ananth Nag Reaction about controversial movie The Kashmir Files .
    Monday, March 14, 2022, 19:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X