ಕನ್ನಡದ ಹಿರಿಯ ನಟ ಅಶ್ವಥ್ ನಾರಾಯಣ ನಿಧನ!

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಸ್ಯಾಂಡಲ್ ವುಡ್ ಹಿರಿಯ ನಟ ಅಶ್ವಥ್ ನಾರಾಯಣ ಇಂದು ಕೊನೆ ಉಸಿರೆಳೆದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ವಿಧಿವಶರಾಗಿದ್ದಾರೆ. ಕನ್ನಡದ ಹಲವು ನಟರೊಂದಿಗೆ, ನಟಿಯರೊಂದಿಗೆ ವಿಶಿಷ್ಠ ನಟನೆಯ ಮೂಲಕ ಗುರ್ತಿಸಿಕೊಂಡಿದ್ದಂತವರು ನಟ ಅಶ್ವಥ್ ನಾರಾಯಣ್ ಅವರಾಗಿದ್ದರು. ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಅಶ್ವಥ್ ನಾರಾಯಣ್, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇದೀಗ ಅವರ ಬೆಂಗಳೂರಿನ ನಿವಾಸದಲ್ಲಿ ಹಿರಿಯ ನಟ ಅಶ್ವಥ್ ನಾರಾಯಣ್ ನಿಧನರಾಗಿದ್ದಾರೆ. ಈ ಮೂಲಕ ಬಾರದ ಲೋಕಕ್ಕೆ ತೆರಳಿದ್ದಾರೆ.

''ಅಂದ ಹಾಗೆ, ಕಳೆದ ಕೆಲ ದಿನಗಳ ಹಿಂದಷ್ಟೇ, ನನ್ನ ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ,'' ಎಂದು ಬೆಂಗಳೂರಿನಲ್ಲಿ ಹಿರಿಯ ನಟ ಅಶ್ವತ್ಥ್ ನಾರಾಯಣ ಆರೋಪ ಮಾಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದೂ ಅಶ್ವತ್ಥ್ ನಾರಾಯಣ ಆರೋಪಿಸಿದ್ದರು. ಕಿರಿಯ ಮಗಳು ವಸುಂಧರಾ ಹಾಗೂ ಮಗ ಉದಯ್ ಕುಮಾರ್ ವಿರುದ್ಧ ಆರೋಪ ಮಾಡಿರುವ ನಟ ಅಶ್ವತ್ಥ್ ನಾರಾಯಣ, ''ಹೆಂಡತಿಯ ಹೆಸರಲ್ಲಿ ಇದ್ದ ಜಾಗದಲ್ಲಿ ತಾನು ಮೂರು ಅಂತಸ್ಥಿನ ಮನೆ ಕಟ್ಟಿದ್ದೆ. ಆ ಮನೆಯನ್ನು ದಾನ ಪತ್ರ ಅಂತ ಮಾಡಿಸಿಕೊಂಡಿದ್ದಾರೆ. ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಳೆದ ಗುರುವಾರ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ತಮಗೆ ಸಹಾಯ ಬೇಕು,'' ಎಂದು ಕೋರಿಕೊಂಡಿದ್ದರು.

ನಟ ಅಶ್ವತ್ಥ್ ನಾರಾಯಣ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ, ಮಗ ಹಾಗೂ ಮೂರನೇ ಮಗಳ ವಿರುದ್ಧ ದೂರು ನೀಡಿದ್ದರು. ಬಸವೇಶ್ವರನಗರ ಠಾಣೆ ಹಿರಿಯರ ಸಹಾಯವಾಣಿಯಲ್ಲಿ ದೂರು ನೀಡಲಾಗಿತ್ತು. ''ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹಲ್ಲೆ ಮಾಡಿದ್ದಾರೆಂದು''ಆರೋಪಿಸಿದ್ದರು. ಎರಡನೇ ಮಗಳ ಜತೆ ಠಾಣೆಗೆ ತೆರಳಿ ಅಶ್ವತ್ಥ್ ನಾರಾಯಣ ಅವರು ದೂರು ನೀಡಿದ್ದರು.

Kannada Senior Actor Ashwath Narayan Is No More
ಆದ್ರೇ ಹಿರಿಯ ನಟ ಅಶ್ವಥ್ ನಾರಾಯಣ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕುಟುಂಬಸ್ಥರು, ಅವರನ್ನು ಸರಿಯಾಗಿಯೇ ನೋಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಅವರು ನೀಡಿರುವಂತ ದೂರು ಸತ್ಯಕ್ಕೆ ದೂರವಾಗಿರೋದಾಗು ಎಂಬುದಾಗಿ ಹೇಳಿದ್ದರು. ಹೀಗೆ ಕೌಟುಂಬಿಕ ಜಗಳ ಮೂಲಕ ಸುದ್ದಿಯಾಗಿದ್ದಂತ ಹಿರಿಯ ನಟ ಅಶ್ವಥ್ ನಾರಾಯಣ್ ಅವರು ಇಂದು ನಿಧನರಾಗಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಹಿರಿಯ ನಟ ಅಗಲಿರೋದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದಂತ ನಷ್ಟವಾಗಿದೆ.

ಕನ್ನಡದ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಶ್ವತ್ಥ್ ನಾರಾಯಣ್ ಅವರು ಡಾ.ರಾಜ್‌ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Kannada senior actor Ashwath Narayan is no more because of age related illness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X