ಹಿರಿಯ ನಟ ಬಿರಾದರ್ ಅಭಿನಯದ 500ನೇ ಸಿನಿಮಾ ರಿಲೀಸ್‌ಗೆ ರೆಡಿ: '90 ಬಿಡಿ ಮನೀಗ್ ನಡಿ'

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಹಿರಿಯ ನಟ ವೈಜನಾಥ್ ಬಿರಾದರ್. ಸಿನಿಪ್ರೇಮಿಗಳು ಇವರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಬಿರಾದರ್ ಅಂತಲೇ ಕರೆಯುತ್ತಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಬಿರಾದರ್ 500 ಸಿನಿಮಾಗಳ ಸರದಾರ. ಇದೇ ಖುಷಿಯಲ್ಲಿ ನಾಯಕನಾಗಿ ಇದೇ 500ನೇ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ '90 ಬಿಡಿ ಮನೀಗ್ ನಡಿ'.

'90 ಬಿಡಿ ಮನೀಗ್ ನಡಿ' ಟೈಟಲ್ ಇಡುವುದಕ್ಕಿಂತಲೂ ಮುನ್ನ '90 ಹೊಡಿ ಮನೀಗ್ ನಡಿ' ಎಂದು ಇಡಲಾಗಿತ್ತು. ಆದರೆ, ಸೆನ್ಸಾರ್ ಮಂಡಳಿಯಲ್ಲಿ ಈ ಸಿನಿಮಾ ಆಕ್ಷೇಪ ವ್ಯಕ್ತವಾಗಿದ್ದರಿಂದ '90 ಬಿಡಿ ಮನೀಗ್ ನಡಿ' ಎಂದು ಬದಲಾಯಿಸಲಾಗಿತ್ತು. ಈಗ ಇದೇ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

Kannada senior actor Biradars 500th movie 90 Bidi Manig Nadi is releasing soon.

ಬಿರಾದರ್ ಅಭಿನಯದ 500ನೇ ಸಿನಿಮಾ '90 ಬಿಡಿ ಮನೀಗ್ ನಡಿ' ಅವರ ಸಿನಿಕರಿಯರ್‌ಗೊಂದು ಮೈಲಿಗಲ್ಲಿ. ರಾಷ್ಟ್ರಪ್ರಶಸ್ತಿ ವಿಜೇತ ನಟ ಈ ಸಿನಿಮಾದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರತ್ನಮಾಲ ಬಾದರದಿನ್ನಿ ಈ ಸಿನಿಮಾವನ್ನು ನಿರ್ಮಾಣ‌ ಮಾಡಿದ್ದಾರೆ. ಈ ಸಿನಿಮಾವನ್ನು ಇದೇ ತಿಂಗಳ ಕೊನೆಯಲ್ಲಿ ಇಲ್ಲವೇ ಜುಲೈ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

'90 ಬಿಡಿ ಮನೀಗ್ ನಡಿ' ಸಿನಿಮಾಗೆ ಜಂಟಿಯಾಗಿ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಆಕ್ಷನ್ ಕಟ್ ಹೇಳಿದ್ದಾರೆ. "ನನ್ನ ರಂಗಭೂಮಿ ಹಾಗೂ ಸಿನಿಪಯಣಕ್ಕೆ 50 ವರ್ಷ ತುಂಬಿದೆ. ಇದು ನನ್ನ 500ನೇ ಚಿತ್ರ. ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ‌ನಿರ್ದೇಶಕರು ಈ ಸಿನಿಮಾದಲ್ಲಿ ತೋರಿಸಿದ್ದಾರೆ" ಎಂದರು ಹಿರಿಯ ನಟ ಬಿರಾದಾರ್ ತಮ್ಮ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ.

ಹಿರಿಯ ನಟ ಬಿರಾದರ್ ಜೊತೆಗೆ ಬ್ಯಾಂಕ್ ಉದ್ಯೋಗಿಯಾಗಿ ಕರಿಸುಬ್ಬು ನಟಿಸಿದ್ದಾರೆ. ಅಭಯ್, ಪ್ರೀತು ಪೂಜಾ‌, ನೀತಾ, ಆರ್ ಡಿ ಬಾಬು, ವಿವೇಕ್, ಹೊಸಕೋಟೆ ಮುರುಳಿ ಸೇರಿದಂತೆ ಹಲವರು ನಟಿಸಿದ್ದಾರೆ. ಬಿರಾದಾರ್ ಜೊತೆ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'90 ಬಿಡಿ ಮನೀಗ್ ನಡಿ' ಸಿನಿಮಾಗೆ ಇಟ್ಟಿರೊ ಟ್ಯಾಗ್ ಲೈನ್ ಕೂಡ ಜೋರಾಗಿದೆ. 'ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ' ಇದು ಹಾಸ್ಯಪ್ರಿಯರನ್ನು ಸೆಳೆಯುತ್ತಿದೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಕಾಮಿಡಿ, ಕ್ರೈಮ್ ಥ್ರಿಲ್ಲರ್ ಟಚ್ ಕೊಡಲಾಗಿದೆ.

More from Filmibeat

English summary
Kannada senior actor Biradar's 500th movie, 90 Bidi Manig Nadi, is releasing soon, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X