For Quick Alerts
  ALLOW NOTIFICATIONS  
  For Daily Alerts

  ಲೋಕನಾಥ್ ಅಂಕಲ್ ಜೊತೆ ಲೋಕಾಭಿರಾಮ ಹರಟೆ

  By Rajendra
  |
  ಓದಿದ್ದು ಎಂಜಿನಿಯರಿಂಗ್. ಆದರೆ ಆಕಸ್ಮಿಕವಾಗಿ ಅಡಿಯಿಟ್ಟದ್ದು ಮಾತ್ರ ಬಣ್ಣದ ಪ್ರಪಂಚಕ್ಕೆ. ಕೆ.ವಿ.ಅಯ್ಯರ್ ಬಳಿ ವ್ಯಾಯಾಮ ಕಲಿಯಲೆಂದು ಹೋದವರು ಕಲಿತದ್ದು ಮಾತ್ರ ಅಭಿನಯದ ವರಸೆಗಳನ್ನು, ರಂಗಭೂಮಿಯ ಬಿಗಿ ಪಟ್ಟುಗಳನ್ನು. ಜನರು ಅವರನ್ನು ಪ್ರೀತಿಯಿಂದ ಲೋಕನಾಥ್ ಅಂಕಲ್ ಎಂದು ಕರೆಯುತ್ತಾರೆ.

  ಇಂತಹ ಅವಿಸ್ಮರಣೀಯ ಕಲಾವಿದ ಲೋಕನಾಥ್ ಜೊತೆ ಮುಖಾಮುಖಿಯಾಗುವ ಸುವರ್ಣಾವಕಾಶ ಈ ಬಾರಿಯ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಚಿತ್ರರಸಿಕರಿಗೆ ಸಿಗುತ್ತಿದೆ.

  ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ತನ್ನ ವಿಭಿನ್ನ ಕಾರ್ಯಕ್ರಮದಲ್ಲಿ ಲೋಕನಾಥ್ ಅಂಕಲ್ ಅವರೊಂದಿಗೆ ಲೋಕಾಭಿರಾಮವಾಗಿ ಹರಟಬಹುದು. ಇದೇ ಶನಿವಾರ (ಅ.27) ಸಂಜೆ 5 ಗಂಟೆಗೆ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬೆಂಗಳೂರಿನಲ್ಲಿ ಕಾರ್ಯಕ್ರಮ ಇರುತ್ತದೆ.

  ಮೊದಲೇ ಸಂಪ್ರದಾಯಸ್ಥ ಕುಟುಂಬ. ನಾಟಕ, ಅಭಿನಯ, ಬಣ್ಣ ಸುಣ್ಣ ಎಂದರೆ ಮನೆಯವರ ತೀವ್ರ ವಿರೋಧ. ಈ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತ ಅವರು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಬಹಳ ಉನ್ನತಮಟ್ಟಕ್ಕೇರಿದರು. ಜನರು ಅವರನ್ನು ಪ್ರೀತಿಯಿಂದ 'ಲೋಕನಾಥ್ ಅಂಕಲ್' ಎಂದು ಕರೆದು ತಮ್ಮ ಹೃದಯದಲ್ಲಿ ಸ್ಥಾನಕೊಟ್ಟಿದ್ದಾರೆ.

  ಸಿ.ಎಚ್. ಲೊಕನಾಥ್ ಅವರು 'ಸಂಸ್ಕಾರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಬಂಗಾರದ ಪಂಜರ, ಮಿಂಚಿನ ಓಟ, ಹೊಸ ನೀರು, ಕಾಲೇಜುರಂಗ, ನಾಗರಹಾವು, ಕಥಾ ಸಂಗಮ, ಸಿಂಗಾಪೂರಿನಲ್ಲಿ ರಾಜಾ ಕುಳ್ಳ, ಮನೆ ಮನೆ ಕಥೆ...ಹೀಗೆ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ರಂಗಭೂಮಿಯಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿರುವ ಅವರು ರಕ್ತಾಕ್ಷಿ, ವಿಗಡವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಗೆಲಿಲಿಯೋ, ಡಾ.ಫಾಸ್ಟಸ್, ತನುವು ನಿನ್ನದೆ ಮನವು ನಿನ್ನದೆ, ಚಂದ್ರಹಾಸ ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾಪಾಂಡಿತ್ಯವನ್ನು ಮೆರೆದಂತಹವರು. ಇಂತಹ ಅಪ್ಪಟ ಕಲಾವಿದನೊಂದಿಗೆ ಲೋಕಾಭಿಮಾನವಾಗಿ ಹರಟೋಣ ಬನ್ನಿ. (ಒನ್ಇಂಡಿಯಾ ಕನ್ನಡ)

  English summary
  Most acclaimed Kannada films senior actor and theater artist C.H. Lokanath (People called as Uncle Lokanath) has the guest honour of Belli Hejje programme of Karnataka Film Academy held on 26th October, 2012 at 5 pm at Badami House, J.C. Road, Bangalore. He made his debut as an actor in the film Samskara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X