For Quick Alerts
  ALLOW NOTIFICATIONS  
  For Daily Alerts

  'ಮುಕ್ತ ಮುಕ್ತ' ಖ್ಯಾತಿಯ ಹಿರಿಯ ನಟ ಗುರುಮೂರ್ತಿ ಇನ್ನಿಲ್ಲ

  By Naveen
  |

  ಕನ್ನಡದ ಹಿರಿಯ ನಟ ಗುರುಮೂರ್ತಿ ನಿನ್ನೆ (ಆಗಸ್ಟ್ 18) ರಾತ್ರಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದಾಗಿ ನಗರದ ಕನಕಪುರ ರಸ್ತೆಯ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

  ಗುರುಮೂರ್ತಿ ಅವರಿಗೆ ನಿನ್ನೆ ಸಂಜೆ ಅವರ ನಿವಾಸದಲ್ಲಿ ತೀವ್ರ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂಚಿಕಿತ್ಸೆ ಫಲಕಾರಿ ಆಗದೆ ಅವರು ಸಾವನ್ನಪ್ಪಿದ್ದಾರೆ.

  ಗುರುಮೂರ್ತಿ ಅವರು ಮೂಲತಃ ತುಮಕೂರಿನ ತಿಪಟೂರಿನವರು. ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿದ ಇವರು ಗುರುಮಾಮ ಅಂತಲೇ ಜನಪ್ರಿಯರಾಗಿದ್ದರು. ಜೊತೆಗೆ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.

  ದೂರದರ್ಶನದಲ್ಲಿ ಬರುತ್ತಿದ್ದ 'ಅಡಚಣೆಗಾಗಿ ಕ್ಷಮಿಸಿ' ಧಾರಾವಾಹಿ ಸೀರಿಯಲ್‌ನಿಂದ ಸಾಕಷ್ಟು ಖ್ಯಾತಿಗಳಿಸಿದ್ದ ಇವರು 'ಮುಕ್ತ-ಮುಕ್ತ' ಧಾರವಾಹಿ, ಸೇರಿದಂತೆ ಹಲವು ಸೀರಿಯಲ್ ನಲ್ಲಿ ಅಭಿನಯಿಸಿದ್ರು. 'ಕನ್ನಡದ ಕಂಠಿ', 'ಜಗ್ಗುದಾದ' ಸೇರಿದಂತೆ 12ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

  English summary
  Kannada senior actor Gurumurthy passed away in bangaluru on August 19th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X