For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿ ಹಿರಿಯ ನಟ ವಿಶ್ವನಾಥ್: ಸಹಾಯಕ್ಕೆ ಮನವಿ

  By ಫಿಲ್ಮ್ ಡೆಸ್ಕ್
  |

  ಬಹುಭಾಷಾ ನಟ, ಕನ್ನಡದ ಹಿರಿಯ ಕಲಾವಿದ ವಿಶ್ವನಾಥ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿಶ್ವನಾಥ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದು, ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

  ವಿಶ್ವನಾಥ್, ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಪಡುವಾರಹಳ್ಳಿ ಪಾಂಡವರು' ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಂತರ 'ಚಲಿಸುವ ಮೋಡಗಳು' ಸಿನಿಮಾ ಸೇರಿದಂತೆ ಡಾ. ರಾಜ್‌ಕುಮಾರ್ ಜೊತೆ 5 ಸಿನಿಮಾಗಳಲ್ಲಿ ನಟಿಸಿ, ರಾಜ್ ಕುಮಾರ್ ರಿಂದ ಮೆಚ್ಚುಗೆ ಪಡೆದ ನಟ.

  ಕನ್ನಡ ಮಾತ್ರವಲ್ಲದೆ ತಮಿಳಿನಲ್ಲಿ ಕೆ. ಬಾಲಚಂದರ್ ಅವರ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ನಾಗಾರ್ಜುನ ಅಭಿನಯದ 'ಶಿವ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

  ಮಧುಮೇಹದಿಂದ ಬಳಲುತ್ತಿರುವ ವಿಶ್ವನಾಥ್ ಕಾಲಿಗೆ ಶಸ್ತ್ರ ಚಿಕಿತ್ಸೆ ಕೂಡ ಆಗಿದೆ. ವಿಜಯನಗರದ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆಗೆ ಸಾಕಷ್ಟು ಹಣದ ಅಗತ್ಯತೆಯಿದ್ದು ಕನ್ನಡ ಚಿತ್ರರಂಗದ ನಟರು ಹಾಗೂ ಕನ್ನಡದ ಪ್ರೇಕ್ಷಕರಲ್ಲಿ ನೆರವು ನೀಡುವಂತೆ ಕೋರಿದ್ದಾರೆ.

  ಕೆ.ವಿಶ್ವನಾಥ್‌ ಅವರ ಖಾತೆ ವಿವರ- ಕೆ.ವಿಶ್ವನಾಥ್ a/c no: 0442010062749, IFSC code: 0000440

  English summary
  Kannada Actor K.Viswanath is in poor condition. He seeks for helps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X