ಹಿರಿಯ ನಟ, ಅಂಕಲ್ ಲೋಕನಾಥ್ ವಿಧಿವಶ
Recommended Video

ಕನ್ನಡದ ಹಿರಿಯ ನಟ ಲೋಕನಾಥ್ ವಿಧಿವಶ | FILMIBEAT KANNADA
ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಇಂದು ಬೆಳಗ್ಗಿನ ಜಾವ ವಿಧಿವಶರಾಗಿದ್ದಾರೆ. 1927ರಲ್ಲಿ ಜನಿಸಿದ್ದ ಅವರಿಗೆ 91 ವರ್ಷ ವಯಸ್ಸಾಗಿತ್ತು.
ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಾದ ಇವರು, ಐದು ದಶಕಗಳ ಕಾಲ ಕಲಾ ಸೇವೆ ಮಾಡಿದ್ದಾರೆ. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1000ಕ್ಕೂ ಹೆಚ್ಚು ಬಾರಿ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ಹೊಂದಿದ್ದಾರೆ.
'ನಾಗರಹಾವು', 'ಮನೆ ಮನೆ ಕಥೆ' 'ಮಿಂಚಿನ ಓಟ', 'ಭೂತಯ್ಯನ ಮಗ ಅಯ್ಯು', 'ಸಿಂಗಾಪುರದಲ್ಲಿ ರಾಜ ಕುಳ್ಳ' ಪ್ರಮುಖವಾಗಿವೆ.

ಅಂದಹಾಗೆ, ವಯೋಸಹಜ ಕಾಯಿಲೆಯಿಂದ ಲೋಕನಾಥ್ ಅವರು ಇಂದು ನಿಧನ ಹೊಂದಿದ್ದಾರೆ. ಮಧ್ಯಾಹ್ನ 12 _ 2.30ರವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇವರಿಗೆ ಒಂದು ಗಂಡು, ನಾಲ್ಕು ಜನ ಹೆಣ್ಣು ಮಕ್ಕಳಿದ್ದರು.
More from Filmibeat
English summary
Kannada senior actor Lokanath passes away today in Bengaluru.


Click it and Unblock the Notifications











