ಹಿರಿಯ ನಟ ಸುರೇಶ್ ಹೆಬ್ಳೀಕರ್ ಹೆಸರಿನಲ್ಲಿ ವಂಚನೆಗೆ ಯತ್ನ
ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ನಿರ್ದೇಶಕ ಸುರೇಶ್ ಹೆಬ್ಳೀಕರ್ ಹೆಸರಿನಲ್ಲಿ ಹಣ ದೋಚುತಿದ್ದಾರೆ. ಸುರೇಶ್ ಹೆಬ್ಳೀಕರ್ ಅಂತ ಹೇಳಿ ಅವರ ಸ್ನೇಹಿತರ ಮತ್ತು ಹಿಂಬಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಫೇಸ್ ಬುಕ್, Gmail ಮತ್ತು Rediff ಮೂಲಕ ಹಣ ದೋಚುತ್ತಿದ್ದಾರೆ.
ಅಂದ್ಹಾಗೆ ಸುರೇಶ್ ಅವರ Gmail ಮತ್ತು Rediff ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿ ಅವರ ಕಾಂಟ್ಯಾಕ್ಟ್ ನಲ್ಲಿ ಇದ್ದವರಿಗೆಲ್ಲ ಹಣ ಕೊಡಿ ಎಂದು ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನ ನೋಡಿ ಶಾಕ್ ಆದ ಪರಿಚಯದವರು ಸುರೇಶ್ ಅವರಿಗೆ ಹೇಳಿದ್ದಾರೆ.
Recommended Video
ವಿಷಯ ಗೊತ್ತಾಗುತ್ತಿದ್ದಂತೆ ಸುರೇಶ್ ಎಲ್ಲರಿಗೂ ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. "ನನ್ನ ಸ್ನೇಹಿತರು ಮತ್ತು ಪರಿಚಯದವರಿಗೆ ಹಣ ಕೊಡಿ ಎನ್ನುವ ಸಂದೇಶ, ನನ್ನ ಅಕೌಂಟ್ ನಿಂದ ಹೋಗಿದೆ. ನನ್ನ Gmail ಮತ್ತು Rediff ಅಕೌಂಟ್ ಹ್ಯಾಕ್ ಆಗಿದೆ. ಆ ರೀತಿಯ ಸಂದೇಶ ಬಂದರೆ ನಿರ್ಲಕ್ಷಿಸಿ" ಎಂದು ಹೇಳಿದ್ದಾರೆ.

ಹಿರಿಯ ನಟ ಸುರೇಶ್ ಹೆಬ್ಳೀಕರ್ ಕೊನೆಯದಾಗಿ ಬೀರಬಲ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 2017ರಲ್ಲಿ ತೆರೆಗೆ ಬಂದ ಮನ ಮಂಥನ ಸುರೇಶ್ ನಿರ್ದೇಶನದ ಕೊನೆಯ ಚಿತ್ರ. ನಿರ್ದೇಶನ ಮತ್ತು ಅಭಿನಯದ ಜೊತೆಗೆ ಪರಿಸರವಾದಿಯಾಗಿರುವ ಸುರೇಶ್ ಪರಿಸರ ಸಂರಕ್ಷಣೆಯ ಬಗ್ಗೆ ಸಾಕಷ್ಟು ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ.


Click it and Unblock the Notifications











