For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ಉದಯ್ ಕುಮಾರ್ ಪತ್ನಿ ಕಮಲಮ್ಮ ನಿಧನ

  |

  ಹಿರಿಯ ನಟ, ಕಲಾ ಕೇಸರಿ ಡಿ. ಉದಯ್ ಕುಮಾರ್ ಪತ್ನಿ ಕಮಲಮ್ಮ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ 86 ವರ್ಷದ ಕಮಲಮ್ಮ ಇಂದು ಬೆಳಗ್ಗೆ 9.30ರ ಸುಮಾರಿಗೆ ಅನೇಕಲ್ ನಲ್ಲಿ ವಿಧಿವಶರಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪುತ್ರ, ನಟ ವಿಕ್ರಮ ಉದಯ್ ಕುಮಾರ್, ಪುತ್ರಿ ಶ್ಯಾಮಲಾ ಕಾರಂತ್ ಇವರನ್ನು ಅಗಲಿದ್ದಾರೆ.

  60-70ರ ದಶಕದಲ್ಲಿ ಬೆಳ್ಳೆತೆರೆ ಆಳಿದ ನಟ ಉದಯ್ ಕುಮಾರ್. ರಾಜ್ ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಕನ್ನಡ ಚಿತ್ರರಂಗದ ಕುಮಾರತ್ರಯರು ಅಂತಾನೆ ಹೇಳಲಾಗುತ್ತೆ. ನಟ ಉದಯ್ ಕುಮಾರ್ 1985 ಡಿಸೆಂಬರ್ 26ರಂದು ಕೊನೆಯುಸಿರೆಳೆದಿದ್ದರು.

  ಉದಯ್ ಕುಮಾರ್ ಪತ್ನಿ ಕಮಲಮ್ಮ ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಜೊತೆಗೆ ಆನೆಕಲ್ ಪುರಸಭೆಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

  ದಕ್ಷಿಣ ಭಾರತದ ಹಿರಿಯ ನಟಿ ಗೀತಾಂಜಲಿ ನಿಧನದಕ್ಷಿಣ ಭಾರತದ ಹಿರಿಯ ನಟಿ ಗೀತಾಂಜಲಿ ನಿಧನ

  ಕಮಲಮ್ಮಾ ಪೋಷಕರಾಗಿದ್ದರು. ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಸಾಮಾಜಿಕ ಕಾರ್ಯಕಗಳಲ್ಲಿ ತೊಡಗಿಕೊಂಡಿದ್ದರು. ಕೊನೆಯ ದಿನಗಳ ವರೆಗು ಕಮಲಮ್ಮ ಕಲಾ ಸೇವೆಯನ್ನು ಮುಂದುವೆರಸಿದ್ದರು.

  ಉದಯ್ ಕುಮಾರ್ ಸ್ಮರಣಾರ್ತ ಕಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಆನೇಕಲ್ ನಲ್ಲಿರುವ ಕಲಾ ಶಾಲೆಯನ್ನು ಕುುಂಬದವರು ನಡೆಸಿಕೊಂಡು ಹೋಗುತ್ತಿದ್ದಾರೆ. ಶಾಸ್ತ್ರೀಯ ಸಂಗೀತಾ, ಭರತನಾಟ್ಯ ತರಬೇತಿ ನೀಡಲಾಗುತ್ತೆ. ಕಮಲಮ್ಮ ಅವರ ಅಂತಿಮ ಸಂಸ್ಕಾರದ ವಿಧಿವಿಧಾನ ಕಾರ್ಯಗಳು ಆನೇಕಲ್ ನಲ್ಲಿ ನಡೆಯಲಿದೆ.

  Read more about: death ನಿಧನ
  English summary
  Kannada Senior Actor Uday Kumar wife Kamalamma passed away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X