For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿ ಶ್ರುತಿ ಕಾರ್ ಡ್ರೈವರ್ ಆತ್ಮಹತ್ಯೆಗೆ ಶರಣು

  |

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಕಾರ್ ಚಾಲಕ ಮಂಜುನಾಥ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಹೊರವಲಯ ಮಾಗಡಿ ರಸ್ತೆಯ ಫಾರೆಸ್ಟ್ ಗೇಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಮಂಜುನಾಥ್ ನಟಿ ಶ್ರುತಿ ಮತ್ತು ನಟ ಶರಣ್ ಕಾರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

  ಮಂಜುನಾಥ್ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಟವೆಲ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಶವ ಪತ್ತೆಯಾಗಿದೆ. ಮಂಜುನಾಥ್ ಸಾವಿನ ಬಗ್ಗೆ ಸಂಬಂಧಿಕರು ಮತ್ತು ಸ್ಥಳಿಯರು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  ಭವಿಷ್ಯದ ಸ್ಯಾಂಡಲ್ ವುಡ್ ಆಳುವ ಸ್ಟಾರ್ ನಟಿಯರ ಮಕ್ಕಳು ಇವರೇ.! ಭವಿಷ್ಯದ ಸ್ಯಾಂಡಲ್ ವುಡ್ ಆಳುವ ಸ್ಟಾರ್ ನಟಿಯರ ಮಕ್ಕಳು ಇವರೇ.!

  ಮಂಜುನಾಥ್ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು. ಅನೇಕ ವರ್ಷಗಳಿಂದ ಶ್ರುತಿ ಮತ್ತು ಶರಣ್ ಅವರಿಗೆ ಕಾರು ಚಾಲಕರಾಗಿದ್ದ ಮಂಜುನಾಥ್, ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

  Kannada Senior Actress Shruthi Car Driver Committed Suicide

  ಈ ಸಂಬಂಧ ಮಂಜುನಾಥ್ ಸಿಂಗ ಬಾವ ದೀಪಕ್ ಸಿಂಗ್ ಮಾತನಾಡಿ ಮಂಜುನಾಥ್ ಸಾಯುವ ವ್ಯಕ್ತಿಯಲ್ಲ, ಪೊಲೀಸರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

  English summary
  Kannada senior actress Shruthi car driver committed suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X