For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಅಡ್ಡಾಗೆ ಪ್ರವೇಶ ಕೊಟ್ರಾ ಸುಧಾರಾಣಿ ಮತ್ತು ಶ್ರುತಿ? ಆ ಎರಡು ಪಾತ್ರಗಳ ಕಥೆಯೇನು?

  |

  'ಕೆಜಿಎಫ್' ಇದೊಂದು ಸಿನಿಮಾ ಆಗಿ ಉಳಿದಿಲ್ಲ. 'ಕೆಜಿಎಫ್' ಅನ್ನುವುದೊಂದು ಬ್ರ್ಯಾಂಡ್. ಇದಕ್ಕೆ ಸಾಕ್ಷಿ ನಮ್ಮ ಕಣ್ಮುಂದೆನೇ ಇದೆ. 'ಕೆಜಿಎಫ್ ಚಾಪ್ಟರ್ 1'ಕ್ಕಿಂತ 'ಕೆಜಿಎಫ್ ಚಾಪ್ಟರ್ 2' ಬೇಜಾನ್ ಸದ್ದು ಮಾಡುತ್ತಿದೆ. ಇದೂವರೆಗೂ ಒಂದೇ ಒಂದು ಟೀಸರ್ ರಿಲೀಸ್ ಮಾಡಿದ್ದರೂ, ಅದು ಬರೆದ ದಾಖಲೆಯನ್ನು ಇನ್ನೂ ಯಾರೂ ಅಳಿಸಿ ಹಾಕಲು ಸಾಧ್ಯವಾಗಿಲ್ಲ. ಇನ್ನೂ ಟ್ರೈಲರ್ ರಿಲೀಸ್ ಆಗಬೇಕು. ಒಂದಾದರೂ ಸಾಂಗ್ ಬಿಡುಗಡೆ ಆಗಬೇಕು. ಇವುಗಳು ಅದಿನ್ಯಾವ ದಾಖಲೆ ಬರೆಯುತ್ತವೋ ಗೊತ್ತಿಲ್ಲ. ಆದರೆ, ಪ್ರತಿ ದಿನ 'ಕೆಜಿಎಫ್ 2' ಸಿನಿಮಾ ಬಗ್ಗೆ ಒಂದಲ್ಲ ಒಂದು ವಿಷಯ ಹೊರಬೀಳುತ್ತಲೇ ಇದೆ.

  ಗಾಂಧಿನಗರ ಅನ್ನುವುದು ಕನ್ನಡದ ಚಿತ್ರರಂಗದ ಹೃದಯ ಅಷ್ಟೇ ಅಲ್ಲ. ಇಲ್ಲಿನ ಗಲ್ಲಿಗಲ್ಲಿಯಲ್ಲೂ ಗಾಳಿ ಸುದ್ದಿಗಳು ನಿಮಿಷಕ್ಕೊಂದು ಹರಿದು ಬರುತ್ತಲೇ ಇರುತ್ತವೆ. ಸದ್ಯ ಗಾಂಧಿನಗರದ ಅಡ್ಡಾದಲ್ಲೊಂದು ಸುದ್ದಿ ಹರಿದಾಡುತ್ತಿದೆ. 'ಕೆಜಿಎಫ್ 2' ಚಿತ್ರಕ್ಕೆ ನಟಿ ಸುಧಾರಾಣಿ ಹಾಗೂ ಶ್ರುತಿ ಎಂಟ್ರಿ ಕೊಟ್ಟಿದ್ದಾರಂತೆ. ಅಸಲಿಗೆ ಸುಧಾರಾಣಿ ಹಾಗೂ ಶ್ರುತಿ ಈಗ ಕೆಜಿಎಫ್ ಕೋಟೆಯೊಳಗೆ ಪ್ರವೇಶ ಮಾಡಿದ್ದೇಕೆ? ಇವರ ಪಾತ್ರವೇನು? ಅಂತ ತಿಳಿಯಲು ಮುಂದೆ ಓದಿ..

  ಏಪ್ರಿಲ್ 14ರಂದೇ 'ಕೆಜಿಎಫ್ 2' ಮತ್ತು 'ಜೆರ್ಸಿ' ರಿಲೀಸ್‌ಗೆ ಪಟ್ಟು ಹಿಡಿದಿದ್ದೇಕೆ? ಈ ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕಾಚಾರವೇನು?ಏಪ್ರಿಲ್ 14ರಂದೇ 'ಕೆಜಿಎಫ್ 2' ಮತ್ತು 'ಜೆರ್ಸಿ' ರಿಲೀಸ್‌ಗೆ ಪಟ್ಟು ಹಿಡಿದಿದ್ದೇಕೆ? ಈ ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕಾಚಾರವೇನು?

  'ಕೆಜಿಎಫ್ 2' ಚಿತ್ರದಲ್ಲಿ ಶ್ರುತಿ-ಸುಧಾರಾಣಿ

  'ಕೆಜಿಎಫ್ 2' ಚಿತ್ರದಲ್ಲಿ ಶ್ರುತಿ-ಸುಧಾರಾಣಿ

  'ಕೆಜಿಎಫ್ 2' ಕ್ಯಾನ್ವಸ್ ತುಂಬಾನೇ ದೊಡ್ಡದು. ಕೇವಲ ಕನ್ನಡದ ಕಲಾವಿದರಷ್ಟೇ ಬಣ್ಣ ಹಚ್ಚಿಲ್ಲ. ಇಲ್ಲಿ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಕಲಾವಿದರೂ ಕೂಡ ಮೇಕಪ್ ಮಾಡಿಕೊಂಡು ಅಖಾಡಕ್ಕಿಳಿದಿದ್ದಾರೆ. ಅದಕ್ಕೆ 'ಕೆಜಿಎಫ್ 2' ಸಿನಿಮಾದಲ್ಲಿ ಕಲಾವಿದರ ದಂಡೇ ಸಿಗುತ್ತಾರೆ. ಈಗ ತಂಡಕ್ಕೆ ಕನ್ನಡದ ಇಬ್ಬರು ನಟಿಯರು ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ನಟಿ ಸುಧಾರಾಣಿ ಹಾಗೂ ಶ್ರುತಿ ಹೊಸದಾಗಿ ಈ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಯಶ್‌ಗಾಗಿ ಬರ್ತಿದ್ದಾಳೆ ಬಾಲಿವುಡ್ ಬೆಡಗಿ ನೋರಾ!ಯಶ್‌ಗಾಗಿ ಬರ್ತಿದ್ದಾಳೆ ಬಾಲಿವುಡ್ ಬೆಡಗಿ ನೋರಾ!

  ರವೀನಾಗೆ ಸುಧಾರಾಣಿ ಡಬ್

  ರವೀನಾಗೆ ಸುಧಾರಾಣಿ ಡಬ್

  'ಕೆಜಿಎಫ್ 2' ಪ್ರಮುಖ ಆಕರ್ಷಣೆಯಲ್ಲೊಂದು ಬಾಲಿವುಡ್‌ ನಟಿ ರವೀನಾ ಟಂಡನ್ ಪಾತ್ರ. ಭಾರತದ ಪ್ರಧಾನಿಯಾಗಿ ರವೀನಾ ಟಂಡನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ರವೀನಾ ಪಾತ್ರಕ್ಕೆ ಸುಧಾರಾಣಿ ಧ್ವನಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ರವೀನಾ ಟಂಡನ್ ಕೆಜಿಎಫ್ 2 ಸಿನಿಮಾದ ಹಿಂದಿ ಅವರಣಿಕೆಗೆ ಡಬ್ಬಿಂಗ್ ಮಾಡಿದ್ದರು. ಅದೇ ಕನ್ನಡದಲ್ಲಿ ರಮಿಕಾ ಸೇನ್ ಪಾತ್ರಕ್ಕೆ ಸುಧಾರಾಣಿ ಡಬ್ ಮಾಡುತ್ತಿದ್ದಾರೆ.

  ಈಶ್ವರಿ ರಾವ್​ ಪಾತ್ರಕ್ಕೆ ಶೃತಿ ಡಬ್ಬಿಂಗ್

  ಈಶ್ವರಿ ರಾವ್​ ಪಾತ್ರಕ್ಕೆ ಶೃತಿ ಡಬ್ಬಿಂಗ್

  ಕಳೆದ ವರ್ಷ 'ಕೆಜಿಎಫ್ 2' ಟೀಸರ್‌ನಲ್ಲಿ ಬಿಡುಗಡೆಯಾದಾಗ, ಒಂದು ಪಾತ್ರ ಗಮನ ಸೆಳೆದಿತ್ತು. ಅದುವೇ ತಮಿಳಿನ ಪೋಷಕ ಕಲಾವಿದೆ ಈಶ್ವರಿ ರಾವ್ ಪಾತ್ರ. ಸದ್ಯ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದನ್ನು ತಂಡ ಇನ್ನೂ ರಿವೀಲ್ ಮಾಡಿಲ್ಲ. ಇದೇ ಪಾತ್ರಕ್ಕೆ ಡಬ್ ಮಾಡಲು ಕನ್ನಡದ ನಟಿ ಶ್ರುತಿ 'ಕೆಜಿಎಫ್ 2' ತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಈಶ್ವರಿ ರಾವ್ ಪಾತ್ರಕ್ಕೆ ಶ್ರುತಿ ಡಬ್ಬಿಂಗ್ ಮುಗಿಸಿದ್ದಾರೆ ಎಂದು ವರದಿಯಾಗಿದೆ.

  KGF 2: ನಾಯಕ ಯಶ್, ಅಧೀರ ಸಂಜಯ್ ದತ್ ಸಂಭಾವನೆ ಸೀಕ್ರೆಟ್ ಇಲ್ಲಿದೆ!KGF 2: ನಾಯಕ ಯಶ್, ಅಧೀರ ಸಂಜಯ್ ದತ್ ಸಂಭಾವನೆ ಸೀಕ್ರೆಟ್ ಇಲ್ಲಿದೆ!

  'ಕೆಜಿಎಫ್ 2' ಸಾಂಗ್ ರೀ-ಶೂಟ್

  'ಕೆಜಿಎಫ್ 2' ಸಾಂಗ್ ರೀ-ಶೂಟ್

  ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಹಾಡೊಂದನ್ನು ಮತ್ತೆ ಹೊಸದಾಗಿ ಶೂಟ್ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಯಶ್ ಇಂಟ್ರುಡಕ್ಷನ್ ಸಾಂಗ್ ಪ್ರಶಾಂತ್‌ ನೀಲ್‌ಗೆ ತೃಪ್ತಿ ಕೊಟ್ಟಿಲ್ಲ. ಈ ಕಾರಣಕ್ಕೆ ಹೊಸದಾಗಿಯೇ ಹಾಡನ್ನು ಶೂಟ್ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಈ ಹಾಡನ್ನು ಎ ಹರ್ಷ ಕೊರಿಯೋಗ್ರಫಿ ಮಾಡುತ್ತಾರೆ ಎಂದೂ ಸುದ್ದಿಯಾಗಿತ್ತು. ಸಿನಿಮಾ ಬಿಡುಗಡೆ ಸಮೀಪವಿರುವಾಗಲೇ 'ಕೆಜಿಎಫ್ 2' ತಂಡ ಮತ್ತೆ ಆಕ್ಟೀವ್ ಆಗಿದೆ.

  English summary
  Kannada Senior actress Sudharani and Shruthi joined KGF 2 movie team. They are giving voice to Raveena Tondon and Eshwari Rao.
  Friday, February 18, 2022, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X