'ಜುಗಾರಿ ಕ್ರಾಸ್'ಯಿಂದ ಹಿಂದೆ ಸರಿದ ನಿರ್ದೇಶಕ ನಾಗಾಭರಣ

ಹಿರಿಯ ನಿರ್ದೇಶಕ ನಾಗಾಭರಣ ಸಾರಥ್ಯದಲ್ಲಿ 'ಜುಗಾರಿ ಕ್ರಾಸ್' ಸಿನಿಮಾ ಮೂಡಿ ಬರಬೇಕಿತ್ತು. ಪೂರ್ಣ ಚಂದ್ರ ತೇಜಸ್ವಿ ಅವರ 'ಜುಗಾರಿ ಕ್ರಾಸ್' ಪುಸ್ತಕಕ್ಕೆ ಸಿನಿಮಾ ರೂಪ ಕೊಡಲು ನಾಗಾಭರಣ ಸಜ್ಜಾಗಿದ್ದರು. ಆದ್ರೀಗ ನಾಗಾಭರಣ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

'ಜುಗಾರಿ ಕ್ರಾಸ್' ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಡ್ಡಿಪುಡಿ ಚಂದ್ರು ಬಂಡವಾಳ ಹೂಡುತ್ತಿದ್ದಾರೆ. ಫೆಬ್ರವರಿ 10ರಂದು 'ಜುಗಾರಿ ಕ್ರಾಸ್' ಸಿನಿಮಾ ಸೆಟ್ಟೇರಿತ್ತು. ಮುಹೂರ್ತದ ಪ್ರಕಾರ ಆಗಿದ್ದರೆ ಚಿತ್ರೀಕರಣ ಪ್ರಾರಂಭವಾಗಿ ಮುಕ್ತಾಯದ ಹಂತಕ್ಕೆ ಬರಬೇಕಿತ್ತು. ಆದ್ರೀಗ ಚಿತ್ರದಿಂದ ನಿರ್ದೇಶಕರೆ ಹಿಂದೆ ಸರಿದಿದ್ದಾರೆ.

ಅಂದ್ಹಾಗೆ ನಾಗಾಭರಣ ದಿಢೀರನೆ ಚಿತ್ರದಿಂದ ಹಿಂದೆ ಸರಿಯಲು ಕಾರಣ ಬಡ್ಜೆಟ್. ನಿರ್ಮಾಪಕರ ಬಡ್ಜೆಟ್ ಗೆ ನಿರ್ದೇಶಕ ನಾಗಾಭರಣ ಅವರ ಬಡ್ಜೆಟ್ ಹೊಂದಿಕೆಯಾಗದ ಕಾರಣ ಚಿತ್ರದಿಂದನೆ ಹಿಂದೆ ಸರಿದ್ದಾರೆ ಎಂದು ಹೇಳಲಾಗುತ್ತಿದೆ.

Kannada Senior Director Nagabharana Will Not Direct Jugari Cross

ಹಾಗಾಗಿ ನಿರ್ಮಾಪಕ ಕಡ್ಡಿಪುಡಿ ಚಂದ್ರು ಈಗ ಮತ್ತೋರ್ವ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರ ಬಡ್ಜೆಟ್ ಗೆ ಸರಿಹೊಂದುವ ನಿರ್ದೇಶಕರನ್ನು ಹುಡುಕುತಿದ್ದಾರಂತೆ ಕಡ್ಡಿಪುಡಿ ಚಂದ್ರು. ಚಿರಂಜೀವಿ ಸರ್ಜಾ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡರೆ ರಂಗಾಯಣ ರಘು ಮತ್ತು ಕರಿಸುಬ್ಬ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.

ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಎಚ್ ಸಿ ವೇಣು ಕ್ಯಾಮರಾ ಕಣ್ಣಲ್ಲಿ 'ಜುಗಾರಿ ಕ್ರಾಸ್' ಸೆರೆಯಾಗಲಿದೆ. ಸದ್ಯ 'ಜುಗಾರಿ ಕ್ರಾಸ್' ಗೆ ಯಾರು ಸಾರಥ್ಯ ವಹಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Kannada senior director Nagabharana will not direct Jugari Cross. Producer Kaddipudi Chandru search for another director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X