For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಹಿರಿಯ ನಟಿ ಎಲ್ ವಿ ಶಾರದಾ ನಿಧನ

  |

  ಕನ್ನಡ ಚಿತ್ರರಂಗದ ಕಂಡ ಶ್ರೇಷ್ಟ ನಟಿಯರಲ್ಲಿ ಒಬ್ಬರಾಗಿದ್ದ ಎಲ್ ವಿ ಶಾರದಾ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಅನಾರೋಗ್ಯದದಿಂದ ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಇದ್ದರು. ಇಂದು ಬೆಳಗ್ಗೆ ನಿಧನರಾಗಿದ್ದು, ಜಯನಗರದ ನಾಲ್ಕನೇ ಬಡಾವಣೆಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

  'ಒರಟ ಐ ಲವ್ ಯು' ಖ್ಯಾತಿಯ ಸಂಗೀತ ನಿರ್ದೇಶಕ ಶಂಕರ್ ನಿಧನ

  ಎಲ್ ವಿ ಶಾರದ ಅವರಿಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಅದನ್ನು ಧೈರ್ಯವಾಗಿ ಎದುರಿಸಿದ್ದರು. ಅವಿವಾಹಿತರಾಗಿದ್ದ ಅವರು ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಸಾಧನೆ ಮಾಡಿದರು.

  ಎಲ್ ವಿ ಶಾರದ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಮೊದಲ ಸಿನಿಮಾವಾದ 'ವಂಶವೃಕ್ಷ', 'ಫಣಿಯಮ್ಮ', 'ಬೂತಯ್ಯನ ಮಗ ಅಯ್ಯು', 'ಮೈತ್ರಿ', 'ವಾತ್ಸಲ್ಯ ಪಥ', 'ಆದಿ ಶಂಕರಾಚಾರ್ಯ', 'ಮಧ್ವಾಚಾರ್ಯ', 'ರಾಮಾನುಜಾಚಾರ್ಯ', 'ನಕ್ಕಳಾ ರಾಜಕುಮಾರಿ' ಎಲ್ ವಿ ಶಾರದಾ ಅಭಿನಯದ ಪ್ರಮುಖ ಸಿನಿಮಾಗಳಾಗಿವೆ.

  ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಇನ್ನಿಲ್ಲ

  1976ರಲ್ಲಿ 'ವಂಶವೃಕ್ಷ' ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ ಹಾಗೂ 1981ರಲ್ಲಿ 'ವಾತ್ಸಲ್ಯ ಪಥ' ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಅವರಿಗೆ ಲಭಿಸಿತ್ತು.

  ಸಿನಿಮಾ, ಧಾರಾವಾಹಿ ಮಾತ್ರವಲ್ಲದೆ ನಿಟ್ಟೂರು ಶ್ರೀನಿವಾಸ ರಾವ್, ಮಾ. ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಅವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

  English summary
  Kannada seniors actress, 'Paniyamma' fame L V Sharada passes away Today in Bengaluru. She is one of the great kannada actress. Her popular movies are 'Boothayyana Maga Ayyu', 'Vamshavruksha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X