ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಕನ್ನಡದ ಇಬ್ಬರು ಕಿರುತೆರೆ ನಟರು

ಕನ್ನಡ ಕಿರುತೆರೆಯ ಇಬ್ಬರು ಪ್ರತಿಭಾವಂತ ನಟರು ಒಂದೇ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಸೂರ್ಯ ಮತ್ತು ನಟ ತಾರಕ್ ಪೊನ್ನಪ್ಪ ಮದುವೆಯಾಗಿದ್ದಾರೆ.

ರಾಧಿಕಾ ಎಂಬ ಹುಡುಗಿಯ ಜೊತೆಗೆ ನಟ ತಾರಕ್ ಪೊನ್ನಪ್ಪ ಮದುವೆ ನಡೆದಿದೆ. ಮೂಲತಃ ಕೊಡಗಿನವರಾದ ಅವರು ಅಲ್ಲಿನ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದಾರೆ. ಕೊಡಗಿನ ಉಡುಪಿನಲ್ಲಿ ವರ ಮತ್ತು ವಧು ಮಿಂಚಿದ್ದಾರೆ.

ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ತಾರಕ್ ನಟಿಸಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. 'ಅಧ್ಯಕ್ಷ ಇನ್ ಅಮೇರಿಕಾ' ಹಾಗೂ '6 ಟು 6' ತಾರಕ್ ನಟನೆಯ ಪ್ರಮುಖ ಸಿನಿಮಾಗಳಾಗಿವೆ.

Kannada Serial Actors Surya And Tharak Got Married

ಮತ್ತೊಬ್ಬ ಕಿರುತೆರೆಯ ನಟ ಸೂರ್ಯ ಸಹ ಹಸೆಮಣೆ ಏರಿದ್ದಾರೆ. ಸೂರ್ಯ ಹಾಗೂ ಶುಭಶ್ರೀ ಅವರದ್ದು ಪ್ರೇಮ ವಿವಾಹವಾಗಿದೆ. ಸೂರ್ಯ ಮತ್ತು ಶುಭಶ್ರೀ ಮನೆ ಸಮೀಪದಲ್ಲಿಯೇ ಇದ್ದು, ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು.

Kannada Serial Actors Surya And Tharak Got Married

ಅಂದಹಾಗೆ, ರತ್ನಜ ನಿರ್ದೇಶನದ 'ಪ್ರೀತಿಯಲ್ಲಿ ಸಹಜ' ಸಿನಿಮಾದಲ್ಲಿ ಸೂರ್ಯ ನಟಿಸಿದ್ದರು. ಅವರ 'ಕಟ್ಟುಕಥೆ' ಎಂಬ ಸಿನಿಮಾ ಇತ್ತೀಚಿಗೆ ಬಿಡುಗಡೆಯಾಗಿತ್ತು. ಸಿನಿಮಾದ ಜೊತೆಗೆ ಕೆಲವು ಧಾರಾವಾಹಿಗಳಲ್ಲಿಯೂ ಸೂರ್ಯ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada serial actors Surya and Tharak got married.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X