ಸಿನಿಮಾ ನಟಿ ಮಾಡುವ ಆಸೆ ತೋರಿಸಿ ಅತ್ಯಾಚಾರ: ನಿರ್ಮಾಪಕನ ವಿರುದ್ಧ FIR

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಕನ್ನಡದ ಖ್ಯಾತ ಕಿರುತೆರೆ ನಟಿಯ ಮೇಲೆ ನಿರ್ಮಾಪಕರೊಬ್ಬರು ಅತ್ಯಾಚಾರ ವೆಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೈದರಾಬಾದ್ ಮೂಲದ ಸಂಗಮೇಶ್ ಪಾಟೀಲ್ ಎನ್ನುವ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಕನ್ನಡದ ಕಿರುತೆರೆ ನಟಿಯನ್ನು ಹೈದರಾಬಾದ್ ಗೆ ಕರೆಸಿಕೊಂಡು ಅತ್ಯಾಚಾರ ವೆಸಗಿದ್ದಾರಂತೆ. ಈ ಘಟನೆ ನಡೆದಿರುವುದು 2014ರಲ್ಲಿ. ಆದರೀಗ 6 ವರ್ಷದ ಬಳಿಕ ಕನ್ನಡದ ನಟಿ, ನಿರ್ಮಾಪಕ ಸಂಗಮೇಶ್ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ನಟಿ, 2014ರಲ್ಲಿ ನಿರ್ಮಾಪಕ ಸಂಗಮೇಶ್ ಹೈದರಾಬಾದ್ ಗೆ ಕರೆಸಿಕೊಂಡು ಖಾಸಗಿ ಹೋಟೆಲ್ ಗೆ ಕರೆದುಕೊಂಡು ಹೋಗಿ ಮತ್ತು ಬರುವ ತಂಪು ಪಾನಿಯ ಕುಡಿಸಿ ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಆ ನಂತರ ಮತ್ತೆ ಗೋವಾಗೆ ಕರೆಸಿಕೊಂಡು ಎರಡನೆ ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆ ನಂತರ ನಗ್ನ ವಿಡಿಯೋಗಳನ್ನು ಹರಿಬಿಡುವುದಾಗಿ ನಟಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರಂತೆ.

Kannada Serial Actress Filed Rape Case Against Producer Sangamesh

ಈಗಾಗಲೆ ನಿರ್ಮಾಪಕ ಸಂಗಮೇಶ್ ಗೆ ಮದುವೆ ಆಗಿದೆಯಂತೆ. ಈ ಬಗ್ಗೆ ಕನ್ನಡ ನಟಿ ಸಂಗಮೇಶ್ ಬಳಿ ಪ್ರಶ್ನೆ ಮಾಡಿದ್ದಕ್ಕೆ, ಸಂಗಮೇಶ್ ಪತ್ನಿ ಕನ್ನಡ ನಟಿಯ ವಿರುದ್ಧ ಹೈದರಾಬಾದ್ ನಲ್ಲಿ ದೂರು ನೀಡಿದ್ದಾರೆ.

ಕನ್ನಡ ಕಿರುತೆರೆಯ ನಟಿ ಬೆಂಗಳೂರಿನ ಹೆಬ್ಬಾಳ ಮೂಲದವರಾಗಿದ್ದಾರೆ. 6 ವರ್ಷದ ಹಿಂದೆ ನಡೆದ ಅತ್ಯಾಚಾರದ ಬಗ್ಗೆ ಈಗ ಈ ನಟಿ ದೂರು ನೀಡಿರುವ ಬಗ್ಗೆ ಒಂದಿಷ್ಟು ಅನುಮಾನಗಳಿಗೂ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More from Filmibeat

English summary
Rape allegation has been against Hyderabad producer Sangamesh. Kannada Serial Actress filed rape case Against producer Sangamesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X