ದೊಡ್ಡ ಕಸನು ಕಂಡಿದ್ದವನ ಬಾಳಲ್ಲಿ 'ಅನಾಹುತ' ಆಗೋಯ್ತು
ಅಮ್ಮನಗೆ ಚಿನ್ನದ ಸರ ಕೊಡಿಸಬೇಕು. ಅಪ್ಪನನ್ನ ವಿಮಾನದಲ್ಲಿ ಸುತ್ತಾಡಿಸಬೇಕು ಎಂಬ ಆಸೆ. ಅದೇ ಟೈಂನಲ್ಲಿ ನನಗೊಂದು ಕೆಲಸ ಸಿಕ್ತು. ಈ ಎಲ್ಲ ಖುಷಿಯನ್ನ ಸಂಭ್ರಮಿಸುವುದಕ್ಕೆ ನನ್ನ ಬರ್ತಡೇ ಬೇರೆ ಬಂತು. ಫ್ರೆಂಡ್ಸ್ ಜೊತೆ ಸೇರಿ ಎಂಜಾಯ್ ಮಾಡಿದೆ. ಕುಡಿದು ಪಾನಮತ್ತನಾದೇ. ಸಮಯ ತುಂಬಾ ಆಗಿತ್ತು. ಮನೆಗೆ ಹೋಗಲು ಬೈಕ್ ಹತ್ತಿದೆ. ಸ್ನೇಹಿತರು ಇಷ್ಟೋತ್ತಲ್ಲಿ ಬೈಕ್ ಚಾಲನೆ ಮಾಡುವುದು ಬೇಡ ಅಂದ್ರು. ನಾನು ಕೇಳಲಿಲ್ಲ. ಹೊರಟು ಹೋದೆ. ಆಗಲೇ ಆಗಿದ್ದು 'ಅನಾಹುತ'.
'ನಮ್ದು ಕೆ' ಪ್ರೊಡಕ್ಷನ್ ನಲ್ಲಿ ತಯಾರಾಗಿರುವ ಹೊಸ ಕಿರುಚಿತ್ರ. ಈ ಚಿತ್ರದ ಹೆಸರೇ 'ಅನಾಹುತ'. ಮಧ್ಯಪಾನ ಮಾಡಿ ಬೈಕ್ ಚಾಲನೆ ಮಾಡುವುದು ಎಷ್ಟು ಅಪಾಯ ಮತ್ತು ಅದರಿಂದ ಏನೆಲ್ಲಾ ಅನಾಹುತ ಆಗುತ್ತೆ ಎಂಬುದನ್ನ ಸರಳವಾಗಿ, ಚೊಕ್ಕವಾಗಿ ನಿರೂಪಣೆ ಮಾಡಿದ್ದಾರೆ.

ಇಡೀ ಕಿರುಚಿತ್ರದಲ್ಲಿ ಬರುವುದು ಒಂದೇ ಪಾತ್ರ. ಒಂದು ಪಾತ್ರವನ್ನಿಟ್ಟು ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡಿದ್ದಾರೆ. ಅಂದ್ಹಾಗೆ, ಆ ಒಂದು ಪ್ರಮುಖ ಪಾತ್ರ ನಿರ್ವಹಿಸಿರುವುದು ರಾಕೇಶ್ ಮೈಯ್ಯ.

ಇನ್ನುಳಿದಂತೆ ಕಥೆ-ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಶ್ರವಣ್ ನಾರಾಯಣ್. ಮನಸ ಶರ್ಮಾ ಛಾಯಾಗ್ರಹಣ, ಮಹೇಶ್ ಜುಡಿ ಸಂಗೀತವನ್ನ ಒಳಗೊಂಡಿದೆ. ಈ ಅದ್ಭುತವಾದ ಕಿರುಚಿತ್ರವನ್ನ ಒಮ್ಮೆ ನೋಡಿ, ಪ್ರೋತ್ಸಾಹಿಸಿ.


Click it and Unblock the Notifications











