ಅಮೆಜಾನ್ ಪ್ರೈಮ್ ಗೆ ಲಗ್ಗೆ ಸೋನುಗೌಡ ನಟನೆಯ ಕಿರುಚಿತ್ರ ಕೊರು

'ಕೊರು' ಎಂಬ ಹೊಸ ಕನ್ನಡ ಕಿರುಚಿತ್ರವನ್ನು ವಿ ಮೂವ್ ಟಾಕೀಸ್ ಮತ್ತು ಋತ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಈ ಕಿರುಚಿತ್ರ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಅಮೇರಿಕ(USA) ಹಾಗು ಯುನೈಟೆಡ್ ಕಿಂಗ್.ಡಮ್(UK) ವಲಯದ ಅಮೆಜಾನ್ ಪ್ರೈಮ್ ವಿಡಿಯೋ ಜಾಲತಾಣದಲ್ಲಿ ವೀಕ್ಷಿಸಲು ಲಭ್ಯವಾಗಲಿದೆ. ಈ ಕಿರುಚಿತ್ರವು ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ಮೂಲಕ ಭಾರತದಲ್ಲಿ ತಯಾರಾಗಿ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿರುವ ಕೆಲವೇ ಕೆಲವು ಕಿರುಚಿತ್ರಗಳ ಸಾಲಿಗೆ 'ಕೊರು' ಸೇರ್ಪಡೆಯಾಗಲಿದೆ.

'ಕೊರು' ಪದವನ್ನು ನ್ಯೂಜ಼ಿಲ್ಯಾಂಡಿನ ಮಾವೊರಿ ಬುಡಕಟ್ಟು ಜನರ ಭಾಷೆಯಿಂದ ಎರವಲು ಪಡೆಯಲಾಗಿದ್ದು, ಇದಕ್ಕೆ ಅಭಿವೃದ್ದಿ, ನವಜೀವನ, ಬಲ ಎಂಬೆಲ್ಲಾ ಅರ್ಥಗಳಿವೆ.

Kannada Short Film Koru on Amazon Prime US and UK

'ಕೊರು' 2000ನೇ ಇಸವಿಯ ಆಸುಪಾಸಿನಲ್ಲಿ ನಡೆಯುವ ಕಥೆಯಾಗಿದ್ದು, ಈ ಕಿರುಚಿತ್ರವು ವಿವಿಧ ಸಂಬಂಧಗಳು, ಅವುಗಳಿಂದುಂಟಾಗುವ ಕಗ್ಗಂಟುಗಳಿಂದ ಹೊರಬಂದು ನಮ್ಮೊಳಗಿನ ತುಮುಲಗಳು ಮತ್ತು ಹೊರಗಿನ ನಿರೀಕ್ಷೆಗಳ ನಡುವೆ ಸೆಣೆಸಾಡುವ ಕಥಾಹಂದರ ಹೊಂದಿದೆ.

Kannada Short Film Koru on Amazon Prime US and UK

ಕಿರುಚಿತ್ರದ ಕೆಲವು ಭಾಗಗಳನ್ನು ನೀರಿನೊಳಗೆ ಚಿತ್ರಿಸಿದ್ದು, ಅಂಡರ್ ವಾಟರ್ ನಲ್ಲಿ ಚಿತ್ರೀಕರಣಗೊಂಡ ಬೆರಳೆಣಿಕೆಯ ಕನ್ನಡ ಕಿರುಚಿತ್ರಗಳಲ್ಲಿ ಇದೂ ಒಂದಾಗಿದೆ. ಖ್ಯಾತ ನಟಿ ಸೋನು ಗೌಡ ಹಾಗು ರಂಗಭೂಮಿ ಕಲಾವಿದ ಸೂರಜ್ ಕಿರಣ್ ಈ ಕಿರುಚಿತ್ರದಲ್ಲಿ ಮುಖ್ಯಭೂಮಿಕೆಯನ್ನು ನಿಭಾಯಿಸಿದ್ದಾರೆ.

Kannada Short Film Koru on Amazon Prime US and UK

ನಾಟಕಕಾರ, ನಿರ್ದೇಶಕ ಹಾಗೂ ಬರಹಗಾರ, ಅಭಿಷೇಕ್ ಅಯ್ಯಂಗಾರ್ ಈ ಚಿತ್ರದ ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ವಿವೇಕ್ ಆರಗ ಸಿನೆಮಾಟೋಗ್ರಫಿ ಜವಾಬ್ದಾರಿ ಹೊತ್ತಿದ್ದು, ಹಲವಾರು ಕಿರುಚಿತ್ರಗಳು, ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಕಾರ್ತಿಕ್ ರಾವ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
It’s a big news for us as KORU is now coming soon on Amazon Prime US and UK region only! (It will be geo locked) All my dear friends, supporters and well wishers In US and UK, need all your support to make this film reach people otherwise the effort becomes futile! Please help and support! This is a big step for a short film we have taken and if this experiment works then it allows a whole ಸ್new medium for content creators!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X