ಸಿನಿಮಾ ಲೋಕದಲ್ಲಿ ಮಿಂಚಬೇಕೆಂಬ ಕನಸಿನ ಪ್ರತಿರೂಪ 'ನೀ-ನಲ್ಲ'
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದು ಅನೇಕ ಯುವಕ-ಯುವತಿಯರ ಆಸೆ. ಇಂತಹ ಆಸೆಯೊಂದಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ಕರಣ್ ಶ್ರೀನಿವಾಸ್ ಈಗ ಕಿರುಚಿತ್ರವೊಂದನ್ನ ನಿರ್ದೇಶಿಸಿ ಗಮನ ಸೆಳೆಯುತ್ತಿದ್ದಾರೆ.
'ನೀ-ನಲ್ಲ' ಎಂಬ ಪ್ರೇಮಕಥೆಯ ಹೊಂದಿರುವ ಕಿರುಚಿತ್ರ ಫಿಲ್ಮಿಬಿಟ್ ಕನ್ನಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಎನ್.ಎಚ್.ಸಿ.ಸಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕರಣ್ ಶ್ರೀನಿವಾಸ್ ಈ ಚಿತ್ರಕ್ಕೆ ಸ್ಕ್ರಿಪ್ಟ್, ಡೈಲಾಗ್ ಬರೆದು ನಿರ್ದೇಶನ ಮಾಡಿದ್ದಾರೆ.
ಹುಡುಗಿಯನ್ನ ಯಾರೂ ಪ್ರೀತಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿರುವ 'ನೀ-ನಲ್ಲ' ಕಿರುಚಿತ್ರದಲ್ಲಿ ಲೇಖ ಮತ್ತು ಅಭಿರಾಗ್ ನಟಿಸಿದ್ದಾರೆ. ಕರಣ್ ಶ್ರೀನಿವಾಸ್ ಕನಸಿಗೆ ಹೇಮಂತ್ ಎಂ ಹೆಗಲು ಕೊಟ್ಟಿದ್ದು, ಚಿತ್ರ ನಿರ್ಮಾಣ ಮಾಡಿದ್ದಾರೆ. ಸೂರಜ್ ಛಾಯಾಗ್ರಹಣವಿದ್ದು, ಅನೂಜ್ ಸಂಗೀತ ನೀಡಿದ್ದಾರೆ.

ಕರಣ್ ಶ್ರೀನಿವಾಸ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡಬೇಕು ಎಂಬ ಕನಸು ಹೊತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯ ಹಲವು ಚಿತ್ರಗಳನ್ನ ನೋಡಿ ಸ್ಫೂರ್ತಿ ಪಡೆದುಕೊಂಡಿದ್ದಾರಂತೆ.
ಒಂದು ಸಿನಿಮಾಗೆ ಸಂಬಂಧಿಸಿದಂತೆ ಹಂತಹಂತವಾಗಿ ಈ ಕಿರುಚಿತ್ರದಲ್ಲಿ ಕೆಲಸ ಮಾಡಲಾಗಿದೆ. ಪ್ರೀಪ್ರೊಡಕ್ಷನ್, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಡಿಐ, ಕಲರಿಂಗ್, ಡಬ್ಬಿಂಗ್, ಸೌಂಡ್, ಸೆನ್ಸಾರ್ ಕೂಡ ಆಗಿದ್ದು, ಯು/ಎ ಸರ್ಟಿಫಿಕೇಟ್ ಸಿಕ್ಕಿದೆಯಂತೆ.


Click it and Unblock the Notifications











