For Quick Alerts
  ALLOW NOTIFICATIONS  
  For Daily Alerts

  ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು ಈ 'ಹಿಟ್ಲರ್'

  By Bharath Kumar
  |

  ಹಿಟ್ಲರ್, ಅಂದ್ರೆ ಥಟ್ ಅಂತ ನೆನಪಾಗುವುದು ಜರ್ಮನಿಯ ಸರ್ವಾಧಿಕಾರಿ. ಹಿಟ್ಲರ್ ಮತ್ತು ಅವನ ಆಡಳಿತವನ್ನ ವಿರೋಧಿಸಿದ್ದವರೇ ಹೆಚ್ಚು. ಆದ್ರೆ, ಇಲ್ಲೊಬ್ಬ ಹಿಟ್ಲರ್ ಇದ್ದಾನೆ. ಇವನು ''ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು''. ಹೀಗೆ, ನಾವು ಹೇಳುತ್ತಿರುವುದು ಮತ್ತೊಬ್ಬ ಸರ್ವಾಧಿಕಾರಿ ಬಗ್ಗೆ ಅಲ್ಲ. ಕನ್ನಡದ ಕಿರುಚಿತ್ರ 'ಹಿಟ್ಲರ್' ಬಗ್ಗೆ.

  'ಹಿಟ್ಲರ್' ಎಂಬ ಹೆಸರಿನಲ್ಲಿ ಕಿರುಚಿತ್ರವೊಂದು ತಯಾರಾಗಿದ್ದು, ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಟೈಟಲ್ ಗೆ ತಕ್ಕಂತೆ ಸಖತ್ ಮಾಸ್ ಆಗಿರುವ ಹಿಟ್ಲರ್, ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಈಗಾಗಲೇ ಯ್ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಕರು ನೋಡಿದ್ದು, ಕಿರುಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  'ಹಿಟ್ಲರ್' ಕಿರುಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವುದು ರಾಜ್ ಹಿರೇಮಠ ಎಂಬ ನವನಟ. ಮೂಲತಃ ರಂಗಭೂಮಿ ಕಲಾವಿದರಾಗಿರುವ ರಾಜ್ ಹಿರೇಮಠ ತಮ್ಮ ಗಂಭೀರ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿಕ್ರಂ ದೇವ್, ಸಂಜಯ್, ವಂದನಾ, ಉಮ್ಮಿ, ಮುಖೇಶ್, ಸುಕುಮಾರ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

  ಇನ್ನು ಈ ಕಿರುಚಿತ್ರವನ್ನ ಅನ್ನಪೂರ್ಣ ಹಿರೇಮಠ ಅವರು ನಿರ್ಮಾಣ ಮಾಡಿದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಚೇತನ್ ಅಪ್ಪು. ವಿಜಯ್ ರಾಜ್ ಅವರ ಸಂಗೀತ ಮತ್ತು ಗೌತಮ್ ನಾಯಕ್ ಅವರ ಛಾಯಾಗ್ರಹಣ ಈ ಕಿರುಚಿತ್ರಕ್ಕಿದೆ.

  'ಹಿಟ್ಲರ್' ಕನ್ನಡ ಕಿರುಚಿತ್ರ ಇಲ್ಲಿದೆ ನೋಡಿ

  English summary
  Raj Hiremath Starrer Kannada Short Movie Hitler Released. The Movie Directed By Chethan Appu and Features Sanjay, Vandhana, Ummi, Mukhesh, Sukumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X