ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾ- ದರ್ಶನ್ ಪರ ಧ್ವನಿ ಎತ್ತಿದ ಖ್ಯಾತ ಗಾಯಕಿ...!

ಕನ್ನಡ ಚಿತ್ರರಂಗ ದರ್ಶನ್ ಅವರಿಗೆ ಕೈ ಕೊಡ್ತು ಅನ್ನುವುದು ಅನೇಕರ ಅಭಿಪ್ರಾಯ. ಯಾಕೆಂದರೆ.. ದರ್ಶನ್ ಪರ ಒಲವು ತೋರಿದವರ ಸಂಖ್ಯೆ ತೀರಾ ಕಡಿಮೆ. ಆದರೆ.. ಈಗ ತಡವಾಗಿಯಾದರೂ ಒಬ್ಬೊಬ್ಬರಾಗಿ ದರ್ಶನ್ ಪರ ಮಾತನಾಡಲು ಶುರು ಮಾಡಿದ್ದಾರೆ. ಈ ಸಾಲಿಗೆ ಈಗ ಡಾ.ಶಮಿತಾ ಮಲ್ನಾಡ್ ಸೇರ್ಪಡೆಯಾಗಿದ್ದಾರೆ.

ಹೌದು, ತಮ್ಮ ಕಂಠದಿಂದ ಕನ್ನಡಿಗರ ಮನ ಗೆದ್ದ ಗಾಯಕಿ ಡಾ.ಶಮಿತಾ ಮಲ್ನಾಡ್, ದರ್ಶನ್‌ ಪರ ಮಾತನಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾದ ಲೇಖನ ಬರೆದುಕೊಂಡಿದ್ದಾರೆ.

kannada-singer-dr-shamitha-malnad-came-out-in-support-of-darshan-in-the-renukaswamy-case

ಮನಸೇ ಮನಸೇ.. ಸೋಲೋ ಗೆಲುವೋ, ನೋವೋ ನಲಿವೋ.. ಏಳೋ ಬೀಳೋ.. ಕಲ್ಲೋ ಮುಳ್ಳೋ.. ಜೀವನದ ಹಾದಿ ಸುಲಭವಲ್ಲ..ಯಶಸ್ಸಿನ ಹಾದಿ ಸುಗಮವಲ್ಲ... ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು ದರ್ಶನ್ ತೂಗುದೀಪ ಎಂದಿರುವ ಶಮಿತಾ ಮಲ್ನಾಡ್, ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು ಅಂದಿದ್ದಾರೆ. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾ.... ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು,, ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು,,, ತಪ್ಪಾಗಿದೆಯೋ ಇಲ್ಲವೋ ಏನಾಗಿದೆ ಎಂದು ಅರಿಯದವರು ನಾವು ಎಂದಿರುವ ಡಾ.ಶಮಿತಾ ಮಲ್ನಾಡ್, ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು, ತಪ್ಪಾಗಿದ್ದರೆ ನ್ಯಾಯಾಂಗವಿದೆ, ಕಾನೂನಿದೆ, ಶಿಕ್ಷೆ ಇದೇ ಎಂದು ಕೂಡ ಹೇಳಿದ್ದಾರೆ.

kannada-singer-dr-shamitha-malnad-came-out-in-support-of-darshan-in-the-renukaswamy-case

ಅಕಾಲ ನಿಧನರಾದ ಶ್ರೀ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ,,, ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ,, ನೆರವು, ಆಸರೆ, ನ್ಯಾಯ ಬೇಕಿದೆ,ಹಾಗೆ ಸೋಶಿಯಲ್ ಮೀಡಿಯಾವನ್ನು ದಯವಿಟ್ಟು ಒಳಿತಿಗೆ ಉಪಯೋಗಿಸಿ,, ಎಲ್ಲರ ಮೇಲೆ ಗೌರವವಿರಲಿ,, ಕಾಮೆಂಟ್ಸ್, ಪೋಸ್ಟ್, ಮೇಲೆ ಹಿಡಿತವಿರಲಿ, ಎಂದಿರುವ ಕನ್ನಡ ಚಿತ್ರರಂಗದ ಗಾಯಕಿ ಶಮಿತಾ ಮಲ್ನಾಡ್ , ದರ್ಶನ್ ಅಣ್ಣಾ,, ಕನ್ನಡದ ಕುಟುಂಬ,, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ,, ಕಲಾವಿದರ ಕುಟುಂಬ,, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗ್ಲೂ ಜೊತೆ ಇರುತ್ತೇವೆ,, ಅಲ್ಲವೇ??? ಹಾಗೆ ಪ್ರೀತಿ ಅಭಿಮಾನ ಬದಲಾಗದು, ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಬೇಕು .. ನ್ಯಾಯ ಎಲ್ಲರಿಗೂ ಒಂದೇ,,,
ದರ್ಶನ್ ಅವರನ್ನು ಪ್ರೀತಿಸುವ ಎಲ್ಲರಿಗೂ ನೋವಾಗಿದೆ,,ಸಂಕಟವಾಗಿದೆ, ಎಂದಿದ್ದಾರೆ.

ಇದು ಸಂಯಮ, ತಾಳ್ಮೆ, ಪ್ರಾರ್ಥನೆಯ ಸಮಯ, ಸಿಟ್ಟು, ಕೋಪ, ಅಸಹನೆ, ಹತಾಶೆ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ತೊಂದರೆ ಒಡ್ಡಬಹುದು,,ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು, ಎಂದಿರುವ ಡಾ.ಶಮಿತಾ ಮಲ್ನಾಡ್ ಕಾಯೋಣ ಸಮಾಧಾನದಿಂದ ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X