ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ನಂದಿತಾ
Recommended Video

ಕನ್ನಡದ ಜನಪ್ರಿಯ ಗಾಯಕಿಯರ ಪೈಕಿ ನಂದಿತಾ ಕೂಡ ಒಬ್ಬರು. ಸಾಕಷ್ಟು ಸೂಪರ್ ಹಿಟ್ ಸಿನಿಮಾ ಹಾಡುಗಳಿಗೆ ಧ್ವನಿಯಾಗಿರುವ ಇವರು ಈಗ ಅಮ್ಮನಾದ ಸಂಭ್ರಮದಲ್ಲಿ ಇದ್ದಾರೆ.
ಗಾಯಕಿ ನಂದಿತಾ ಅವರು ರಾಕೇಶ್ ಅವರೊಂದಿಗೆ ವಿವಾಹ ಆಗಿದ್ದು, ಈ ದಂಪತಿಗೆ ಈಗ ಗಂಡು ಮಗು ಜನಿಸಿದೆ. ಈ ಸಂತಸ ವಿಷಯವನ್ನು ನಂದಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಅಂದರೆ ಸ್ವಾತಂತ್ರ್ಯ ದಿನಾಚರಣೆ ದಿನ ಮಗು ಹುಟ್ಟಿದೆ. ಫೇಸ್ ಬುಕ್ ನಲ್ಲಿ ನಂದಿತಾ ಅವರ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದ ಮಿತ್ರರು ಶುಭ ಹಾರೈಸಿದ್ದಾರೆ.

ಅಂದಹಾಗೆ, ನಂದಿತಾ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಇಳಯರಾಜ, ಮನೋ ಮೂರ್ತಿ, ಗುರುಕಿರಣ್, ವಿ.ಮನೋಹರ್, ರಾಜೇಶ್ ರಾಮನಾಥ್ ಸೇರಿದಂತೆ ಅನೇಕರ ಸಿನಿಮಾಗಳಿಗೆ ಹಾಡಿದ್ದಾರೆ. 'ಹಬ್ಬ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಂದಿತಾ ಒಂದು ಕಾಲದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಗಾಯಕಿ ಆಗಿದ್ದರು.

'ನನ್ನ ಪ್ರೀತಿಯ ಹುಡುಗಿ', 'ದುನಿಯಾ', 'ಆಪ್ತಮಿತ್ರ'' ಇಂತಿ ನಿನ್ನ ಪ್ರೀತಿಯ' 'ರಾಮ್' ಸೇರಿದಂತೆ ಸಾಕಷ್ಟು ಸಿನಿಮಾದ ಹಾಡುಗಳಿಗೆ ನಂದಿತಾ ಧ್ವನಿಯಾಗಿದ್ದಾರೆ. ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಹೀಗೆ ಸಾಕಷ್ಟು ಪ್ರಶಸ್ತಿಗಳು ಸಹ ಅವರ ಹೆಸರಿನಲ್ಲಿ ಇವೆ.


Click it and Unblock the Notifications











