twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕ ರಾಜೇಶ್ ಕೃಷ್ಣನ್ ಅವರ ತಂದೆ ನಿಧನ

    By Naveen
    |

    ಕನ್ನಡ ಚಿತ್ರರಂಗದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ತಂದೆ ಕೃಷ್ಣಮೂರ್ತಿ ಇಂದು (ಏಪ್ರಿಲ್ 21) ಬೆಳಿಗ್ಗೆ ನಿಧನರಾಗಿದ್ದಾರೆ. ಈ ವಿಷ್ಯವನ್ನ ಗಾಯಕಿ ಶಮಿತಾ ಮಲ್ನಾಡ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಷ್ಯ ತಿಳಿದ ಅಭಿಮಾನಿಗಳು ಕೂಡ ರಾಜೇಶ್ ಕೃಷ್ಣನ್ ಅವರ ತಂದೆಯ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಕೃಷ್ಣಮೂರ್ತಿ ಮತ್ತು ಮೀರಾ ದಂಪತಿಗೆ ಇಬ್ಬರು ಮಕ್ಕಳು. ಗಾಯಕ ರಾಜೇಶ್ ಕೃಷ್ಣನ್ ಮತ್ತು ಸುಜಾತ. ಈಗ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನ ಕೃಷ್ಣಮೂರ್ತಿ ಅವರು ಅಗಲಿದ್ದಾರೆ.

    ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮೆಲೋಡಿ ಕಿಂಗ್ ಅಂತಾನೇ ಖ್ಯಾತಿ ಗಳಿಸಿರುವ ಹಾಡುಗಾರ ರಾಜೇಶ್ ಕೃಷ್ಣನ್ ಅವರು 1991ರಲ್ಲಿ ಈ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಇದೀಗ 2016ರಲ್ಲಿ 25 ವರ್ಷ ಪೂರೈಸಿ 'ಸಿಲ್ವರ್ ಜ್ಯುಬಿಲಿ'ಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಐದು ವರ್ಷವಿರುವಾಗಲೇ ರಾಜೇಶ್ ಅವರು ಹಾಡಲು ಆರಂಭಿಸಿದ್ದರು ಎಂದು ಅವರ ತಂದೆ ಕೃಷ್ಣಮೂರ್ತಿ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಾಗ ಹೇಳಿದ್ದರು.

    Kannada singer rajesh krishnan father krishnamurthy passes away

    ಕನ್ನಡದಲ್ಲಿ ಸುಮಾರು 3,500 ಹಾಡುಗಳನ್ನು ಹಾಡಿದ್ದು, 500 ಹಾಡು ತೆಲುಗು, 250 ಕ್ಕೂ ಹೆಚ್ಚು ಹಾಡುಗಳನ್ನು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಹಾಡಿದ್ದಾರೆ. ಜೊತೆಗೆ ಇವರು 15 ಬೇರೆ ಬೇರೆ ಭಾಷೆಗಳಲ್ಲಿ ಭಕ್ತಿ ಗೀತೆಗಳು, ಕಮರ್ಷಿಯಲ್ ಗೀತೆಗಳು ಹಾಗೂ ಭಾವಗೀತೆಗಳ ಜೊತೆಗೆ ಸಾಕಷ್ಟು ಆಲ್ಬಂಗಳಿಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ.

    ಇವಿಷ್ಟೆ ಅಲ್ಲದೇ, 'ಅಮೃತಧಾರೆ', 'ನೂರು ಜನ್ಮಕೂ', 'ಪ್ಯಾರಿಸ್ ಪ್ರಣಯ', 'ನನ್ನ ಪ್ರೀತಿಯ ಹುಡುಗಿ', ಮುಂತಾದ ಪ್ರಾಜೆಕ್ಟ್ ಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ದುಡಿದಿದ್ದಾರೆ. ತೆಲುಗು ಇಂಡಸ್ಟ್ರಿಯ ನಂದಿ ಆವಾರ್ಡ್, ಫಿಲಂ ಫೇರ್ ಆವಾರ್ಡ್, ಕರ್ನಾಟಕ ಸ್ಟೇಟ್ ಆವಾರ್ಡ್, ಕೀಮಾ, ಸೈಮಾ, ಆರ್ಯಭಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.

    English summary
    Kannada popular singer Rajesh Krishnan father krishnamurthy passes away Today (April 21st).
    Saturday, April 21, 2018, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X