ತಾಯಿಯಾದ ಸಂತಸದಲ್ಲಿ 'ಮಜಾ ಟಾಕೀಸ್' ರಾಣಿ ಶ್ವೇತಾ ಚೆಂಗಪ್ಪ

Recommended Video

ತಾಯಿಯಾದ ಖುಷಿಯಲ್ಲಿ 'ಮಜಾ ಟಾಕೀಸ್' ರಾಣಿ ಶ್ವೇತಾ ಚೆಂಗಪ್ಪ

ಕಿರುತೆರೆಯ ಖ್ಯಾತ ನಟಿ ಶ್ವೇತ ಚೆಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಆಗಮಿಸಿರುವ ಹೊಸ ಸದಸ್ಯನನ್ನು ಶ್ವೇತಾ ದಂಪತಿ ಅತೀವ ಸಂತಸದಿಂದ ಸ್ವಾಗತ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ವೇತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂತಸದ ಸುದ್ದಿಯನ್ನು ನಟಿ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

"ತಾಯಿ, ತಂದೆ, ಕುಟುಂಬ ಮತ್ತು ಸ್ನೇಹಿತರ ಪ್ರೀತಿ ಮತ್ತು ಹಾರೈಕೆಯಿಂದ ನಾನು ಮತ್ತು ಕಿರಣ್ ರಾಶಿ ರಾಶಿ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗು ಆಗಿದೆ" ಎಂದು ಬರೆದುಕೊಂಡಿದ್ದಾರೆ.

Kannada Small Screen Actress Shweta Changappa Gave Birth To Baby Boy

ಕಳೆದ ಕೆಲವು ದಿನಗಳಿಂದ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಶ್ವೇತಾ ಈ ಸಂತಸದ ಕ್ಷಣಕ್ಕಾಗಿ ಕಾಯುತ್ತಿದ್ದರು. ಸ್ನೇಹಿತರು, ಕುಟುಂಬದವರು ಶ್ವೇತಾ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದರು. ಸದ್ಯ ತಾಯಿಯಾದ ಸಂತಸದಲ್ಲಿದ್ದಾರೆ ಶ್ವೇತಾ. ಕಿರುತೆರೆ ಮತ್ತು ಬೆಳ್ಳೆತೆರೆಮೇಲು ಮಿಂಚಿರುವ ಶ್ವೇತಾ ಇತ್ತೀಚಿನ ದಿನಗಳಲ್ಲಿ ಮಜಾ ಟಾಕೀಸ್ ರಾಣಿ ಅಂತಾನೆ ಖ್ಯಾತಿಗಳಿಸಿದ್ದರು

English summary
Kannada Small screen actress Shweta Changappa gave birth to baby boy.
Read more about: baby tv ಮಗು ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X