ನಟಿ ಸಂಗೀತಾ ಭಟ್ ಪತಿಗೆ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ!

Recommended Video

Yash Fans death threats to stand-up comedian Sudarshan over a Joke | FILMIBEAT KANNADA

ಕನ್ನಡದ ಸ್ಯಾಂಡ್ ಅಪ್ ಕಾಮಿಡಿಯನ್ ಸುದರ್ಶನ್ ರಂಗಪ್ರಸಾದ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ ಬಂದಿದೆಯಂತೆ. ಈ ಸಂಗತಿಯನ್ನು ಅವರೇ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಸುದರ್ಶನ್ ರಂಗಪ್ರಸಾದ್ ಕನ್ನಡದ ನಟಿ ಸಂಗೀತಾ ಭಟ್ ಪತಿ. ಯೂ ಟ್ಯೂಬ್ ನಲ್ಲಿ ಇರುವ ಸುದರ್ಶನ್ ಸ್ಯಾಂಡ್ ಅಪ್ ಕಾಮಿಡಿ ವಿಡಿಯೋ ವಿರುದ್ಧ ಯಶ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಡೈಲಾಗ್ ಉಪಯೋಗಿಸಿಕೊಂಡಿದ್ದು, 'ಬಿಲ್ಡಪ್ ಡೈಲಾಗ್' ಎಂಬ ಪದ ಬಳಸಲಾಗಿದೆ.

ಯಶ್ ಗೆ 'ಬಿಲ್ಡಪ್ ಡೈಲಾಗ್' ಎಂಬ ಪದ ಬಳಕೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಸುದರ್ಶನ್ ರಂಗಪ್ರಸಾದ್ ರಿಗೆ ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುದರ್ಶನ್ ರಂಗಪ್ರಸಾದ್ ಆರೋಪ ಮಾಡಿದ್ದಾರೆ.

'ಬಿಲ್ಡಪ್ ಡೈಲಾಗ್' ಎಂಬ ಪದ ಬಳಕೆ

'ಬಿಲ್ಡಪ್ ಡೈಲಾಗ್' ಎಂಬ ಪದ ಬಳಕೆ

''ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ 'ಬಿಲ್ಡಪ್ ಡೈಲಾಗ್' ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ'' ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ 'ಅಣ್ತಾಮ್ಮ', 'ಹವಾ' ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಯಶ್ ಬಗ್ಗೆ 'ಬಿಲ್ಡಪ್ ಡೈಲಾಗ್' ಎಂದು ಬಳಸಿದ್ದು, ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಬಗ್ಗೆ ಸುದರ್ಶನ್ ರಂಗಪ್ರಸಾದ್ ಸ್ಪಷ್ಟನೆ

ಘಟನೆ ಬಗ್ಗೆ ಸುದರ್ಶನ್ ರಂಗಪ್ರಸಾದ್ ಸ್ಪಷ್ಟನೆ

ಈ ಘಟನೆ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ಸುದರ್ಶನ್ ರಂಗಪ್ರಸಾದ್ '' ಎರಡು ವರ್ಷದ ಹಳೇ ವಿಡಿಯೋದಲ್ಲಿ ನಾನು ಯಶ್ ಅವರ ಡೈಲಾಗ್ ಉಪಯೋಗಿಸಿ ನಮ್ಮ ಕಾಲೇಜ್ ಹಾಗೂ ಕುಟುಂಬದವರು ಯಾವ ರೀತಿ ಮಾತಾಡ್ತಾರೆ ಅನ್ನೋ ಬಗ್ಗೆ ಹಾಸ್ಯ ನಾಟಕ ಮಾಡಿದೀನಿ ವಿನಃ ಯಶ್ ಅವರನ್ನು ಟೀಕೆ ಮಾಡುವ ಯಾವ ಉದ್ದೇಶವೂ ನನಗೂ ಹಾಗೂ lolbagh ಗೂ ಇಲ್ಲ. ಕ್ಷಮೆ ಇರಲಿ.'' ಎಂದಿದ್ದಾರೆ.

ಜೀವ ಬೆದರಿಕೆಗಳು ಬರುತ್ತಿವೆ

ಜೀವ ಬೆದರಿಕೆಗಳು ಬರುತ್ತಿವೆ

''ಈ ವೀಡಿಯೋವನ್ನು ಅಪಾರ್ಥ ಮಾಡಿಕೊಂಡು ಅದನ್ನು ಕೆಟ್ಟದಾಗಿ ಟ್ರೊಲ್ ಮಾಡುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪಿಲ್ಲ, ಹಾಸ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತೇನೆ. ಯಶ್ ಫ್ಯಾನ್ಸ್ ಕಡೆಯಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಕೆಟ್ಟ ರೀತಿಯಲ್ಲಿ ಎಸ್ ಎಂ ಎಸ್ ಹಾಗೂ ಜೀವ ಬೆದರಿಕೆಗಳು ಬರುತ್ತಿವೆ. ಕಂಡಿತವಾಗಿಯು ಯಶ್ ಅವರು ಸಹ ಅವರ ಫ್ಯಾನ್ಸ್ ಗಳಿಂದ ಇಂಥ ನಡುವಳಿಕೆಗಳನ್ನು ಮೆಚ್ಚುವುದಿಲ್ಲ.'' ಎಂದು ತಿಳಿಸಿದ್ದಾರೆ.

ಸೈಬರ್ ಕ್ರೈಮ್ ಪೊಲೀಸರ ಮೊರೆ

ಸೈಬರ್ ಕ್ರೈಮ್ ಪೊಲೀಸರ ಮೊರೆ

ಯಶ್ ಅಭಿಮಾನಿಗಳ ಕೆಟ್ಟ ಕಾಮೆಂಟ್ಸ್ ಗಳನ್ನು, ಟ್ರೋಲ್ ಗಳನ್ನು, ಜೀವ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಸುದರ್ಶನ್ ರಂಗಪ್ರಸಾದ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಬೆಂಗಳೂರು ಸಿಟಿ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ. ''ದಯವಿಟ್ಟು, ಅಪಾರ್ಥ ಮಾಡಿಕೊಂಡ ಯಶ್ ಫ್ಯಾನ್ಸ್, ಯಾರನ್ನು ನೋಯಿಸುವ ಅಥವಾ disrespect ಮಾಡುವ ಉದ್ದೇಶ ನನ್ನದಲ್ಲ.'' ಎಂದು ಹೇಳಿದ್ದಾರೆ.

More from Filmibeat

English summary
Kannada stand up comedian, actress Sangeetha Bhat husband Sudarshan Rangaprasad got death threats from actor Yash fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X