For Quick Alerts
  ALLOW NOTIFICATIONS  
  For Daily Alerts

  'ಸರಳತೆಯ ಸಾಹುಕಾರರು' : ಸಣ್ಣ ಅಂಗಡಿಯಲ್ಲಿ ಸಿಗೋ ರುಚಿ ಸ್ಟಾರ್ ಹೋಟೆಲ್ ನಲ್ಲೂ ಸಿಗಲ್ಲ

  By Naveen
  |
  ಈ ಸ್ಟಾರ್ಸ್ ಗಳ ಸರಳತೆ ನೋಡಿದ್ರೆ ನಿಮಗೆ ಇವರಮೇಲೆ ಅಭಿಮಾನ ಹೆಚ್ಚಾಗುತ್ತೆ | Filmibeat Kannada

  ಕನ್ನಡದ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಅವರ ಸಂಭಾವನೆ ಕೋಟಿ ಕೋಟಿ ಇದೆ. ಆದರೆ ಕೋಟಿ ದುಡಿಯುವ ಈ ನಟರು ತಮ್ಮ ದುಡ್ಡಿನ ಮೂಲಕ ಮಾತ್ರವಲ್ಲದೆ, ತಮ್ಮ ಸರಳತೆಯ ಮೂಲಕ ಸಾಹುಕಾರರಾಗಿದ್ದಾರೆ.

  ದೊಡ್ಡ ಹೋಟೆಲ್, ಪಾರ್ಟಿ, ಹತ್ತಾರು ವೆರೈಟಿ ಊಟ ಎಲ್ಲ ಇದ್ದರೂ ಈ ನಟರು ಮಾತ್ರ ರಸ್ತೆ ಬದಿಯ ಪುಟ್ಟ ಅಂಗಡಿಯ ತಿಂಡಿಗಳನ್ನು ಸವಿಯುತ್ತಿದ್ದಾರೆ. 'ಶ್ರೀಮಂತರ ಮನೆ ನೋಟ ಚೆಂದ, ಬಡವರ ಮನೆ ಊಟ ಚೆಂದ' ಎನ್ನುವ ಮಾತಿನ ಹಾಗೆ ಸಣ್ಣ ಅಂಗಡಿಯ ಊಟದ ರುಚಿಯನ್ನು ಆನಂದಿಸುತ್ತಿದ್ದಾರೆ.

  ಅಂದಹಾಗೆ, ಕನ್ನಡದ ಕೆಲವು ನಟರ ಅಂತಹ ಫೋಟೋಗಳು ಮುಂದಿದೆ ಓದಿ...

  ರಾಧಕ್ಕನ ಹೋಟೆಲ್ ನಲ್ಲಿ ಕಿಚ್ಚ ಉಪಹಾರ

  ರಾಧಕ್ಕನ ಹೋಟೆಲ್ ನಲ್ಲಿ ಕಿಚ್ಚ ಉಪಹಾರ

  ಚುನಾವಣಾ ಪ್ರಚಾರದಲ್ಲಿ ಬಿಜಿ ಆಗಿದ್ದ ನಟ ಸುದೀಪ್ ಮೊಳಕಾಲ್ಮೂರು ಗೆ ತೆರಳುವ ಮುನ್ನ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ತಿಂದು ಟೀ ಕುಡಿದಿದ್ದಾರೆ. ರಾಧಾ ಎನ್ನುವ ಬಡ ಮಹಿಳೆ ಚಪ್ಪರ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದು, ಅದೇ ಹೋಟೆಲ್ ನಲ್ಲಿ ಸುದೀಪ್ ಚಿತ್ರಾನ್ನ ತಿಂದು ಟೀ ಕುಡಿದಿದ್ದಾರೆ. ಬಳಿಕ ರಾಧಕ್ಕನಿಗೆ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ.

  ರಸ್ತೆ ಬದಿ ತಿಂಡಿ ತಿಂದ ಕಿಚ್ಚ ಮಾಲೀಕರಿಗೆ ಕೊಟ್ಟ ಹಣ ಎಷ್ಟು? ರಸ್ತೆ ಬದಿ ತಿಂಡಿ ತಿಂದ ಕಿಚ್ಚ ಮಾಲೀಕರಿಗೆ ಕೊಟ್ಟ ಹಣ ಎಷ್ಟು?

  ಪೆಟ್ಟಿಗೆ ಅಂಗಡಿಯಲ್ಲಿ ಅಪ್ಪು ಟೀ ಪಾರ್ಟಿ

  ಪೆಟ್ಟಿಗೆ ಅಂಗಡಿಯಲ್ಲಿ ಅಪ್ಪು ಟೀ ಪಾರ್ಟಿ

  ನಟ ಪುನೀತ್ ರಾಜ್ ಕುಮಾರ್ ಕೂಡ ಅನೇಕ ಬಾರಿ ಈ ರೀತಿ ರಸ್ತೆ ಬದಿಯ ಅಂಗಡಿಗಳಲ್ಲಿ ಊಟ ಮಾಡಿದ್ದಾರೆ. ಇನ್ನು 'ರಾಜಕುಮಾರ' ಚಿತ್ರದ ವಿಜಯ ಯಾತ್ರೆಯ ಸಮಯದಲ್ಲಿ ಪುನೀತ್ ರಸ್ತೆ ಮಧ್ಯೆ ಇದ್ದ ಒಂದು ಚಿಕ್ಕ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿಯುವ ಮೂಲಕ ನಾನೊಬ್ಬ ಸರಳತೆಯ ರಾಜಕುಮಾರ ಎನ್ನುವುದನ್ನು ತೋರಿಸಿದ್ದಾರೆ.

  ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ

  ರಸ್ತೆ ಬದಿಯ ಅಂಗಡಿಗಳಲ್ಲಿ ಶಿವಣ್ಣ ಲಂಚ್, ಡಿನ್ನರ್

  ರಸ್ತೆ ಬದಿಯ ಅಂಗಡಿಗಳಲ್ಲಿ ಶಿವಣ್ಣ ಲಂಚ್, ಡಿನ್ನರ್

  ಸಿಂಪ್ಲಿಸಿಟಿ ಅಂದರೆ ಶಿವಣ್ಣ, ಶಿವಣ್ಣ ಅಂದರೆ ಸಿಂಪ್ಲಿಸಿಟಿ ಎನ್ನುವ ಮಾತಿದೆ. ಅದೇ ಕಾರಣಕ್ಕೆ ಶಿವರಾಜ್ ಕುಮಾರ್ ಎಲ್ಲರಿಗೆ ಇಷ್ಟ ಆಗುತ್ತಾರೆ. ಶಿವಣ್ಣ ಅನೇಕ ಬಾರಿ ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲಿ ಪಾನಿಪೂರಿ ತಿಂದಿದ್ದಾರೆ. ಇತ್ತೀಚಿಗಷ್ಟೆ 'ಕವಚ' ಚಿತ್ರದ ಶೂಟಿಂಗ್ ವೇಳೆ ಶಿವಮೊಗ್ಗ ಜಿಲ್ಲೆಯ ಪುಟ್ಟ ಹಳ್ಳಿಯ ಪುಟ್ಟ ಅಂಗಡಿಯಲ್ಲಿ ಶಿವಣ್ಣ ಊಟ ಮಾಡಿದ್ದರು.

  ಅನ್ನಕ್ಕೆ ಬೆಲೆ ಕೊಡುವ ದರ್ಶನ್

  ಅನ್ನಕ್ಕೆ ಬೆಲೆ ಕೊಡುವ ದರ್ಶನ್

  ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿರುವ ನಟ ದರ್ಶನ್ ಸಾಕಷ್ಟು ಬಾರಿ ತಮ್ಮ ಸರಳತೆ ಮೂಲಕ ಇಷ್ಟ ಆಗುತ್ತಾರೆ. ಎಷ್ಟೇ ದೊಡ್ಡ ನಟನಾದರು ಅವರು ಅನ್ನಕ್ಕೆ ಗೌರವ ನೀಡುತ್ತಾರೆ. ಅನೇಕ ಕಾರ್ಯಕ್ರಮಗಳಲ್ಲಿ ದರ್ಶನ್ ಅಭಿಮಾಗಳ ಜೊತೆಗೆ ಕುಳಿತು ಸಾಮಾನ್ಯನಂತೆ ಊಟ ಮಾಡಿದ್ದಾರೆ.

  ಚಿತ್ರನ್ನಾ ಅಂದರೆ ಉಪ್ಪಿಗೆ ಪ್ರಾಣ

  ಚಿತ್ರನ್ನಾ ಅಂದರೆ ಉಪ್ಪಿಗೆ ಪ್ರಾಣ

  ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಚಿತ್ರಾನ್ನ ಅಂದರೆ ಪ್ರಾಣ. ಊಟದ ಮೆನುವಿನಲ್ಲಿ ಅದೇನೇ ಪದಾರ್ಥಗಳು ಇದ್ದರೂ ಮೊದಲು ಉಪ್ಪಿ ಕೈ ಹಾಕುವುದು ಚಿತ್ರನ್ನಾಗೆ. ಸಣ್ಣ ಹೋಟೆಲ್ ಗಳಲ್ಲಿ ಸಿಗುವ ರುಚಿ ಯಾವ ಸ್ಟಾರ್ ಹೋಟೆಲ್ ನಲ್ಲಿ ಸಿಗಲ್ಲ ಎನ್ನುವುದು ಉಪ್ಪಿ ಮಾತು.

  English summary
  Kannada star actors Puneeth Rajkumar, Shiva Rajkumar, Upendra, Darshan and Sudeep simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X