»   » ಒಂದೇ ಸಿನಿಮಾದಲ್ಲಿ ರವಿಚಂದ್ರನ್, ಶಿವಣ್ಣ, ಪುನೀತ್ ಹಾಗೂ ಸುದೀಪ್..!

ಒಂದೇ ಸಿನಿಮಾದಲ್ಲಿ ರವಿಚಂದ್ರನ್, ಶಿವಣ್ಣ, ಪುನೀತ್ ಹಾಗೂ ಸುದೀಪ್..!

Posted By:
Subscribe to Filmibeat Kannada

ಕನ್ನಡದಲ್ಲಿ ಈಗ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಈಗಾಗಲೇ 'ಮುಕುಂದ ಮುರಾರಿ', 'ಚೌಕ', 'ದಿ ವಿಲನ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದಾರೆ.

'ದಿ ವಿಲನ್' ಗ್ಯಾಂಗ್ ಗೆ ಎಂಟ್ರಿ ಕೊಟ್ಟ ಮಾಸ್ ಕಿಂಗ್ ಶಿವಣ್ಣ..!

ಆದರೆ ಈಗ ಒಂದೇ ಸಿನಿಮಾದಲ್ಲಿ ನಟ ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್, ಸುದೀಪ್ ಇರಲಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ಈ ಹೊಸ ಸಿನಿಮಾಗಾಗಿ ಸ್ಟಾರ್ ನಟರು ಒಂದಾಗಲಿದ್ದಾರೆ. ಮುಂದೆ ಓದಿ...

'ಬಕಾಸುರ' ಚಿತ್ರ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಬಕಾಸುರ' ಸಿನಿಮಾದಲ್ಲಿ ಶಿವರಾಜ್ ಕುಮಾರ್, ಪುನೀತ್, ಸುದೀಪ್, ಉಪೇಂದ್ರ, ದರ್ಶನ್ ಸೇರಿದಂತೆ ಕನ್ನಡದ ಸ್ಟಾರ್ ನಟರು ಒಂದಾಗಲಿದ್ದಾರೆ.

ಪ್ರೀತಿ ಅಪ್ಪನ ಹುಟ್ಟುಹಬ್ಬಕ್ಕೆ ಪುತ್ರ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ...

ಪ್ರಮೋಷನ್ ಸಾಂಗ್

'ಬಕಾಸುರ' ಚಿತ್ರದ ನಿರ್ದೇಶಕ ನವನೀತ್, ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಮೋಷನಲ್ ಸಾಂಗ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈ ವಿಶೇಷ ಹಾಡಿನಲ್ಲಿ ಕನ್ನಡದ ಸ್ಟಾರ್ ನಟರು ಭಾಗಿಯಾಗಲಿದ್ದಾರೆ.

ಹಾಡು ಹಾಡಲಿರುವ ನಟರು

ಚಿತ್ರದ ಒಂದು ಹಾಡನ್ನು ಕನ್ನಡದ 35 ನಟರ ಹತ್ತಿರ ಹಾಡಿಸುವ ವಿಭಿನ್ನ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. 'ವಿ ಆಲ್ ಒನ್' ಎಂಬ ಸಾಲನ್ನು ಎಲ್ಲ ನಟರು ಹಾಡಲಿದ್ದಾರೆ.

'ಬಕಾಸುರ' ಚಿತ್ರದ ಬಗ್ಗೆ

'ಕರ್ವ' ಚಿತ್ರದ ಖ್ಯಾತಿಯ ನಿರ್ದೇಶಕ ನವನೀತ್ 'ಬಕಾಸುರ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿಚಂದ್ರನ್ ಮತ್ತು ಆರ್ ಜೆ ರೋಹಿತ್ ಚಿತ್ರದ ನಾಯಕರಾಗಿದ್ದಾರೆ. ಸದ್ಯ ಗೋವಾದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

English summary
Kannada Star Actors to sing in 'Bakasura' Movie Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada