ಶಿವಣ್ಣ, ಪುನೀತ್, ದರ್ಶನ್, ಕನ್ನಡದ ಸ್ಟಾರ್ ನಟರೆಲ್ಲರೂ ಒಂದೇ ಹಾಡಿನಲ್ಲಿ!
ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ದರ್ಶನ್, ರಮೇಶ್ ಅರವಿಂದ ಇವರೆಲ್ಲರೂ ಅದ್ಭುತ ನಟರು. ಎಲ್ಲರಲ್ಲೂ ಒಂದೊಂದು ಭಿನ್ನತೆ. ಇವರೆಲ್ಲರೂ ಒಮ್ಮೆಲೆ ತೆರೆಯ ಮೇಲೆ ಬಂದರೆ ಹೇಗಿರುತ್ತೆ? ಊಹಿಸಿ.
Recommended Video
ಹೌದು, ಎಲ್ಲಾ ನಟರು ಒಂದೇ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕೊರೊನಾ ಕುರಿತು ಜಾಗೃತ ಗೀತೆಯೊಂದರಲ್ಲಿ ಕನ್ನಡ ಬಹುತೇಕ ಸ್ಟಾರ್-ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ಬದಲಾಗು ನೀನು ಬದಲಾಯಿಸು ನೀನು! ' ಎಂಬ ಹಾಡಿನಲ್ಲಿ ಕನ್ನಡದ ಪ್ರಮುಖ ನಟನಟಿಯರು, ಗಾಯಕರು, ಸಂಗೀತ ನಿರ್ದೇಶಕರು ಜೊತೆಗೆ ಕ್ರಿಕೆಟ್ ಆಟಗಾರರೂ ಸಹ ಅಭಿನಯಿಸಿದ್ದಾರೆ.

ಸೋಮವಾರ ಸಂಜೆ ಬಿಡುಗಡೆ
ಬದಲಾಗು ನೀನು ಬದಲಾಯಿಸು ನೀನು ಹಾಡು ಇದೇ ಸೋಮವಾರ ಸಂಜೆ ಬಿಡುಗಡೆ ಆಗಲಿದ್ದು, ಕೊರೊನಾ ವಿರುದ್ಧ ಜಾಗೃತಿ ಹಾಗೂ ಒಗ್ಗಟ್ಟಿನ ಕರೆ ನೀಡುವ ಸಲುವಾಗಿ ನಿರ್ಮಿಸಲಾದ ಹಾಡು ಇದಾಗಿದೆ.

ಹಲವು ಸ್ಟಾರ್ ನಟ-ನಟಿಯರಿಂದ ನಟನೆ
ಹಾಡಿನಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ರವಿಚಂದ್ರನ್, ಉಪೇಂದ್ರ, ಗಣೇಶ್, ರಕ್ಷಿತ್ ಶೆಟ್ಟಿ, ಅಭಿಶೇಕ್, ಸುಮಲತಾ ಅಂಬರೀಶ್, ನಿರೂಪಕಿ ಅನುಶ್ರೀ, ಗಾಯಕ ವಿಜಯ್ ಪ್ರಕಾಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ರಾಕ್‌ಲೈನ್ ವೆಂಕಟೇಶ್, ಮೇಘನಾ ರಾಜ್ ಸೇರಿ ಹಲವಾರು ಯುವ ನಾಯಕ ನಟಿಯರು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ
ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಸುದೀಪ್ ಹಾಗೂ ಯಶ್ ಕಾಣುತ್ತಿಲ್ಲ. ಬಹುಷಃ ಅವರು ಹಾಡಿನಲ್ಲಿ ಅಭಿನಯಿಸಿದಂತಿಲ್ಲ.

ವಿ.ಹರಿಕೃಷ್ಣ ಸಂಗೀತ, ಪವನ್ ಒಡೆಯರ್ ನಿರ್ದೇಶನ
ಹಾಡನ್ನು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆ ನಿರ್ಮಿಸುತ್ತಿದೆ. ಹಾಡಿನ ನಿರ್ದೇಶನದ ಹೊಣೆಯನ್ನು ಪವನ್ ಒಡೆಯರ್ ಹೊತ್ತಿದ್ದಾರೆ. ಹಾಡಿನ ಸಂಗೀತ ನಿರ್ದೇಶನ ವಿ.ಹರಿಕೃಷ್ಣ ಅವರದ್ದಾಗಿದೆ. ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ. ತಾರೆಯರ ಮನೆಗೆ ಹೋಗಿ ಹಾಡಿನ ಚಿತ್ರೀಕರಣ ಮಾಡಲಾಗಿದೆ.


Click it and Unblock the Notifications











