'ಜೇಮ್ಸ್' ಟೀಸರ್ ಶೇರ್ ಮಾಡದ ಕನ್ನಡದ ಸ್ಟಾರ್ ನಟರು: ಯಶ್, ದರ್ಶನ್, ಸುದೀಪ್!
ಕನ್ನಡಿಗರ ಪಾಲಿಗೆ ಅತ್ಯಂತ ವಿಶೇಷವಾದ ಸ್ಪೆಷಲ್ ಚಿತ್ರ 'ಜೇಮ್ಸ್' ಈ ಚಿತ್ರ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಮಾತ್ರ ಅಲ್ಲ ಈ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ಅತ್ಯಂತ ವಿಶೇಷ. ಯಾಕೆಂದರೆ ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕಟ್ಟ ಕಡೆಯ ಸಿನಿಮಾ. ಜೇಮ್ಸ್ ಬಿಟ್ಟರೆ ಅವರು ಮತ್ಯಾವುದೋ ರೂಪದಲ್ಲಿ, ಪಾತ್ರದಲ್ಲಿ ಎಲ್ಲರ ಮುಂದೆ ಬರುವುದಿಲ್ಲ.
ಸದ್ಯ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ಹೇಗಿದೆ? ಟೀಸರ್ ಚೆನ್ನಾಗಿದೆಯಾ, ಇಲ್ಲವಾ? ಎನ್ನುವ ಎಲ್ಲಾ ಪ್ರಶ್ನೆಗಳು ಜೇಮ್ಸ್ ವಿಚಾರದಲ್ಲಿ ಮೂಡುವುದಿಲ್ಲ. ಕಾರಣ ಈ ಟೀಸರ್ ಆರಂಭದಲ್ಲಿ 'ಬ್ಯುಸಿನೆಸ್‌ಗಿಂತಲೂ ಭಾವನೆಗಳು ದೊಡ್ಡದು' ಎನ್ನುವ ಸಾಲಿದೆ. ಈ ಟೀಸರ್ ಅಪ್ಪು ಅವರನ್ನು ನೋಡುವುದನ್ನು ಬಿಟ್ಟು ಮತ್ಯಾವುದಕ್ಕೂ ಆಸ್ಪದ ಮಾಡಿಕೊಟ್ಟಿಲ್ಲ.
ಟೀಸರ್ ರಿಲೀಸ್ ಆಗಿದ್ದೇ ತಡ, ಕಡಿಮೆ ಸಮಯದಲ್ಲಿಯೇ ದೊಡ್ಡ ಮಟ್ಟದ ದಾಖಲೆ ಬರೆದು, ವೈರಲ್ ಲಿಸ್ಟ್ ಸೇರಿಕೊಂಡಿದೆ. ಕನ್ನಡ ಚಿತ್ರರಂಗದ ಹಲವಾರು ತಾರೆಯರು ಜೇಮ್ಸ್ ಟೀಸರ್ ಹಂಚಿಕೊಂಡ ಲವ್ ಯು ಅಪ್ಪು ಎಂದು ಬರೆದುಕೊಂಡಿದ್ದರು. ಆದರೆ ಕೆಲವು ಸ್ಟಾರ್ ನಟರು ಮಾತ್ರ ಜೇಮ್ಸ್ ಹಂಚಿಕೊಂಡಿಲ್ಲ. ಅದು ಯಾರು ಎಂದು ಮುಂದೆ ಓದಿ...

'ಜೇಮ್ಸ್' ಟೀಸರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೌನ?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿ ಇರ್ತಾರೆ. ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಇಂದು ರಿಲೀಸ್ ಆದ ಜೇಮ್ಸ್ ಚಿತ್ರ ಟೀಸರನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಇದು ಯಾಕೆ ಎನ್ನುವ ಅಚ್ಚರಿ ಜನರಲ್ಲಿ ಮೂಡಿದೆ. ದರ್ಶನ್ ಅವರು ಕೊನೆಯದಾಗಿ ಮೆಜೆಸ್ಟಿಕ್ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹಂಚಿಕೊಂಡಿಲ್ಲ ಗೆಳೆಯನ ಕಡೆ ಚಿತ್ರದ ಟೀಸರ್!
ನಟ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಹಲವು ವರ್ಷಗಳ ಸ್ನೇಹಿತರು. ಈ ಹಿಂದೆ ಅಪ್ಪು ಬಗ್ಗೆ ಭಾವನಾತ್ಮಕವಾದ ವಿಚಾರಗಳನ್ನು ಸುದೀಪ್ ಅವರು ಹಲವು ಬಾರಿ ಹಂಚಿಕೊಂಡಿದ್ದಾರೆ. ಅವರಿಗೆ ಅಪ್ಪು ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ 'ಜೇಮ್ಸ್' ಚಿತ್ರದ ಟೀಸರ್ ಶೇರ್ ಮಾಡಿಕೊಂಡಿಲ್ಲ. ತಮಿಳಿನ 'ವಲಿಮೈ' ಚಿತ್ರದ ಟೀಸರನ್ನು ಕೊನೆಯದಾಗಿ ಹಂಚಿಕೊಂಡು ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

'ಜೇಮ್ಸ್' ಟೀಸರ್ ನೋಡಿಲ್ವಾ ರಾಕಿಂಗ್ ಯಶ್ ಸ್ಟಾರ್ ಯಶ್?
ಇನ್ನು ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ತಯಾರಿಯಲ್ಲಿ ಬ್ಯೂಸಿ ಆಗಿ ಇದ್ದಾರೆ. ಜೊತೆಗೆ ಅವರು ಇತ್ತೀಚೆಗೆ ಮುಂಬೈ ಏರ್ಪೋಟ್‌ನಲ್ಲಿ ಕಾಣಿಸಿಕೊಂಡಿದ್ದರು. ಯಶ್ ಅವರು ಅಪ್ಪು ಅಭಿನಯದ 'ಜೇಮ್ಸ್' ಚಿತ್ರದ ಟೀಸರ್ ನೋಡಿದ್ರಾ ಎನ್ನುವ ಪ್ರಶ್ನೆ ಹುಟ್ಟಿದೆ. ಯಾಕೆಂದರೆ ಯಶ್ ಅವರು ಕೂಡ ಜೇಮ್ಸ್ ಟೀಸರ್ ಎಲ್ಲೂ ಹಂಚಿಕೊಂಡಿಲ್ಲ, ಈ ಬಗ್ಗೆ ಮಾತನಾಡಿಲ್ಲ.

ಪ್ರೀತಿ ಮನಸಲ್ಲೇ ಇರಬಹುದು, ತೋರಿಸುವ ಅಗತ್ಯವೂ ಇಲ್ಲ!
ಯಾಕೆ ಕನ್ನಡದ ಟಾಪ್ ಸ್ಟಾರ್ ನಟರು 'ಜೇಮ್ಸ್' ಚಿತ್ರದ ಟೀಸರ್ ಹಂಚಿಕೊಂಡಿಲ್ಲ. ಅಥವಾ ಈ ಬಗ್ಗೆ ಮಾತನಾಡಿಲ್ಲ ಎನ್ನು ವಿಶ್ಲೇಷಣೆಗೆ ಇಳಿಯುವುದು ಬೇಡ. ಏಕೆಂದರೆ ಇದಕ್ಕೆ ಕಾರಣ ಇರಬಹುದು, ಇಲ್ಲದೆಯೂ ಇರಬಹದು. ಅವರು ಟೀಸರ್ ನೋಡಿರಬಹುದು, ನೋಡದೆಯೂ ಇರಬಹುದು. ಸ್ಟಾರ್ ನಟರು ಅಂದಮೇಲೆ ಅವರು ತಮ್ಮ ಕೆಲಸಗಳಲ್ಲಿ ಬ್ಯೂಸಿ ಇದ್ದೇ ಇರ್ತಾರೆ. ಇವರಿಗೆ ಅಪ್ಪು ಬಗ್ಗೆ ಇರುವ ಪ್ರೀತಿ, ಗೌರವ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇಂದು ರಿಲೀಸ್ ಅಗಿ ವೈರಲ್ ಅದ 'ಜೇಮ್ಸ್' ಟೀಸರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದವರ ಸಾಲಿನಲ್ಲಿ ಇವರೂ ಇದ್ದಾರೆ ಎನ್ನುವುದಷ್ಟೇ ವಿಚಾರ.


Click it and Unblock the Notifications











