ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌,ಸೃಜನ್ ಲೋಕೇಶ್ ಹೇಳಿದ್ದೇನು ?

ಚಿತ್ರರಂಗದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ.

ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದರು ಕೂಡ ಚಿತ್ರರಂಗದಲ್ಲಿ ಕೆಲವರು ಪ್ರತಿಕ್ರಿಯೆಯನ್ನು ನೀಡಲು ಮುಂದಾಗುತ್ತಾರೆ. ಆಗ ಸುಳ್ಳು ಸುದ್ದಿ ಕೂಡ ಕೆಲವರ ಕಣ್ಣಿಗೆ ಸತ್ಯದಂತೆ ಕಾಣಲು ಶುರುವಾಗುತ್ತೆ. ವಿವಾದ ತಣ್ಣಗಾಗುವ ಬದಲು ಕೆಲ ಒಮ್ಮೆ ಇನ್ನೂ ದೊಡ್ಡದಾಗುತ್ತೆ. ಹೀಗಾಗಿಯೇ ತಮ್ಮ ಕುರಿತು ಎಷ್ಟೇ ಸುದ್ದಿಗಳು ಚಾಲ್ತಿಯಲ್ಲಿದ್ದರು ಕೂಡ ಮಾಡದ ತಪ್ಪಿಗೆ ತಲೆ ಯಾಕೆ ಕೆಡಿಸಿಕೊಳ್ಳಬೇಕು ಎಂದು ಹಲವರು ಸುಮ್ಮನಾಗುತ್ತಾರೆ. ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಮುಂದುವರೆಯುತ್ತಾರೆ. ಉದಾಹರಣೆಗೆ ಸೃಜನ್ ಲೋಕೇಶ್.

Kannada Star Srujan Lokesh Opens Up About Controversies and Personal Relationships

ಚಂದನ್ ಮತ್ತು ನಿವೇದಿತಾ ದೂರವಾಗಲು ಸೃಜನ್ ಕಾರಣನಾ ? ಗಿರಿಜಾ ಲೋಕೇಶ್ ಹೇಳಿದ್ದೇನು..?

ಹೌದು, ಕನ್ನಡ ಚಿತ್ರರಂಗದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ವ್ಯೆಯಕ್ತಿಕ ಬದುಕು ಆಗಾಗ ಚರ್ಚೆಗೀಡಾಗಿದೆ. ಆದರೆ ಸೃಜನ್ ಮಾತ್ರ ತಮ್ಮ ಬಗ್ಗೆ ಯಾವುದೇ ನೆಗೆಟಿವ್ ವಿಚಾರ ಬಂದರೂ ಕೂಡ ಅದಕ್ಕೆ ಪ್ರತಿಕ್ರಿಯೆಯನ್ನು ನೀಡುವ ಗೋಜಿಗೆ ಹೋಗಿಲ್ಲ. ಆ ಸುದ್ದಿಗಳ ಕಡೆ ಗಮನವನ್ನು ಕೂಡ ನೀಡಿಲ್ಲ. ಯಾಕೆ ಹೀಗೆ ? ಎನ್ನುವುದಕ್ಕೆ ಉತ್ತರವನ್ನು ನೀಡಿರುವ ಸೃಜನ್ ಲೋಕೇಶ್ ಗುರುತು ಪರಿಚಯ ಇಲ್ಲದವರು ಮಾತನಾಡಿದಾಗ ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಕುರಿತು ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೃಜನ್ ಲೋಕೇಶ್ ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ ಯಾಕೆಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್‌ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಗೊತ್ತಿಲ್ಲದವರಿಗೆ ಪ್ರಾಮುಖ್ಯತೆ ಕೊಡಲಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ ಸೃಜನ್.

ಇನ್ನು, ಕೆಲವೊಂದು ಸಾರಿ ವೈಯಕ್ತಿಕ ವಿಚಾರವನ್ನು ಮಾತನಾಡುವ ಅಧಿಕಾರ ಯಾರಿಗೂ ಇರುವುದಿಲ್ಲ, ಯಾಕೆಂದರೆ ಅದರ ಹಿಂದೆ ಏನಾಗಿರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ' ಎಂದಿರುವ ಸೃಜನ್ ಕೆಲವೊಂದು ಗೊತ್ತಿಲ್ಲದ ವಿಚಾರವನ್ನು ಇದು ಹೀಗೆ ಇರಬಹುದು ಅಂದುಕೊಂಡು ಬಿಟ್ಟರೆ ಅದಕ್ಕಿಂತ ಮೂರ್ಖತನದ ಕೆಲಸ ಇನ್ನೊಂದು ಇಲ್ಲ ಎಂದು ಹೇಳಿದ್ಧಾರೆ.

ಮುಂದುವರೆದು ನನಗೆ ನಿನಗೆ ಸಂಬಂಧ ಕಟ್ಟಿ ಇವರೇ ಇರಬಹುದು, ಹೀಗೆ ಇರಬಹುದು ಎಂದರೆ ಹೇಗೆ ಗೊತ್ತು ಗುರು ನಿನಗೆ ಎಂದು ಪ್ರಶ್ನೆ ಮಾಡಿರುವ ಸೃಜನ್ ನನಗೇನು ಹೆಂಡತಿ ಮಕ್ಕಳು ಇಲ್ವಾ ? ಅವರಿಗೆ ಬೇಜಾರಾಗುತ್ತೆ ಎನ್ನುವ ಸಾಮಾನ್ಯ ಪರಿಜ್ಞಾನ ಕೂಡ ಬೇಡವಾ ? ಎಂದು ಕಿಡಿ ಕಾರಿದ್ದಾರೆ. ನನ್ನ ಬಗ್ಗೆ ನಿರ್ಧಾರ ಮಾಡಲು ನೀವು ಯಾರು? ನಿಮ್ಮ ಹತ್ತಿರ ಏನಾದರೂ ಸಾಕ್ಷಿ ಇದೆಯಾ? ಇಲ್ಲ ಅಂದ ಮೇಲೆ ಹೇಗೆ ಒಂದು ಸಂಬಂಧನಾ ಹಾಳು ಮಾಡುತ್ತೀರಾ ? ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿಯೇ ನಾನು ಈ ತರಹದ ಸುದ್ದಿಗಳನ್ನೆಲ್ಲ ಇಗ್ನೋರ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಒಮ್ಮೆ ಒಬ್ಬರಿಗೆ ಉತ್ತರ ಕೊಟ್ಟರೆ, ನಾಳೆ ಇನ್ನೊಬ್ಬರು ಮತ್ತೇನೋ ಮಾತನಾಡುತ್ತಾರೆ ಆಗ ಮತ್ತೆ ಅದಕ್ಕೆ ಉತ್ತರ ಕೊಡುತ್ತಾ ಕೂರಬೇಕು ಅದಕ್ಕಿಂತ ಸುಮ್ಮನಾಗುವುದೇ ವಾಸಿ ಎಂದು ಹೇಳಿರುವ ಸೃಜನ್ ಲೋಕೇಶ್ ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕೆನ್ನುವ ಮಾತಿನಲ್ಲಿ ನಂಬಿಕೆ ಇಟ್ಟವನು ನಾನು ಹೀಗಾಗಿ ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ನನ್ನನ್ನೂ ಪ್ರಶ್ನಿಸುವ ಹಕ್ಕು ನನ್ನ ಅಮ್ಮ, ನನ್ನ ಹೆಂಡತಿ, ನನ್ನ ಅಕ್ಕ, ನನ್ನ ಮಕ್ಕಳು, ನನ್ನ ಸ್ನೇಹಿತರು ಇಷ್ಟೇ ಯಾಕೆ ನನ್ನ ಶತ್ರುಗಳಿಗೆ ಕೂಡ ಇದೆ ಯಾಕೆಂದರೆ ಅವರಿಗೆ ನನ್ನ ಜೀವನದಲ್ಲಿ ನಾನು ಸ್ಥಾನ ಕೊಟ್ಟಿದ್ದೇನೆ ಎಂದಿರುವ ಸೃಜನ್ ಲೋಕೇಶ್, ಮೊದಲೆಲ್ಲ ನಾವು ಒಬ್ಬರ ಬಗ್ಗೆ ಮಾತನಾಡಬೇಕು ಅಂದರೆ ಹತ್ತು ಬಾರಿ ಯೋಚನೆ ಮಾಡುತ್ತಿದ್ದೇವು ಆದರೆ ಈಗ ಯಾರ ಬಗ್ಗೆಯಾದರೂ ಯಾರಾದರೂ ಬಾಯಿಗೆ ಬಂದ ಹಾಗೇ ಮಾತನಾಡುವಂತೆ ಆಗಿದೆ ಎಂದು ಹೇಳಿದ್ದಾರೆ. ಕೈಯಲ್ಲಿ ಮೊಬೈಲ್ ಇದ್ದವರೆಲ್ಲ ಈಗ ಪತ್ರಕರ್ತರಾಗಿದ್ಧಾರೆ ಎಂದಿರುವ ಸೃಜಾ ನಮ್ಮ ವ್ಯವಸ್ಥೆ ಇಷ್ಟೊಂದು ಹದಗೆಟ್ಟು ಹೋಗಿದೆಯಾ ಎಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X