'ಕೆಸಿಸಿ'ಯಲ್ಲಿ ಪತಿಯರಿಗೆ ಜೋಶ್ ನೀಡಿದ ಸ್ಟಾರ್ ಪತ್ನಿಯರು

By Pavithra

ಈ ಭಾರಿ ನಡೆಯುತ್ತಿರುವ 'ಕೆಸಿಸಿ' ಸೀಸನ್2 ಅದ್ದೂರಿಯಾಗಿ ಆರಂಭವಾಗಿದೆ. ಕನ್ನಡ ಸಿನಿಮಾರಂಗದ ಬಹುತೇಕ ಸ್ಟಾರ್ ಕಲಾವಿದರು 'ಕೆಸಿಸಿ' ಯಲ್ಲಿ ಭಾಗಿ ಆಗಿದ್ದು, ಪ್ರತಿಯೊಬ್ಬರು ಒಂದೊಂದು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್ ಕುಮಾರ್ ಉಪೇಂದ್ರ ಇನ್ನೂ ಅನೇಕರು ಮೈದಾನಕ್ಕಿಳಿದು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದರು.ಇಂದು ಕೆಸಿಸಿ ಫೈನಲ್ ಮ್ಯಾಚ್ ನಡೆಯುತ್ತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆಯಿದೆ.

ತೆರೆ ಮೇಲೆ ಅಭಿನಯ ಮಾಡುತ್ತಿದ್ದ ಕಲಾವಿದರು ಬ್ಯಾಟು, ಬಾಲು ಹಿಡಿದು ಕ್ರಿಕೆಟ್ ಆಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟರೆ. ಸ್ಟಾರ್ ಗಳು ಖುಷಿಯಿಂದ ಆಟ ಆಡಲು ಅವರ ಪತ್ನಿಯರು ಸ್ಟೇಡಿಯಂನಲ್ಲಿ ಕೂತು ಉತ್ಸಾಹ ತುಂಬಿದ್ದು ಅಭಿಮಾನಿಗಳನ್ನು ಆಕರ್ಷಣೆ ಮಾಡ್ತು. ಹಾಗಾದರೆ ಯಾರೆಲ್ಲಾ ಸ್ಟಾರ್ ಪತ್ನಿಯರು ಕ್ರಿಕೆಟ್ ನೋಡಲು ಬಂದಿದ್ರು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಸ್ಟೇಡಿಯಂನಲ್ಲಿ ರಾಕಿಂಗ್ ಜೋಡಿಯ ರಂಗು

ಸ್ಟೇಡಿಯಂನಲ್ಲಿ ರಾಕಿಂಗ್ ಜೋಡಿಯ ರಂಗು

ನಟಿ ರಾಧಿಕಾ ಪಂಡಿತ್ ನಿನ್ನೆ ಪತಿ ರಾಕಿಂಗ್ ಸ್ಟಾರ್ ಯಶ್ ಅವರ ಕ್ರಿಕೆಟ್ ಆಟ ನೋಡಲು ಸ್ಟೇಡಿಯಂ ಗೆ ಆಗಮಿಸಿದ್ದರು. 'ರಾಷ್ಟಕೂಟ ಪ್ಯಾಂಥರ್ಸ್' ಪರವಾಗಿ ನಿಂತ ರಾಧಿಕಾ, ಪತಿಯ ಟೀಂ ಬೆಂಬಲಿಸಿ ಗೆಲುವಿನ ಖುಷಿ ಅನುಭವಿಸಿದ್ರು.

ಹ್ಯಾಟಿಕ್ ಹೀರೋ ಆಟ ನೋಡಲು ಬಂದ ಗೀತಾ

ಹ್ಯಾಟಿಕ್ ಹೀರೋ ಆಟ ನೋಡಲು ಬಂದ ಗೀತಾ

ಶಿವರಾಜ್ ಕುಮಾರ್ ಕ್ರಿಕೆಟ್ ಚೆನ್ನಾಗಿ ಆಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗೀತಾ ಶಿವರಾಜ್ ಕುಮಾರ್ ಕೂಡ ಶಿವಣ್ಣನ ಆಟ ನೋಡಲು ಬಂದಿದ್ದರು. ಕೂಲ್ ಆಗಿ ಸೈಲೆಂಟ್ ಆಗಿ ಕುಳಿತುಕೊಂಡು ಪತಿಯ ಕ್ರಿಕೆಟ್ ಆಟ ನೋಡಿದ್ರು.

ಗೋಲ್ಡನ್ ಸ್ಟಾರ್ ಆಟಕ್ಕೆ ಶಿಲ್ಪಾ ಗಣೇಶ್ ಬೋಲ್ಡ್

ಗೋಲ್ಡನ್ ಸ್ಟಾರ್ ಆಟಕ್ಕೆ ಶಿಲ್ಪಾ ಗಣೇಶ್ ಬೋಲ್ಡ್

ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟ್ ಹೇಗೆ ಆಡುತ್ತಾರೆ ಎನ್ನುವುದನ್ನು ಬಹುತೇಕರು ನೋಡಿರಲಿಲ್ಲ. ಈ ಬಾರಿ ಗಣೇಶ್ 'ಒಡೆಯರ್ ಚಾರ್ಜರ್ಸ್' ನಲ್ಲಿ ಆಟವಾಡಿ ನಿನ್ನೆ ಎರಡು ಮ್ಯಾಚ್ ಗಳಲ್ಲಿ ಗೆಲವು ಸಾಧಿಸಿದ್ದಾರೆ. ಗೋಲ್ಡನ್ ಸ್ಟಾರ್ ಆಟಕ್ಕೆ ಪತ್ನಿ ಶಿಲ್ಪಾ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಕ್ಯಾಪ್ಟನ್ ಕಿಚ್ಚನ ಆಟ ನೋಡಿದ ಪ್ರಿಯಾ

ಕ್ಯಾಪ್ಟನ್ ಕಿಚ್ಚನ ಆಟ ನೋಡಿದ ಪ್ರಿಯಾ

ಕೆಸಿಸಿ ಸೀಸನ್2 ನ ರೂವಾರಿ ಆಗಿರುವ ಕಿಚ್ಚ ಸುದೀಪ್ ಅವರ ಕ್ಯಾಪ್ಟನ್ ಶಿಪ್ ಹಾಗೂ ಆಟವನ್ನು ನೋಡಲು ಪ್ರಿಯಾ ಸುದೀಪ್ ಕೂಡ ಸ್ಟೇಡಿಯಮ್ ಗೆ ಬಂದಿದ್ದರು. ಕಿಚ್ಚನ ಆಟ ನೋಡಿ ಪ್ರಿಯಾ ಸಂತಸವನ್ನು ವ್ಯಕ್ತ ಪಡಿಸಿದ್ರು. ಸ್ಟಾರ್ ಸೆಲೆಬ್ರೆಟಿಗಳ ಜೊತೆಯಲ್ಲಿ ಮೈಸೂರಿನ ಮಹಾರಾಣಿ ಪ್ರಮೋದ ದೇವಿ ಕೂಡ ಭಾಗಿ ಆಗಿದ್ದರು.

More from Filmibeat

English summary
Priya Sudeep, Radhika Pandit, Geeta Shivaraj Kumar, Shilpa Ganesh visited the Chinnaswamy stadium to see the KCC season 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X