ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್

ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಜಾರಿಯಲ್ಲಿದೆ. ಬೆಳಗ್ಗೆಯಿಂದನೆ ಜನ ಮತಗಟ್ಟೆಗೆ ಹೋಗಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ತಮಗೆ ಬೇಕಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸ್ಯಾಂಡಲ್ ವುಡ್ ಸ್ಟಾರ್ಸ್ ಸಹ ಕ್ಯೂ ನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ನಟರು ತಮ್ಮ ಹಕ್ಕು ಚಲಾಯಿಸುವ ಜೊತೆಗೆ ಅಭಿಮಾನಿಗಳಿಗೂ ವೋಟ್ ಮಾಡಿ ಎಂದು ಸಂದೇಶ ನೀಡುತ್ತಿದ್ದಾರೆ. ಚಿತ್ರೀಕರಣದ ನಡುವೆಯು ಬಂದು ಮತದಾನ ಮಾಡುವ ಮೂಲಕ ಅಭಿಮಾನಿಗಳಿಗೆ ಪ್ರೇರಣೆಯಾಗುತಿದ್ದಾರೆ. ಇಂದು ಬೆಳಂಬೆಳಗ್ಗೆಯೇ ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ಸ್ ಮತದಾನ ಮಾಡಿದ್ದಾರೆ.

ಸುದೀಪ್, ಜಗ್ಗಶ್, ಅಮೂಲ್ಯ, ಸಂತೋಷ್ ಆನಂದ್ ರಾಮ್, ತರುಣ್ ಸುಧೀರ್ ನೆನಪಿರಲಿ ಪ್ರೇಮ್ ಮತ್ತು ರಮೇಶ್ ಅರವಿಂದ್ ಸೇರಿದಂತೆ ಅನೇಕ ನಟ-ನಟಿಯರು ಬೆಳಗ್ಗೆಯೇ ಕ್ಯೂ ನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಯಾವ ನಟ ಎಲ್ಲಿ ವೋಟ್ ಮಾಡಿದ್ರು? ಮುಂದೆ ಓದಿ..

ವೋಟ್ ಮಾಡಿದ ಸುದೀಪ್ ದಂಪತಿ

ವೋಟ್ ಮಾಡಿದ ಸುದೀಪ್ ದಂಪತಿ

ಇಂದು ಬಳಗ್ಗೆ ಕಿಚ್ಚ ಸುದೀಪ್ ದಂಪತಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜೆ ಪಿ ನಗರದಲ್ಲಿ ಮತದಾನ ಮಾಡಿದ ಸುದೀಪ್ ದಂಪತಿ ನಂತರ ಮಾದ್ಯಮದವರ ಜೊತೆ ಮಾತನಾಡಿದ್ದಾರೆ. "ಮತದಾನಕ್ಕೆ ಬನ್ನಿ ಎಂದು ಬುದ್ಧಿ ಹೇಳುವ ವಿಚಾರ ಅಲ್ಲ ಇದು, ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ಅರ್ಥವಾಗಬೇಕು. ಅದ್ದರೂ ಮನೆಯಲ್ಲಿ ಕುಳಿತಿದ್ದರೆ ಅಲ್ಲೇ ಕುಳಿತಿರಲಿ. ನಮ್ಮ ಕರ್ತವ್ಯ ನಾವು ನಿಭಾಯಿಸಬೇಕು" ಎಂದು ಹೇಳಿದ್ದಾರೆ. ಜೆ ಪಿ ನಗರ ಬೆಂಗಳೂರಿನ ದಕ್ಷಿಣ ಕ್ಷೇತ್ರವಾಗಿದೆ.

ಕುಟುಂಬದ ಜೊತೆ ಅಮೂಲ್ಯ ಮತದಾನ

ಕುಟುಂಬದ ಜೊತೆ ಅಮೂಲ್ಯ ಮತದಾನ

ಸ್ಯಾಂಡಲ್ ವುಡ್ ನ ಗೋಲ್ಡನ್ ಬೆಡಗಿ ಅಮೂಲ್ಯ ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ಜೊತೆ ಬಂದು ಮತದಾನ ಮಾಡಿದ್ದಾರೆ. ಆರ್​ಆರ್ ನಗರದ ಬಿಇಎಂಲ್ ಲೇಔಟ್​ನಲ್ಲಿ ಹಕ್ಕು ಚಲಾಯಿಸಿದ್ದಾರೆ. ಆರ್​ಆರ್ ನಗರ ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರವಾಗಿದೆ.

ಹಕ್ಕು ಚಲಾಯಿಸಿದ ಪ್ರೇಮ್ ದಂಪತಿ

ಹಕ್ಕು ಚಲಾಯಿಸಿದ ಪ್ರೇಮ್ ದಂಪತಿ

ನಟ ಲವ್ಲಿ ಸ್ಟಾರ್​ ಪ್ರೇಮ್ ದಂಪತಿ ಮತದಾನ ಮಾಡಿದ್ದಾರೆ. ವಿಶೇಷ ಅಂದ್ರೆ ನೆನಪಿರಲಿ ಪ್ರೇಮ್​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್​​ಡೇ ದಿನದಂದು ಪತ್ನಿ ಜೊತೆ ಮತಗಟ್ಟೆಗೆ ಆಗಮಿಸಿದ ಪ್ರೇಮ್ ನಾಗರಬಾವಿಯಲ್ಲಿ ಮತದಾನ ಮಾಡಿದ್ದಾರೆ.

ಸರತಿ ಸಾಲಿನಲ್ಲಿ ನಿಂತು ಜಗ್ಗೇಶ್ ಮತದಾನ

ಸರತಿ ಸಾಲಿನಲ್ಲಿ ನಿಂತು ಜಗ್ಗೇಶ್ ಮತದಾನ

ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂನಲ್ಲಿ ಮತದಾನ ಮಾಡಿದ್ದಾರೆ. ಮತದಾನ ಮಾಡುವ ಉತ್ಸಾಹದಿಂದ ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಕ್ಯೂ ನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ತನ್ನ ಹಕ್ಕು ಚಲಾಯಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿ ಕೊಂಡಿರುವ ಜಗ್ಗೇಶ್ "ತನ್ನ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ಸ್ವಾಭಿಮಾನದಿಂದ, ತಾಳ್ಮೆಯಿಂದ ನಿಂತಿರುವೆ, ಸ್ವಾಭಿಮಾನಿ ಭಾರತೀಯ" ಎಂದು ಹೇಳಿಕೊಂಡಿದ್ದಾರೆ.

ಕುಟುಂಬದ ಜೊತೆ ರಮೇಶ್ ಮತದಾನ

ಕುಟುಂಬದ ಜೊತೆ ರಮೇಶ್ ಮತದಾನ

ನಟ ರಮೇಶ್​ ಅರವಿಂದ್​ ತಮ್ಮ ಮತ ಚಲಾವಣೆ ಮಾಡಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್​ನಲ್ಲಿ ಕುಟುಂಬ ಸಮೇತ ಆಗಮಿಸಿದ ರಮೇಶ್ ಅರವಿಂದ್ ತಮ್ಮ ಹಕ್ಕು ಚಲಾಯಿಸಿದ್ರು. ಮತದಾನ ಮಾಡಿ ಅಭಿಮಾನಿಗಳಿಗೂ ಮತದಾನ ಮಾಡುವಂತೆ ಸಂದೇಶ ನೀಡಿದ್ದಾರೆ. ಬನಶಂಕರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವಾಗಿದೆ.

 ಮತದಾನ ಮಾಡಿದ ನಿರ್ದೇಶಕರು

ಮತದಾನ ಮಾಡಿದ ನಿರ್ದೇಶಕರು

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ದೇಶಕ ತರುಣ್ ಸುಧೀರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ವೋಟ್ ಮಾಡಿ ಬೆರಳಿಗೆ ಶಾಯಿ ಹಾಕಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರು ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
kannada actor kicha sudeep, Jaggesh, Ramesh Aravind, nenpirali prem casting their vote in lok sabha election 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X