»   » ಸ್ಟಾರ್ ನಟರ ಈ ಒಳ್ಳೆಯ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ!

ಸ್ಟಾರ್ ನಟರ ಈ ಒಳ್ಳೆಯ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ!

Posted By:
Subscribe to Filmibeat Kannada

'ಹಳೇ ಬೇರು..ಹೊಸ ಚಿಗುರು' ಇವೆರಡೂ ಪ್ರಕೃತಿ ನಿಯಮ. ಅದೇ ರೀತಿ ಕನ್ನಡದಲ್ಲಿ ಈಗ ಒಂದು ಕಡೆ ಹೊಸ ಅಲೆಯ ಸಿನಿಮಾಗಳು ಬರುತ್ತಿದ್ದರೆ, ಇನ್ನೊಂದು ಕಡೆ ಅಂತಹ ಸಿನಿಮಾಗಳಿಗೆ ಸ್ಟಾರ್ ನಟರು ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ.

ನಟ ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ಸುದೀಪ್, ರಕ್ಷಿತ್ ಶೆಟ್ಟಿ ಈಗ ಕನ್ನಡದ ಯುವಕರ ಸಿನಿಮಾಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಿನಿಮಾದ ಕೆಲಸಗಳು ಏನೇ ಇದ್ದರೂ ಹೊಸ ಚಿತ್ರತಂಡ ಮಾಡುವ ಸಿನಿಮಾವನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಓದಿ...

'ಕರಿಯ 2' ಚಿತ್ರಕ್ಕೆ ಡಿ ಬಾಸ್ ಸಾಥ್

'ಕರಿಯ 2' ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಅನ್ನು ದರ್ಶನ್ ರಿಲೀಸ್ ಬಿಡುಗಡೆ ಮಾಡಿದರು. ತಮ್ಮ 'ಕರಿಯ' ಸಿನಿಮಾದ ರೀತಿ ಈ ಚಿತ್ರ ಕೂಡ ಗೆಲ್ಲಲಿ ಎಂದು ಡಿ ಬಾಸ್ ಶುಭ ಹಾರೈಸಿದ್ದರು.

'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲುವವರು ಯಾರು..?

'ಕಟಕ' ಚಿತ್ರ ನೋಡಿದ ಯಶ್

ನಟ ಯಶ್ ಇತ್ತೀಚಿಗಷ್ಟೆ 'ಕಟಕ' ಸಿನಿಮಾವನ್ನು ನೋಡಿದ್ದಾರೆ. ಜೊತೆಗೆ ಹೊಸ ತಂಡ ಮಾಡಿರುವ ಪ್ರಯತ್ನವನ್ನು ಯಶ್ ಹೊಗಳಿ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

'ಕಟಕ' ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಗೆ ಇಷ್ಟವಾಗಿದ್ದೇನು?

'ಟೈಗರ್ ಗಲ್ಲಿ' ಪ್ರಚಾರದಲ್ಲಿ ಸುದೀಪ್

ನಟ ಸುದೀಪ್ 'ಟೈಗರ್ ಗಲ್ಲಿ' ಚಿತ್ರದ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು. ತಮ್ಮ ಬಿಜಿ ಶಡ್ಯೂಲ್ ಮಧ್ಯೆ ಕೂಡ ಚಿತ್ರದ ಪ್ರಚಾರ ವಿಡಿಯೋದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದರು.

'ಹುಲಿರಾಯ' ವಿತರಣೆ ಮಾಡಿದ ರಕ್ಷಿತ್

ನಟ ರಕ್ಷಿತ್ ಶೆಟ್ಟಿ 'ಹುಲಿರಾಯ' ಚಿತ್ರವನ್ನು ವಿತರಣೆ ಮಾಡುವ ಮೂಲಕ ಒಂದು ಒಳ್ಳೆಯ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲು ಸಹಾಯ ಮಾಡಿದ್ದರು.

ವಿಮರ್ಶೆ: ಕಾಡಿನ 'ಹುಲಿರಾಯ' ಹೇಳುವ ಜೀವನದ ಕಠೋರ ಸತ್ಯ

ಪುನೀತ್ ಚಿತ್ರ ನಿರ್ಮಾಣ

ಈ ಹಿಂದೆ 'ಒಂದು ಮೊಟ್ಟೆಯ ಕಥೆ' ನೋಡಿ ಅದರ ಬಗ್ಗೆ ಮಾತನಾಡಿದ್ದ ಪುನೀತ್ ರಾಜ್ ಕುಮಾರ್ ಈಗ ಆ ಚಿತ್ರದ ನಟ ರಾಜ್ ಬಿ ಶೆಟ್ಟಿ ಅವರಿಗೆ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

English summary
Kannada stars encouraging new movie teams.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada