ಬಂಡೀಪುರ ಬೆಂಕಿ ದುರಂತ: ಮರುಗಿದ ದರ್ಶನ್, ಅಪ್ಪು, ವಿಜಿ, ಜಗ್ಗೇಶ್ ಮನ

Recommended Video

Bandipur : ಬಂಡೀಪುರ ಬೆಂಕಿ ದುರಂತ: ಮರುಗಿದ ವಿಜಿ, ದರ್ಶನ್, ಅಪ್ಪು, ಜಗ್ಗೇಶ್ ಮನ..! | FILMIBEAT KANNADA

ಬಂಡೀಪುರ ಅಭಯಾರಣ್ಯದ ಸುತ್ತಾಮುತ್ತಾ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಭಾರಿ ಅನಾಹುತ ಸಂಭವಿಸಿದೆ. ಕಳೆದ ಐದು ದಿನಗಳಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಸುತ್ತಮುತ್ತಲಿನ ಜನರು ಹರಸಾಹಸ ಪಡ್ತಿದ್ದು, ಅನೇಕ ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿದೆ.

ಈ ಘಟನೆ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಹಲವು ಸಿನಿ ತಾರೆಯರು ಪರಿಸರ ಉಳಿಸಿ ಮರಗಳನ್ನ ಬೆಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬೆಂಕಿ ನಂದಿಸುತ್ತಿರುವ ಸ್ವಯಂಸೇವಕರಿಗೆ ಸಹಾಯ ಮಾಡಿ:ಯದುವೀರ್ ಮನವಿ

ಅದರಲ್ಲೂ ನಟ ದುನಿಯಾ ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಕಾಡ್ಗಿಚ್ಚು ನಂದಿಸುತ್ತಿರುವ ಸಿಬ್ಬಂದಿಗಳಿಗೆ ಅಗತ್ಯವೆನಿಸುವ ಕೆಲವು ವಸ್ತುಗಳನ್ನ, ಆಹಾರ ಸಾಮಾಗ್ರಿಗಳನ್ನ, ನೀರಿನ ಬಾಟಲ್ ಗಳನ್ನ ಆಪ್ತರ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಮುಂದೆ ಓದಿ....

ದುನಿಯಾ ವಿಜಯ್ ಸಹಾಯ

ದುನಿಯಾ ವಿಜಯ್ ಸಹಾಯ

ಬಂಡೀಪುರ ಬೆಂಕಿ ದುರಂತಕ್ಕೆ ಮರುಗಿದ ನಟ ದುನಿಯಾ ವಿಜಯ್, ಕಾಡ್ಗಿಚ್ಚು ನಂದಿಸುತ್ತಿರುವ ಸಿಬ್ಬಂದಿಗಳಿಗೆ ಅಗತ್ಯವೆನಿಸುವ ಕೆಲವು ವಸ್ತುಗಳನ್ನ, ಆಹಾರ ಸಾಮಾಗ್ರಿಗಳನ್ನ, ನೀರಿನ ಬಾಟಲ್ ಗಳನ್ನ ಆಪ್ತರ ಮೂಲಕ ಕಳುಹಿಸಿಕೊಟ್ಟಿದ್ದಾರೆ.

ಬಂಡೀಪುರ ಘಟನೆ ಪಾಠ ಹೇಳಿಕೊಟ್ಟಿದೆ: ಸತೀಶ್ ಜಾರಕಿಹೊಳಿ ಸಂದರ್ಶನ

ಸ್ವಯಂ ಸೇವಕರು ಮುಂದಾಗಿ

ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್, ಬಂಡೀಪುರದಲ್ಲಿ ಉಂಟಾಗಿರುವ ಕಾಡ್ಗಿಚ್ಚಿಗೆ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ಸ್ವಯಂ ಸೇವಕರು ಕಾಡ್ಗಿಚ್ಚು ನಂದಿಸಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವನ್ಯಜೀವಿಗಳ ರಕ್ಷಣೆ ನಮ್ಮ ಹೊಣೆ

"ಕಾಡಿದ್ದರೆ-ನಾಡು,ನಾವು" ವನ್ಯಜೀವಿಗಳ ರಕ್ಷಣೆ ನಮ್ಮ ಹೊಣೆ!ಮನುಷ್ಯನ ಹಾಗೆ ಗೀಡ ಮರ ಮತ್ತು ವನ್ಯಜೀವಿಗಳು ಒಂದು ಜೀವವೇ'' ಎಂದು ಪುನೀತ್ ಟ್ವೀಟ್ ಮಾಡಿದ್ದು, ಸ್ವಯಂ ಸೇವಕರಿಗೆ, ಅರಣ್ಯ ಇಲಾಖೆಯವರಿಗೆ ನೆರವಾಗೋಣ ಎಂದಿದ್ದಾರೆ.

ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ

ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಹೊಣೆ

''ಇತ್ತೀಚೆಗೆ ಸಂಭವಿಸುತ್ತಿರುವ ಅಗ್ನಿ ಅನಾಹುತಗಳು ವಿಷಾದನೀಯ. ನಮ್ಮ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಹೊಣೆ ನಮ್ಮ ಕೈಯಲ್ಲಿದೆ'' ಎಂದು ನಟ ಗಣೇಶ್ ಟ್ವೀಟ್ ಮಾಡಿದ್ದು, ಬಂಡೀಪುರ ಅರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ್ನ ನಂದಿಸಲು ಕಷ್ಟಪಡ್ತಿರುವ ಸಿಬ್ಬಂಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್

ಜಗ್ಗೇಶ್ ಮನವಿ

''ಮನುಷ್ಯರ ದುರ್ಗುಣಕ್ಕೆ ಸುಟ್ಟು ಭಸ್ಮವಾದ ಬಂಡಿಪುರ ಅಭಯಾರಣ್ಯ! ಸರಿಸುಮಾರು 600ಎಕರೆ ಅರಣ್ಯ ಹಾಗು ಅದರಲ್ಲಿ ಏನು ಅರಿಯದ ಮುಗ್ಧ ಪ್ರಾಣಿಸಂಕುಲ ಜೊತೆಗೆ ಬೆಲೆಬಾಳುವ ಮರಗಳು! ಸರ್ವನಾಶ!ಮನುಷ್ಯರ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು'' ಎಂದು ಜಗ್ಗೇಶ್ ಘಟನೆಯನ್ನ ಖಂಡಿಸಿದ್ದಾರೆ.

ಕಾಡ್ಗಿಚ್ಚಿನಿಂದ ಬಂಡೀಪುರ ಅರಣ್ಯ ರಕ್ಷಿಸಿ : ನಟ ದರ್ಶನ್ ಮನವಿ

More from Filmibeat

English summary
Bandipur forest fire: Challenging star darshan, puneeth rajkumar, jaggesh, duniya vijay expressed their sadness over the fire Bandipur forest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X