For Quick Alerts
  ALLOW NOTIFICATIONS  
  For Daily Alerts

  ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!

  By Bharath Kumar
  |

  ಕನ್ನಡದ ದೊಡ್ಡ ದೊದ್ಡ ಸ್ಟಾರ್ ನಟರ ಸಮಾಗಮ ಆಗುವುದು ಬಹಳ ಅಪರೂಪ. ಚಿತ್ರರಂಗದ ಯಾವುದಾದರೂ ಕಾರ್ಯಕ್ರಮ ಅಥವಾ ಹೋರಾಟ, ಪ್ರತಿಭಟನೆಗಳಲ್ಲಿ ಬಿಟ್ಟರೇ, ಎಲ್ಲ ನಟರು ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದು ಕಡಿಮೆ.

  ಆದ್ರೆ, ಪುನೀತ್ ರಾಜ್ ಕುಮಾರ್ ಅವರ ಕಾರ್ಯಕ್ರಮವೊಂದರಲ್ಲಿ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಒಟ್ಟಿಗೆ ಸೇರಲಿದ್ದಾರೆ. ಈ ಮೂಲಕ ಕನ್ನಡದ ಕಲಾವಿದರನ್ನ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

  ಅಷ್ಟಕ್ಕೂ, ಸ್ಯಾಂಡಲ್ ವುಡ್ ತಾರೆಯರು ಒಟ್ಟಿಗೆ ಸೇರಲಿರುವ ಆ ಕಾರ್ಯಕ್ರಮ ಯಾವುದು? ಮತ್ತು ಯಾವಾಗ? ಎಂದು ಮುಂದೆ ಓದಿ.....

  'ಅಪ್ಪು' ಸಂಭ್ರಮಕ್ಕೆ ಸ್ಯಾಂಡಲ್ ವುಡ್ ಸಾಕ್ಷಿ

  'ಅಪ್ಪು' ಸಂಭ್ರಮಕ್ಕೆ ಸ್ಯಾಂಡಲ್ ವುಡ್ ಸಾಕ್ಷಿ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನ ಸಂಭ್ರಮಾಚರಣೆಯಲ್ಲಿ ಕನ್ನಡದ ಟಾಪ್ ಸ್ಟಾರ್ ನಟರು ಅತಿಥಿಗಳಾಗಿ ಭಾಗಿಯಾಗಲಿದ್ದಾರಂತೆ. ಈ ಮೂಲಕ ಒಂದೇ ವೇದಿಕೆಯಲ್ಲಿ ಕನ್ನಡದ ಸ್ಟಾರ್ ನಟರನ್ನ ಒಟ್ಟಿಗೆ ನೋಡಬಹುದು.

  'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ

  ಸುದೀಪ್, ಯಶ್, ಉಪೇಂದ್ರ ಆಗಮನ

  ಸುದೀಪ್, ಯಶ್, ಉಪೇಂದ್ರ ಆಗಮನ

  'ರಾಜಕುಮಾರ' ಚಿತ್ರದ ಸೆಂಚುರಿ ಸಂಭ್ರಮವನ್ನ ಅದ್ದೂರಿಯಾಗಿ ಆಚರಿಸಿಲು ಚಿತ್ರತಂಡ ನಿರ್ಧರಿಸಿದ್ದು, ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ ಪಾಲ್ಗೊಳ್ಳಲಿದ್ದಾರಂತೆ.

  ಶತಕದ 'ರಾಜಕುಮಾರ'ನಿಗೆ ಅಭಿಮಾನಿಯ ಪ್ರೀತಿಯ ಉಡುಗೊರೆ

  ಅಪ್ಪು ಸಂಭ್ರಮಕ್ಕೆ ಕ್ರೇಜಿಸ್ಟಾರ್ ಅಲಭ್ಯ

  ಅಪ್ಪು ಸಂಭ್ರಮಕ್ಕೆ ಕ್ರೇಜಿಸ್ಟಾರ್ ಅಲಭ್ಯ

  'ರಾಜಕುಮಾರ' ಚಿತ್ರದ 100ನೇ ದಿನ ಸಂಭ್ರಮಾಚರಣೆಗೆ ಕ್ರೇಜಿಸ್ಟಾರ್ ಅಲಭ್ಯರಾಗಿದ್ದಾರೆ. ಬೇರೆ ಕಾರಣದ ನಿಮಿತ್ತ ರವಿಚಂದ್ರನ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಖಚಿತಪಡಿಸಿದ್ದಾರೆ.

  ಬೇರೆ ನಟ-ನಟಿಯರು ಭಾಗಿ

  ಬೇರೆ ನಟ-ನಟಿಯರು ಭಾಗಿ

  ಸುದೀಪ್, ಯಶ್, ಉಪೇಂದ್ರ ಮಾತ್ರವಲ್ಲದೇ, ಕನ್ನಡದ ಇನ್ನು ಹಲವು ನಟ-ನಟಿಯರು 'ರಾಜಕುಮಾರ' ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರಂತೆ.

  'ರಾಜಕುಮಾರ'ನ ಸೆಂಚುರಿ ಸಂಭ್ರಮಕ್ಕೆ ಪವರ್ ಸ್ಟಾರ್ ಸಾಥ್

  'ರಾಜಕುಮಾರ' ಸೆಂಚುರಿ ಕಾರ್ಯಕ್ರಮ ಯಾವಾಗ?

  'ರಾಜಕುಮಾರ' ಸೆಂಚುರಿ ಕಾರ್ಯಕ್ರಮ ಯಾವಾಗ?

  ಜುಲೈ 1 ರಂದು 'ರಾಜಕುಮಾರ' ಚಿತ್ರ ಶತದಿನ ಪೂರೈಸಿದೆ. ಈ ಸಂಭ್ರಮವನ್ನ ಜುಲೈ 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಚರಿಸಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಎಲ್ಲಾ ತಯಾರಿಗಳು ನಡೆಯುತ್ತಿದ್ದು, ಶುಕ್ರವಾರ ಅದ್ದೂರಿ ವೇದಿಕೆ ಸಜ್ಜಾಗಲಿದೆ.

  'ರಾಜಕುಮಾರ' ತೆಲುಗು ರೀಮೇಕ್ ಗೆ ಯಾರು ನಾಯಕ, ನಿರ್ದೇಶಕ.?

  English summary
  Kannada Stars Sudeep, Yash, Upendra will Participate in Raajakumara 100 Days Celebration on July 7th at Palace Ground.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X