ಅಂಬರೀಶ್ ಸ್ಟೈಲ್ ನಲ್ಲೇ 'ಅಂಬಿ'ಗೆ ವಿಶ್ ಮಾಡಿದ ನಟ
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುಮಾರು ವರ್ಷದ ನಂತರ ಅಂಬರೀಶ್ ಅವರು ನಾಯಕನಾಗಿ ಕಮ್ ಬ್ಯಾಕ್ ಮಾಡ್ತಿರುವ ಸಿನಿಮಾ ಇದಾಗಿದ್ದು, ಇಡೀ ಸ್ಯಾಂಡಲ್ ವುಡ್ ಅಭಿಮಾನಿಗಳು ಮತ್ತು ಸಿನಿತಾರೆಯರು ಕೂಡ ಖುಷ್ ಆಗಿದ್ದಾರೆ.

'ಮಂಡ್ಯದ ಗಂಡು' ಮತ್ತೆ ತೆರೆಮೇಲೆ ಘರ್ಜಿಸಲಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ರವಿಶಂಕರ್, ಅಂಬರೀಶ್ ಸ್ಟೈಲ್ ನಲ್ಲೇ ಚಿತ್ರಕ್ಕೆ ಶುಭ ಕೋರಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ದೃಶ್ಯವೊಂದರಲ್ಲಿ ಅಂಬರೀಶ್ ಬೈಕ್ ರೈಡ್ ಮಾಡಿದ್ದಾರೆ. ತಲೆಗೆ ಹೆಲ್ಮೆಟ್ ಧರಿಸಿ, ಜಾಕೆಟ್ ಹಾಕ್ಕೊಂಡು ಖದರ್ ಎಂಟ್ರಿ ಕೊಟ್ಟಿದ್ದಾರೆ. ಆ ಸ್ಟೈಲ್ ನ ಕಾಪಿ ಮಾಡಿರುವ ರವಿಶಂಕರ್, ಅದೇ ರೀತಿ ತಾವು ಕೂಡ ಹೆಲ್ಮೆಟ್ ಧರಿಸಿಮ ಜಾಕೆಟ್ ತೊಟ್ಟು ಚಿತ್ರಕ್ಕೆ ಆಲ್ ದಿ ಬೆಸ್ಟ ಹೇಳಿದ್ದಾರೆ.
ಮತ್ತೊಂದೆಡೆ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ವಿಡಿಯೋ ಮೂಲಕ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಶುಭ ಕೋರಿದ್ದಾರೆ.
ಇನ್ನು ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಕೂಡ ಅಂಬಿ ಹಾಗೂ ಸುದೀಪ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ.
ಇನ್ನುಳಿದಂತೆ ಯುವ ನಿರ್ದೇಶಕ ಗುರುದತ್ತ ಗಾಣಿಗ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅಂಬರೀಶ್, ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ತಾರಬಳಗದಲ್ಲಿ ಇದ್ದಾರೆ. ಅರ್ಜುನ ಜನ್ಯ ಸಂಗೀತ ಒಳಗೊಂಡಿದೆ.


Click it and Unblock the Notifications











