ಕನ್ನಡ ರಾಜ್ಯೋತ್ಸವ: ಯಾವ ಸ್ಟಾರ್ ಏನೆಂದು ಶುಭಕೋರಿದ್ರು?
ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲು ಸೋಶಿಯಲ್ ಮೀಡಿಯಾದಲ್ಲಂತೂ ಕನ್ನಡದ ಕಂಪು ಸ್ವಲ್ಪ ಜಾಸ್ತಿಯೇ ಇದೆ. ಕನ್ನಡ ಹಾಡುಗಳು, ಕನ್ನಡ ಪದಗಳು, ಕನ್ನಡ ಕವನಗಳು, ಕನ್ನಡಿಗರ ಹೆಮ್ಮೆಯ ಫೋಟೋಗಳು ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದೆ.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ಸ್ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಕೆಲವರು ತಮ್ಮ ಚಿತ್ರದ ಟೀಸರ್, ಪೋಸ್ಟರ್ ರಿಲೀಸ್ ಮಾಡಿ ಸಂಸತ ಹಂಚಿಕೊಂಡಿದ್ದಾರೆ.
ಹಾಗಿದ್ರೆ, ರಾಜ್ಯೋತ್ಸವ ಪ್ರಯುಕ್ತ ಯಾರು ಏನೆಂದು ವಿಶ್ ಮಾಡಿದ್ದಾರೆ? ಮುಂದೆ ಓದಿ....

ಇಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು
''ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ'' ಎಂದು ದರ್ಶನ್ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಇದೇ ಸಂತಸದಲ್ಲಿ ಒಡೆಯ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ.

ಆಡೋಕೆ ಒಂದೇ ಭಾಷೆ ಕನ್ನಡ
''ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ...ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....ಜೈ ಕರ್ನಾಟಕ'' ಎಂದು ಪುನೀತ್ ರಾಜ್ ಕುಮಾರ್ ಅವರು ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು
''ಅಣ್ತಮ್ಮಾ.... ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡ್ಬೇಕು....ಗಡಿಗಳನ್ನ ಮೀರಿ ಗರಿಗೆದರ್ಬೇಕು... ಸಾಗರದಾಚೆಗೂ ಚಾಚಿ ನಿಲ್ಬೇಕು....ಕನ್ನಡ ಅಂದ್ರೆ ಮೈ ರೋಮ ಎದ್ದೇಳ್ಬೇಕು...ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು.... ಕನ್ನಡ ಉಳಿಸಿ ಬೆಳಸಿ ಅಂತ ಬೇಡ್ಕೋಳೋ ಕಾಲ ಹೋಯ್ತು....ಈಗೇನಿದ್ರು ಕನ್ನಡ ಕಲಿತು, ಕಲಿಸಿ, ಬಳಸಿ... ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ....ಸಿರಿಗನ್ನಡಂ ಬಾಳ್ಗೆ....'' ಎಂದು ರಾಕಿಂಗ್ ಸ್ಟಾರ್ ಯಶ್ ಶುಭಕೋರಿದ್ದಾರೆ.

ಹೊನ್ನಂಥ ನಾಡು...ಶ್ರೀಗಂಧದ ಕಾಡು
''ಹೊನ್ನಂಥ ನಾಡು ಶ್ರೀಗಂಧದ ಕಾಡು ವಿಶ್ವದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೂ ಕರುನಾಡ ಹಬ್ಬದ ಶುಭಾಶಯಗಳು.'' ಎಂದು ಟ್ವಿಟ್ಟರ್ ನಲ್ಲಿ ಶುಭ ಕೋರಿರುವ ಶಿವರಾಜ್ ಕುಮಾರ್ ವಿಡಿಯೋ ಬೈಟ್ ಹಂಚಿಕೊಂಡಿದ್ದಾರೆ.

ಕನ್ನಡ ಅಂದ್ರೆ ನಮ್ಮ ಸ್ವಾಭಿಮಾನದ ಗುರುತು
''ಕನ್ನಡ ಅಂದ್ರೆ ಬರೀ ಭಾಷೆಯಲ್ಲ ನಮ್ಮ ಸ್ವಾಭಿಮಾನದ ಗುರುತು "ಕನ್ನಡ ಹಬ್ಬದ ಶುಭಾಶಯಗಳು" ಎಂದು ಗೋಲ್ಡನ್ ಸ್ಟಾರ್ ಗಣೇಶ್ ವಿಶ್ ಮಾಡಿದ್ದಾರೆ.

ಸಿರಿಗನ್ನಡಂ ಗೆಲ್ಗೆ
''ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು .... ಸಿರಿಗನ್ನಡಂ ಗೆಲ್ಗೆ ... A tongue twister challenge to you all ...'' ಎಂದು ನಟಿ ಹರಿಪ್ರಿಯಾ ಟ್ವಿಟ್ಟರ್ ನಲ್ಲಿ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.

ಕನ್ನಡವನ್ನು ಉಸಿರಿನೊಂದಿಗೆ ಬೆರೆಸಿದ್ದೇನೆ
''ನಾನು ಬೇರೆ ಭಾಷೆಗಳನ್ನು ಕಲಿಯುತ್ತಿದ್ದೇನೆ.. ಆದರೆ, ಕನ್ನಡವನ್ನು ಉಸಿರಿನೊಂದಿಗೆ ಬೆರೆಸಿದ್ದೇನೆ.. ಕನ್ನಡಿಗರಿಗೆ,, ಕನ್ನಡ ಕಲಿತವರಿಗೆ, ಕಲಿಯುತ್ತಿರುವವರಿಗೆ,, ಪ್ರತಿಯೊಬ್ಬರಿಗೂ ,, "ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ನಿರ್ದೇಶಕ ಸುನಿ ಶುಭಕೋರಿದ್ದಾರೆ.

ನಮ್ಮೆಲ್ಲರ ಜನ್ಮಭೂಮಿಯ ಹೆಸರು ಕನ್ನಡ
''ಕರ್ನಾಟಕ ಕೇವಲ ಸ್ಥಳವಲ್ಲ ನಮ್ಮೆಲ್ಲರ ಜನ್ಮಭೂಮಿಯ ಹೆಸರು ಕನ್ನಡ ಕೇವಲ ನುಡಿಯಲ್ಲ ನಮ್ಮಲ್ಲರ ಉಸಿರು ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು'' ಎಂದು ನಟ ಶರಣ್ ವಿಶ್ ತಿಳಿಸಿದ್ದಾರೆ.


Click it and Unblock the Notifications











