»   » ಸ್ಯಾಂಡಲ್ ವುಡ್ ಸ್ಟಾರ್ ಗಳ ಹೊಸ ವರ್ಷದ ಡಿಫರೆಂಟ್ ಶುಭಾಶಯಗಳು

ಸ್ಯಾಂಡಲ್ ವುಡ್ ಸ್ಟಾರ್ ಗಳ ಹೊಸ ವರ್ಷದ ಡಿಫರೆಂಟ್ ಶುಭಾಶಯಗಳು

Posted By:
Subscribe to Filmibeat Kannada

ಹೊಸ ವರ್ಷದ ಆರಂಭವಾಯ್ತು, ಹೊಸ ಖುಷಿಯಲ್ಲಿ ಎಲ್ಲರೂ ಸಂಭ್ರಮವನ್ನ ಆಚರಣೆ ಮಾಡುತ್ತಿದ್ದಾರೆ. ಚಿತ್ರರಂಗದ ಸ್ಟಾರ್ ಗಳು ತಮ್ಮದೇ ಸ್ಟೈಲ್ ನಲ್ಲಿ ವರ್ಷವನ್ನ ಆರಂಭ ಮಾಡಿದ್ದಾರೆ. ಹೊಸ ರೆಸೆಲ್ಯೂಷನ್ ಗಳನ್ನ ಪ್ರಾರಂಭ ಮಾಡಿ ಹೊಸ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.

ತಮ್ಮನ್ನ ಪ್ರೀತಿ ಮಾಡೋ ಅಭಿಮಾನಿಗಳಿಗೆ ವಿಶೇಷವಾದ ರೀತಿಯಲ್ಲಿ ಒಳ್ಳೆ ಮೆಸೆಜ್ ಕೊಟ್ಟು ಹೊಸ ವರ್ಷದ ಶುಭಾಶಯವನ್ನ ಹೇಳಬೇಕು ಅನ್ನೋದು ಪ್ರತಿ ಕಲಾವಿದರ ಮನಸ್ಸಿನಲ್ಲಿರುತ್ತೆ. ಅದೇ ರೀತಿಯಲ್ಲಿ ಚಂದನವನದ ಅಂದದ ತಾರೆಯರು ವಿಭಿನ್ನ ಸ್ಟೈಲ್ ನಲ್ಲಿ ಹ್ಯಾಪಿ ನ್ಯೂ ಇಯರ್ ಎಂದಿದ್ದಾರೆ. ಹಾಗಾದ್ರೆ ಯಾರೆಲ್ಲಾ ಸ್ಟಾರ್ ಗಳು ಹೊಸ ವರ್ಷದ ವಿಷ್ ಮಾಡಿದ್ರು? ಆ ಶುಭಾಶಯಗಳು ಎಷ್ಟು ಡಿಫ್ರೆಂಟ್ ಆಗಿವೆ ಅನ್ನೂದನ್ನ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ..

ಪವರ್ ಫುಲ್ ಆಗಿತ್ತು ಪುನೀತ್ ವಿಷ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾಕ್ ಫ್ಲಿಪ್ ಮಾಡಿ ಹೊಸ ವರ್ಷದ ಶುಭಾಶಯವನ್ನ ಕೋರಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಫಿಟ್ ಆಗಿರಿ ಯಾವಾಗಲೂ ಆರೋಗ್ಯವಾಗಿರಿ ಎಂದು ಸಂದೇಶ ನೀಡಿದ್ದಾರೆ.

ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್

ಟಗರು ಚಿತ್ರದ ಜೊತೆ ಶಿವಣ್ಣನ ಹೊಸ ವರ್ಷ

ವರ್ಷಾಂತ್ಯಕ್ಕೆ ಮಫ್ತಿ ಸಿನಿಮಾ ಮೂಲಕ ಜನರನ್ನ ರಂಜಿಸಿದ ಹ್ಯಾಟ್ರಿಕ್ ಹೀರೋ 'ಟಗರು' ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ ನಾಡಿನ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನ ಹೇಳಿದ್ದಾರೆ.

ಭರವಸೆ ವರ್ಷವಾಗಲಿ ಎಂದ ದಾಸ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಹಾಗೂ ನಾಡಿನ ಜನರಿಗೆ ಶುಭ ಹಾರೈಸಿದ್ದಾರೆ. "ಹೊಸ ವರ್ಷವು ಹೊಸ ಹುರುಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ. ಈ ವರ್ಷವೂ ಎಲ್ಲರ ಜೀವನ ಹೆಚ್ಚು ಲವಲವಿಕೆಯಿಂದ ಕೂಡಿರಲಿ. ನಿಮ್ಮ ಈ ಪ್ರೀತಿಯ ದಾಸನಿಂದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು" ಎಂದು ಟ್ವಿಟ್ ಮಾಡಿದ್ದಾರೆ ದರ್ಶನ್ .

ಸಂತಸದ ವರ್ಷ ಆಗಲಿ ಎಂದ ಸುದೀಪ್

ತನ್ನ ಅಭಿಮಾನಿಗಳಿಗೆ ಮತ್ತು ಜನತೆಗೆ ಟ್ವಿಟ್ಟರ್ ಮೂಲಕ ಶುಭಾಶಯ ಹೇಳಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವರ್ಷವೆಲ್ಲಾ ಹರುಷದಿಂದ ಕೂಡಿರಲಿ ಎಂದು ವಿಷ್ ಮಾಡಿದ್ದಾರೆ.

ಶಾಂತಿಯುತ ಕಾಂತ್ರಿ ಸಂದೇಶ ತಂದ ರಿಯಲ್ ಸ್ಟಾರ್

ಡಿಫ್ರೆಂಟ್ ಸ್ಟೈಲ್ ನಲ್ಲಿ ಉಪ್ಪಿ ನಾಡಿನ ಪ್ರಜಾ ಪ್ರಭುಗಳಿಗೆ ಹೊಸ ವರ್ಷದ ಶುಭಾಶಯವನ್ನ ತಿಳಿಸಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳನ್ನ ಗಮನದಲ್ಲಿಟ್ಟುಕೊಂಡು ಚಿಕ್ಕದಾದ ವಿಡಿಯೋ ಮೂಲಕ ವಿಷ್ ಮಾಡಿದ್ದಾರೆ ಉಪೇಂದ್ರ.

English summary
Kannada actors Power star Puneeth Rajkumar, Shivarajkumar, Kiccha Sudeep, Darshan and Upendra wishes for happy new year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X