For Quick Alerts
  ALLOW NOTIFICATIONS  
  For Daily Alerts

  'ದಿಯಾ' ಸಿನಿಮಾ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ

  |

  ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ ದಿಯಾ. ರೋಮ್ಯಾಂಟಿಕ್, ಟ್ರ್ಯಾಜಿಡಿ ಸಿನಿಮಾಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರಗಳು ಸಿಗದೆ ಪರದಾಡುತ್ತಿದ್ದ ದಿಯಾ, ನಂತರ ಸಿಕ್ಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ಅಷ್ಟರಲ್ಲೆ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಪ್ರದರ್ಶನ ರದ್ದಾಯಿತು.

  ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ ಎಂದು ಗೊತ್ತಾಗುತ್ತಿದ್ದಂತೆ, ಚಿತ್ರತಂಡ ಆನ್ ಲೈನ್ ನಲ್ಲಿ ಸಿನಿಮಾ ರಿಲೀಸ್ ಮಾಡಿತು. ಆಲ್ ಲೈನ್ ನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೆ ಲಾಕ್ ಡೌನ್ ಮುಗಿದ ಬಳಿಕ ಮತ್ತೆ ಸಿನಿಮಾವನ್ನು ರಿ-ರಿಲೀಸ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕನ್ನಡ ಪ್ರೇಕ್ಷಕರನ್ನು ರಂಜಿಸಿದ ದಿಯಾ ಈಗ ಬೇರೆ ಭಾಷೆಯ ಪ್ರೇಕ್ಷಕರಿಗೆ ಮನರಂಜನೆ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ. ಮುಂದೆ ಓದಿ..

  'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ

  ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ

  ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ

  ದಿಯಾ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆದಿದೆ. ಬೇರೆ ಭಾಷೆಯ ಸಿನಿ ಅಭಿಮಾನಿಗಳು ದಿಯಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ಚಿತ್ರದ ರಿಮೇಕ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ.

  ‍ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ‍ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ

  ನಿರ್ಮಾಪಕರಿಗೆ ಬರ್ತಿವೆ 60ಕ್ಕೂ ಹೆಚ್ಚು ಫೋನ್ ಕಾಲ್ಸ್

  ನಿರ್ಮಾಪಕರಿಗೆ ಬರ್ತಿವೆ 60ಕ್ಕೂ ಹೆಚ್ಚು ಫೋನ್ ಕಾಲ್ಸ್

  ನಿರ್ದೇಶಕ ಅಶೋಕ್ ಸಾರಥ್ಯದಲ್ಲಿ ಮೂಡಿಬಂದ ದಿಯಾ ಸಿನಿಮಾಗೆ ಕೃಷ್ಣ ಚೈತನ್ಯ ಬಂಡವಾಳ ಹೂಡಿದ್ದಾರೆ. ಈಗಾಗಲೆ ಬೇರೆ ಬೇರೆ ಭಾಷೆಯಿಂದ ರಿಮೇಕ್ ರೈಟ್ಸ್ ಗಾಗಿ ಫೋನ್ ಮಾಡುತ್ತಿದ್ದಾರಂತೆ. ಈ ಬಗ್ಗೆ ಆಂಗ್ಲ ಪತ್ರಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ, "ಈಗಾಗಲೆ ನಿರ್ಮಾಪಕರಿಗೆ ಬೇರೆ ಬೇರೆ ಭಾಷೆಯಿಂದ 60ಕ್ಕು ಹೆಚ್ಚು ಫೋನ್ ಕಾಲ್ಸ್ ಬಂದಿವೆ" ಎಂದು ಹೇಳಿದ್ದಾರೆ.

  ಡಬ್ಬಿಂಗ್ ರೈಟ್ಸ್ ಗೂ ಬೇಡಿಕೆ

  ಡಬ್ಬಿಂಗ್ ರೈಟ್ಸ್ ಗೂ ಬೇಡಿಕೆ

  ಆದರೆ ಇನ್ನೂ ಕೂಡ ಯಾವ ಭಾಷೆಗೂ ರಿಮೇಕ್ ರೈಟ್ಸ್ ಸೇಲ್ ಆಗಿಲ್ಲವಂತೆ. ಸದ್ಯ ಮಾತುಕತೆ ಹಂತದಲ್ಲಿದೆಯಂತೆ. ಅದರಲ್ಲೂ ತೆಲುಗು ಸಿನಿಮಾರಂಗದಿಂದ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ರಿಮೇಕ್ ರೈಟ್ಸ್ ಮಾತ್ರವಲ್ಲದೆ, ಡಬ್ಬಿಂಗ್ ರೈಟ್ಸ್ ಕೂಡ ಬೇಡಿಕೆ ಹೆಚ್ಚಾಗಿದೆಯಂತೆ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಎನ್ನುವುದು ದಿಯಾ ಸಿನಿಮಾತಂಡ ಹೇಳುತ್ತಿದೆ.

  ಖುಷಿ, ಪೃಥ್ವಿ, ದೀಕ್ಷಿತ್ ಅಭಿನಯದ ಸಿನಿಮಾ

  ಖುಷಿ, ಪೃಥ್ವಿ, ದೀಕ್ಷಿತ್ ಅಭಿನಯದ ಸಿನಿಮಾ

  ದಿಯಾ ಸಿನಿಮಾದ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಮನಗೆದ್ದಿವೆ. ನಟಿ ಖುಷಿ, ಪೃಥ್ವಿ ಅಂಬರ್ ಮತ್ತು ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೆ ಹಾಡುಗಳು, ಫೈಟಿಂಗ್ ಇಲ್ಲದೆ ಮೂಡಿ ಬಂದಿರುವ ದಿಯಾ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ. ಈಗ ಬೇರೆ ಭಾಷೆಯವರನ್ನು ರಂಜಿಸಲು ತಯಾರಿ ನಡೆಸುತ್ತಿದೆ.

  English summary
  Kannada Super hit Dia movie demand for remake rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X