ತೆಲುಗಿನ ಸ್ಟಾರ್ ನಟನಿಗೆ 'ಕೆಜಿಎಫ್' ನಿರ್ದೇಶಕ ಆಕ್ಷನ್ ಕಟ್?
Recommended Video
ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ ಸಿನಿಮಾ, ಇಡೀ ದೇಶವೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಕೆಜಿಎಫ್'. ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್ ನ ಈ ಸಿನಿಮಾ ದೇಶ-ವಿದೇಶದಲ್ಲಿ ಭರ್ಜರಿ ಸದ್ದು ಮಾಡಿತ್ತು. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಚಿತ್ರವನ್ನು ನೋಡಿ ಕೊಂಡಾಡಿದ್ದರು.
ಈಗ 'ಕೆಜಿಎಪ್' ಚಿತ್ರದ ಪಾರ್ಟ್-2 ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಆದ್ರೆ ಇದರ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಕಡೆಯಿಂದ ಒಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ 'ಕೆಜಿಎಫ್ ಪಾರ್ಟ್-2' ಚಿತ್ರೀಕರಣ ನಡುವೆಯೆ ಮತ್ತೊಂದು ಸಿನಿಮಾಗೆ ತಯಾರಿ ಮಾಡುತ್ತಿದ್ದಾರಂತೆ.
ಇದರಲ್ಲೇನಿದೆ ವಿಶೇಷ ಎಂದು ಹೇಳುತ್ತೀರಾ. ಇಲ್ಲೇ ಇರುವುದು ವಿಶೇಷ. ಯಾಕಂದ್ರೆ ಪ್ರಶಾಂತ್ ನೀಲ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರವುದು ತೆಲುಗಿನ ಸ್ಟಾರ್ ನಟ ಜ್ಯ.ಎನ್ ಟಿ ಆರ್ ಅವರಿಗಂತೆ. ಈ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇತ್ತೀಚಿಗಷ್ಟೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಜ್ಯೂನಿಯರ್ ಎನ್ ಟಿ ಆರ್ ಅವರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ ಒಂದು ಲೈನ್ ಕಥೆಯನ್ನು ಜ್ಯೂ.ಎನ್ ಟಿ ಆರ್ ಗೆ ಹೇಳಿದ್ದಾರಂತೆ.

ಪ್ರಶಾಂತ್ ನೀಲ್ 'ಕೆಜಿಎಫ್' ಚಿತ್ರದಲ್ಲಿ ಮಾಡಿದ ಕೆಲಸ ಮತ್ತು ನಿರೂಪಣಾ ಶೈಲಿಗೆ ಜ್ಯೂ.ಎನ್ ಟಿ ಆರ್ ಫಿದಾ ಆಗಿದ್ದಾರಂತೆ. ಹಾಗಾಗಿ ಪ್ರಶಾಂತ್ ಜೊತೆ ಕೆಲಸ ಮಾಡಲು ಜ್ಯೂ.ಎನ್ ಟಿ ಆರ್ ಅವರ ಆಸೆಯಂತೆ. ಸದ್ಯ ಜ್ಯೂ.ಎನ್ ಟಿ ಆರ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಪ್ರಶಾಂತ್ ನೀಲ್ ಸಹ 'ಕೆಜಿಎಫ್ ಪಾರ್ಟ್-2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಇವರಿಬ್ಬರ ಕಮಿಟ್ ಮೆಂಟ್ಸ್ ಮುಗಿದ ಮೇಲೆ ಪ್ರಶಾಂತ್ ಮತ್ತು ಜ್ಯೂ. ಎನ್ ಟಿ ಆರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಎಲ್ಲವು ಅಂದುಕೊಂಡಂತೆ ಆದ್ರೆ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. ಆದ್ರೆ ಈ ಬಗ್ಗೆ ಇನ್ನು ಪ್ರಶಾಂತ್ ನೀಲ್ ಆಗಲಿ ಅಥವಾ ಜ್ಯೂ.ಎನ್ ಟಿ ಆರ್ ಆಗಲಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಪ್ರಸಾಂತ್ ನೀಲ್ ಅವರು ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅವರಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.


Click it and Unblock the Notifications











