ಐಶ್ವರ್ಯ ರೈ ಮಗಳು ಶಿವಣ್ಣ ಕಾಲಿಗೆ ಬಿದ್ದಿದ್ದೇಕೆ ? ವಿಶ್ವಸುಂದರಿ ಬಗ್ಗೆ ಹೇಳಿದ್ದೇನು ಭೈರತಿ ರಣಗಲ್..?

ಐಶ್ವರ್ಯ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ ಬಾಲ್ಯ ಮತ್ತು ಯವ್ವನವನ್ನು ಕಿತ್ತುಕೊಳ್ಳುತ್ತಿದ್ದಾರೆ ಅನ್ನುವುದು ಹಲವರ ವಾದ. ಆರಾಧ್ಯಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡದೇ ಸದಾ ಕಾಲ ಆಕೆಯನ್ನು ತಮ್ಮ ಸೆರಗಿನಡಿಯಲ್ಲಿಯೇ ಐಶ್ವರ್ಯ ಕಟ್ಟಿಕೊಂಡು ತಿರುಗುವುದರಿಂದ, ಆರಾಧ್ಯ ಮನಸಿನ ಮೇಲೆ ಪರಿಣಾಮ ಬೀರುತ್ತೆ,ಅಮ್ಮನ ಬದುಕು ಆಕೆಯ ಬದುಕಿನ ಮೇಲೆ ಪ್ರಭಾವ ಬೀರುತ್ತೆ ಎಂದು ಅನೇಕರು ಇಲ್ಲಿಯವರೆಗೆ ಅಪಸ್ವರ ತೆಗೆದಿದ್ದಾರೆ. ಐಶ್ವರ್ಯ ರೈ ವಿರುದ್ಧ ಕಿಡಿಯನ್ನು ಕಾರಿದ್ದಾರೆ.

ಆದರೆ ಈ ಅಭಿಪ್ರಾಯಗಳೆ ಏನೇ ಇರಲಿ ಐಶ್ವರ್ಯ ರೈ ತಮ್ಮ ಮಗಳಿಗೆ ಸಂಸ್ಕಾರ-ಆಚಾರ-ವಿಚಾರ-ಸಂಪ್ರದಾಯಗಳನ್ನು ಹೇಳಿ ಕೊಟ್ಟಿದ್ದಾರೆ. ಬದುಕು ಮತ್ತು ಭ್ರಮೆಯ ನಡುವೆ ಇರುವ ವ್ಯತ್ಯಾಸಗಳನ್ನು ಕೂಡ ಹೇಳಿದ್ದಾರೆ ಎನ್ನುವುದನ್ನು ಯಾರು ಅಲ್ಲಗೆಳೆಯುವಂತಿಲ್ಲ. ಇದಕ್ಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವೇ ಸಾಕ್ಷಿ.

Kannada Super Star Dr Shiva Raj Kumar Has All Praise For Aishwarya Rai And Her Daugter Aaradhya

ಹೌದು, ನಿಮಗೆ ನೆನಪಿರಬೇಕು.. ಸೆಪ್ಟೆಂಬರ್‌ನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ-ತೆಲುಗು-ತಮಿಳು ಮತ್ತು ಮಲಯಾಳಂ ಭಾಷೆಯ ಅನೇಕ ತಾರೆಯರು ಭಾಗಿಯಾಗಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆಯಲು ಐಶ್ವರ್ಯ ರೈ ಕೂಡ ತಮ್ಮ ಮಗಳು ಆರಾಧ್ಯ ಜೊತೆ ಬಂದಿದ್ದರು. ಇದೇ ಸಮಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಐಶ್ವರ್ಯ ರೈ, ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದರು. ಆ ಕಡೆಯಿಂದ ಶಿವಣ್ಣ ಬರುತ್ತಿದ್ದರು. ಆಗ ವೇದಿಕೆಯ ಮುಂಭಾಗದಲ್ಲಿ ಎದುರಾದ ವಿಕ್ರಮ್ ಅವರನ್ನು ಶಿವಣ್ಣ ಮಾತನಾಡಿಸಿದರು. ಇದನ್ನು ಅರಿಯದೇ ಐಶ್ವರ್ಯ ರೈ ಬಚ್ಚನ್ ಸ್ವಲ್ಪ ಮುಂದೆ ಹೋದರು. ಆ ನಂತರ ಹಿಂದೆ ತಿರುಗಿ ನೋಡಿದ ಐಶ್ವರ್ಯ ರೈ, ಡಾ.ಶಿವರಾಜ್ ಕುಮಾರ್ ಅವರನ್ನು ಕಂಡು ಮರಳಿ ಹಿಂದೆ ಬಂದು ಮಾತನಾಡಿಸಿದ್ದರು. ಉಭಯ ಕುಶಲೋಪರಿ ವಿಚಾರಿಸಿದ್ದರು. ತಮ್ಮ ಮಗಳು ಆರಾಧ್ಯಳನ್ನೂ ಕೂಡ ಡಾ.ಶಿವರಾಜ್ ಕುಮಾರ್ ಅವರಿಗೆ ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದರು.

ಐಶ್ವರ್ಯ ರೈ ಅವರ ಮಗಳು ಆರಾಧ್ಯ ಅವರ ಈ ನಡೆ ಆಗ ಕನ್ನಡಿಗರ ಹೃದಯವನ್ನು ಗೆದ್ದಿತ್ತು.ಸಂಸ್ಕಾರ ಮತ್ತು ಶಿವಣ್ಣ ಅವರ ವಿನಯವಂತಿಕೆಯ ಕುರಿತು ಚರ್ಚೆಯಾಗಿತ್ತು. ಅಷ್ಟು ದೊಡ್ಡ ಸ್ಟಾರ್ ಆದರೂ ಮೈ ಮರಿಯದೇ ತಮ್ಮ ಮಗಳಿಗೆ ಸಂಸ್ಕಾರ-ವಿನಯವನ್ನು ಕಲಿಸಿಕೊಟ್ಟಿದ್ದಕ್ಕೆ ಐಶ್ವರ್ಯ ರೈ ಅವರನ್ನು ಅನೇಕರು ಮೆಚ್ಚಿಕೊಂಡಿದ್ದರು. ಬಾಯ್ತುಂಬ ಹೊಗಳಿದ್ದರು. ಈಗ ಆ ದಿನದ ಕುರಿತು ಶಿವಣ್ಣ ಮಾತನಾಡಿದ್ದಾರೆ. ಐಶ್ವರ್ಯ ರೈ ಅವರನ್ನು ನೋಡಿದರೆ ಪೂಜ್ಯ ಭಾವನೆ ಬರುತ್ತೆ ಎಂದಿದ್ದಾರೆ.

ಹೌದು, ವಿಶ್ವವಾಣಿ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಿವಣ್ಣ ಸೌಂದರ್ಯ ಅವರ ಮುಖದಲ್ಲಿ ಮಾತ್ರ ಇಲ್ಲ, ಅವರು ಬೆಳೆಸಿದ ರೀತಿಯಲ್ಲಿ ಇದೆ ಎಂದಿದ್ದಾರೆ. ಮುಂದುವರೆದು ಐಶ್ವರ್ಯ ರೈ ಅಂದರೆ ಭಾರತಕ್ಕೊಂದು ದೊಡ್ಡ ಹೆಸರು, ಇಡೀ ವಿಶ್ವಕ್ಕೆ ಸುಂದರಿ ಅವರು. ಅಂತಹವರು ಮಗಳಿಗೆ ಆ ತರಹದ ಸಂಸ್ಕ್ರತಿಯನ್ನು ಕಲಿಸಿದ್ದಾರೆ ಅಂದರೆ ನಿಜಕ್ಕೂ ಖುಷಿ ವಿಚಾರ ಎಂದಿದ್ದಾರೆ.

ಇನ್ನೂ ಅವತ್ತು ಆರಾಧ್ಯ ನನ್ನ ಕಾಲು ಮುಗಿಯುತ್ತಾಳೆ ಎಂದು ನಾನು ನಿರೀಕ್ಷೆಯನ್ನೇ ಮಾಡಿರಲಿಲ್ಲ ಎಂದು ಹೇಳಿರುವ ಶಿವಣ್ಣ ಐಶ್ವರ್ಯ ಅವರು ಯಾವತ್ತೇ ಸಿಕ್ಕರೂ ಕೂಡ ತುಂಬಾ ಗೌರವ ಮತ್ತು ಆದರಿಂದ ಮಾತನಾಡುತ್ತಾರೆ ಎಂದಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವುದಕ್ಕೆ ಐಶ್ವರ್ಯ ರೈ ಅವರೇ ಅತ್ಯುತ್ತಮ ಸಾಕ್ಷಿ ಎಂದು ಕೂಡ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ. ಇನ್ನು ಅವರು ಯಾರ ಸೊಸೆ, ಯಾವ ಐರಿಂದ ಹೋಗಿರೋದು, ಅವೆಲ್ಲ ಕೂಡ ಇಲ್ಲಿ ಲೆಕ್ಕಕ್ಕೆ ಬರುತ್ತೆ ಎಂದಿರುವ ಶಿವಣ್ಣ ಅವರನ್ನು ನೋಡಿದರೆ ದೈವಿಕ ಭಾವನೆ ಬರುತ್ತೆ ಎಂದು ಹೇಳಿದ್ದಾರೆ. ನನ್ನ ಹೃದಯಕ್ಕೆ ಆ ಘಟನೆ ಅವತ್ತು ತುಂಬಾ ಟಚ್ ಆಯ್ತು ಎಂದು ಹೇಳಿದ್ದಾರೆ ಶಿವಣ್ಣ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X