»   » ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ ಲಂಬು ನಾಗೇಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ ಲಂಬು ನಾಗೇಶ್ ಇನ್ನಿಲ್ಲ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಲಂಬು ನಾಗೇಶ್ ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ನಿನ್ನೆ (ಸೆಪ್ಟಂಬರ್ 1) ರಾತ್ರಿ 8 ಗಂಟೆ ಸುಮಾರಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಖ್ಯಾತಿಗಳಿಸಿಕೊಂಡಿದ್ದರು. 1992 ರಲ್ಲಿ ರಿಲೀಸ್ ಆದ 'ಪೃಥ್ವಿರಾಜ್' ಸಿನಿಮಾದ ಮೂಲಕ ಲಂಬು ನಾಗೇಶ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದರು. ದೇವರಾಜ್ ಅಭಿನಯದ 'ಹುಲಿಯಾ', ಸಾಯಿಕುಮಾರ್ ನಟನೆಯ 'ಪೋಲೀಸ್ ಸ್ಟೋರಿ-2' ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಪ್ರಮುಖ ಪಾತ್ರದಲ್ಲಿ ಲಂಬು ನಾಗೇಶ್ ಕಾಣಿಸಿಕೊಂಡಿದ್ದರು.

Kannada supporting actor Lambu Nagesh passed away

ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕನ್ನಡದ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲಂಬು ನಾಗೇಶ್ ನಟಿಸಿದ್ದು, ಪೋಷಕ ನಟನಾಗಿ ಹಾಗೂ ಖಳ ನಟನಾಗಿ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.

Kannada supporting actor Lambu Nagesh passed away

ಹನುಮಂತನಗರದ ನಿವಾಸದಲ್ಲಿ ಲಂಬು ನಾಗೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರ ಹುಟ್ಟೂರು ಆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

English summary
Kannada supporting actor Lambu Nagesh passed away on Friday, 1st September in Bengaluru. He was suffering from liver problem. He had acted more than 100 movies in kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada